ವರ್ಷಕ್ಕೊಮ್ಮೆ ಮಗಳ ಕನ್ಯತ್ವ ಪರೀಕ್ಷಿಸ್ತಾನಂತೆ ಈ ಖ್ಯಾತ Rap ಸಿಂಗರ್

ಅಮೆರಿಕದ ಖ್ಯಾತ ರ್ಯಾಪ್ ಸಿಂಗರ್ ಮತ್ತು ನಟ ಟಿಐ ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಗಳ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಭಾರಿ ವಿರೋದ ವ್ಯಕ್ತವಾಗುತ್ತಿದೆ. ವಿಭಿನ್ನ ಗಾನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ಅಮೆರಿಕದ ಈ ಗಾಯಕ ಟಿಐ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಗಳ ಕನ್ಯತ್ವ ಪರೀಕ್ಷೆ ಬಗ್ಗೆ ಮಾತನಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಂದರ್ಶನದಲ್ಲಿ ಟಿಐ ಮತ್ತು ಮಗಳು ಡಿಜಾ ಹ್ಯಾರಿಸ್ ಸಂಬಂಧದ ಬಗ್ಗೆ ಮಾತನಾಡುತ್ತ ಮಗಳನ್ನು ಪ್ರತಿವರ್ಷ ಕನ್ಯತ್ವ ಪರೀಕ್ಷೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಮಗಳ ಜೊತೆ ಲೈಂಗಿಕ ಸಂಬಂಧದ ಬಗ್ಗೆ ಮಾತನಾಡುತ್ತೀರಾ ಎಂದು ಕೇಳಿದ ಪ್ನಶ್ನೆಗೆ ಟಿಐ ಕನ್ಯತ್ವ ಪರೀಕ್ಷೆ ಮಾಡಿಸುವುದಾಗಿ ಹೇಳಿದ್ದಾರೆ.

ಟಿಐ ಮಗಳು ಡಿಜಾ ಹ್ಯಾರಿಸ್ ಗೆ 18 ವರ್ಷ. ಡಿಜಾ ಸದ್ಯ ಕಾಲೇಜಿನಲ್ಲಿ ಒದುತ್ತಿದ್ದಾರೆ. ಡಿಜಾ ಹ್ಯಾರಿಸ್ ಅವರನ್ನು ಪ್ರತಿವರ್ಷ ಸ್ತ್ರೀ ರೋಗ ತಜ್ಞರ ಬಳಿ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸುತ್ತಾರಂತೆ. ಮಗಳ 16 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ಸೆಲೆಬ್ರೇಶನ್ ಮತ್ತು ಪಾರ್ಟಿ ನಂತರ, "ನಾಳೆ 9.30ಕ್ಕೆ ಡಾಕ್ಟರ್ ಬಳಿ ಹೋಗೋಣ" ಎಂದು ಬರೆದು ಬಾಗಿಲ ಬಳಿ ಇಟ್ಟಿದ್ದರಂತೆ. ಅದರಂತೆ ಮರುದಿನ ಸ್ತ್ರಿ ರೋಗ ತಜ್ಞರ ಬಳಿ ಹೋಗಿದ್ದಾರಂತೆ.

American Rap Singer TI Controversial Statement About His Daughter

"ಬೈಕ್ ಓಡಿಸುವುದರಿಂದ, ಕುದುರೆ ಸವಾರಿ ಮಾಡುವುದರಿಂದ, ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ಮತ್ತು ಬೇರೆ ಬೇರೆ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಕನ್ಯತ್ವದ ಪೊರೆ ತೆರೆದುಕೊಳ್ಳುತ್ತೆ ಎಂದು ಡಾಕ್ಟರ್ ಹೇಳಿದ್ರಂತೆ. ಆದರೆ ನಾನು ವೈದ್ಯರ ಬಳಿ ಹೇಳಿದೆ, ನನ್ನ ಮಗಳು ಕುದುರೆ ಸವಾರಿ, ಬೈಕ್ ಓಡಿಸುವುದು ಮತ್ತು ಯಾವುದೆ ಕ್ರೀಡೆಯಲ್ಲಿ ಭಾಗವಹಿಸುವುದಿಲ್ಲ, ಸರಿಯಾಗಿ ಪರೀಕ್ಷೆ ಮಾಡಿ ಎಂದು ಹೇಳಿದೆ. ಪರೀಕ್ಷೆ ಮಾಡಿದರು. ನನ್ನ ಮಗಳು 18ನೇ ವಯಸ್ಸಿನಲ್ಲಿಯೂ ವರ್ಜಿನ್ ಆಗಿಯೆ ಇದ್ದಾಳೆ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

American Rap Singer TI Controversial Statement About His Daughter

ಟಿಐ ಅವರ ಈ ವಿವಾದಾತ್ಮಕ ಮಾತು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೇರಿಕದ ಅನೇಕ ರ್ಯಾಪ್ ಸಿಂಗರ್ಸ್ ಕೂಡ ಟಿಐ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
American Rap singer TI Controversial statement about his daughter. TI forcing 18 year old daughter to undergo annual 'virginity test'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X