For Quick Alerts
ALLOW NOTIFICATIONS
For Daily Alerts

ಚಿರನಿದ್ರೆಗೆ ಜಾರಿದ ಆ ಕಾಲದ ಮಾದಕ ನಟಿ

By * ಜೇಮ್ಸ್ ಮಾರ್ಟಿನ್

ಆಸ್ಕರ್ ವಿಜೇತ ಪ್ರತಿಭಾವಂತ ನಟ ರಾಬಿನ್ ವಿಲಿಯಮ್ಸ್ ಸಾವಿನ ನೋವನ್ನು ಅಭಿಮಾನಿಗಳು ಅರಗಿಸಿಕೊಳ್ಳುವ ಮುನ್ನವೇ ಆ ಕಾಲದ ಸುಂದರಿ ಪ್ರತಿಭಾವಂತ ನಟಿ ಲಾರೆನ್ ಬಾಕಾಲ್ ಅವರು ಮೃತರಾಗಿರುವ ಸುದ್ದಿ ಬಂದಿದೆ. ಅಕಾಡೆಮಿ ಪ್ರಶಸ್ತಿ ವಿಜೇತ ಲಾರೆನ್ ಅವರು ನ್ಯೂಯಾರ್ಕಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ.

ಲಾರೆನ್ ಅವರು ಹೃದಯಾಘಾತದಿಂದ ಮಂಗಳವಾರ ಡಕೋಟಾದ ಮ್ಯಾನ್ ಹಟನ್ ಅಪಾರ್ಟ್ಮೆಂಟ್ ನಲ್ಲಿ ಸಾವನ್ನಪ್ಪಿದ್ದಾರೆ. ಆಕೆಯ ಸಾವಿನ ಸುದ್ದಿಯನ್ನು ಆಕೆಯ ಒಂದು ಕಾಲದ ಹಿಟ್ ಜೋಡಿ, ಪತಿ ಕಾಸಾಬ್ಲಾಂಕಾ ಖ್ಯಾತಿ ನಟ ಹಂಫ್ರಿ ಬೊಗಾರ್ಟ್ ಎಸ್ಟೇಟ್ ಅವರ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಮೊದಲಿಗೆ ಪ್ರಕಟಿಸಲಾಯಿತು.

ಮಾಡೆಲಿಂಗ್ ಕ್ಷೇತ್ರದಿಂದ ಲಾರೆನ್ ಅವರು 17ನೇ ವಯಸ್ಸಿಗೆ 'ಹೌ ಟು ಮ್ಯಾರಿ ಎ ಮಿಲಿಯನೇರ್', ಸೆಕ್ಸ್ ಅಂಡ್ ದಿ ಸಿಂಗಲ್ ಗರ್ಲ್, ಡಿಸೈನಿಂಗ್ ವುಮೆನ್ ಮುಂತಾದ ಹಿಟ್ ಚಿತ್ರಗಳಲ್ಲಿ ಪ್ರಧಾನ ಭೂಮಿಕೆ ನಿಭಾಯಿಸಿದ್ದರು. ಮಾದಕ ನೋಟ, ಮೈಮಾಟ, ಹಾಗೂ ಆಕರ್ಷಕ ದನಿ ಈಕೆಯನ್ನು ಬಹುಬೇಗ ಜನಪ್ರಿಯಗೊಳಿಸಿತು. [ಆಸ್ಕರ್ ವಿಜೇತ ನಟ ಆತ್ಮಹತ್ಯೆಗೆ ಶರಣು]

ಹರ್ಪರ್ಸ್ ಬಜಾರ್ ನ ಮುಖಪುಟಕ್ಕಾಗಿ 19ನೇ ವಯಸ್ಸಿನಲ್ಲಿ ಈಕೆ ನೀಡಿದ ಫೋಟೋ ಶೂಟ್ ಇಂದಿಗೂ ಸಕತ್ ಹಾಟ್ ಮಗಾ ಎನ್ನುವವರಿದ್ದಾರೆ. 40ರ ದಶಕದಲ್ಲಿ ದಿ ಬಿಗ್ ಸ್ಲೀಪ್, ಕೀ ಲಾರ್ಗೊ ಹಾಗೂ ಡಾರ್ಕ್ ಪ್ಯಾಸೇಜ್ ಚಿತ್ರಗಳಲ್ಲಿ ಪತಿ ಬೊಗಾರ್ಟ್ ಜತೆ ಮನೋಜ್ಞ ಅಭಿನಯ ನೀಡಿದ ಲಾರೆನ್ 44ರಲ್ಲಿ 'ಟು ಹ್ಯಾವ್ ಅಂಡ್ ಹ್ಯಾವ್ ನಾಟ್' ಚಿತ್ರದ ನಂತರ ಮದುವೆ ಬಂಧನಕ್ಕೊಳಲ್ಪಟ್ಟರು. ಆಕೆ ಲಾರೆನ್ ಗೆ 19 ಹಾಗೂ ಬೊಗಾರ್ಟ್ ಗೆ 44 ವರ್ಷ ವಯಸ್ಸು.

Post by Humphrey Bogart Estate.

ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪ್ರತಿಭಾವಂತ ನಟ ಬೋಗಾರ್ಟ್ 57ನೇ ವಯಸ್ಸಿನಲ್ಲಿ ಸಾವನ್ನಪ್ಪುವ ತನಕ ಲಾರೆನ್ ಜೋಡಿಯಾಗೇ ಇದ್ದರು. ಇಬ್ಬರ ದಾಂಪತ್ಯ ಕಂಡು ಹಾಲಿವುಡ್ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿತ್ತು. ಅಮೆರಿಕದ ಸರ್ವಕಾಲಿಕ 25 ಸ್ಟಾರ್ ಗಳ ಪಟ್ಟಿಯಲ್ಲಿ ಲಾರೆನ್ 20ನೇ ಸ್ಥಾನ ಪಡೆದುಕೊಂಡರೆ, ಬೋಗಾರ್ಟ್ ಮೊದಲ ಸ್ಥಾನ ಪಡೆದ ನಟನಾಗಿದ್ದು ವಿಶೇಷ.

English summary
We were not yet over the shock of the tragic death of Oscar winning Robin Williams when another Hollywood legend, Lauren Bacall passed away on Tuesday. The Academy Honorary Award winning actress apparently died after suffering a heart stroke at her home in New York.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X