Amy Jackson: ಮದ್ವೆಗೂ ಮೊದ್ಲೆ ತಾಯಿಯಾಗಿದ್ದ ಆಮಿ ಜಾಕ್ಸನ್: ಹೊಸ ಪ್ರಿಯಕರನ ಜೊತೆ ವ್ಯಾಲೆಂಟೈನ್ಸ್ ಡೇ
ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ನಟಿ ಆಮಿ ಜಾಕ್ಸನ್ ಹೊಸ ಪ್ರಿಯಕರನನ್ನು ಪರಿಚಯಿಸಿದ್ದಾರೆ. ಬ್ರಿಟಿಷ್ ಬ್ಯೂಟಿ ಕನ್ನಡ ಸೇರಿದಂತೆ ತೆಲು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜೊತೆ ಆಮಿ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಅದನ್ನು ಈಗ ಅಧಿಕೃತಗೊಳಿಸಿದ್ದಾರೆ. ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲೇ ಜೋಡಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಇದಕ್ಕೂ ಮುನ್ನ 'ದಿ ವಿಲನ್' ಸಿನಿಮಾ ಚೆಲುವೆ ಉದ್ಯಮಿ ಜಾರ್ಜ್ ಪನಯಿಟೊ ಜೊತೆ ಆ್ಯಮಿ ಡೇಟಿಂಗ್ ನಡೆಸಿದ್ದರು. ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದರು. ಮದುವೆಗೂ ಮೊದಲೇ ಆಮಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಆಮಿ - ಜಾರ್ಜ್ ಇಬ್ಬರು ಸೇರಿ ಮಗನಿಗೆ ಆ್ಯಂಡ್ರಿಯಾಸ್ ಎಂದು ಹೆಸರಿಟ್ಟಿದರು. ಡೆಸ್ಟಿನೇಷನ್ ವೆಡ್ಡಿಂಗ್‌ಗೂ ಪ್ಲ್ಯಾನ್ ಮಾಡಿದ್ದರು. ಆದರೆ ಅದಕ್ಕಿಂತ ಕೆಲ ತಿಂಗಳ ಹಿಂದೆ ಕೆಲ ಭಿನ್ನಾಭಿಪ್ರಾಯಗಳಿಂದ ಜೋಡಿ ದೂರಾಗಿತ್ತು.
ಆಮಿ ವ್ಯಾಲೆಂಟೈನ್ಸ್ ಡೇ ಪೋಸ್ಟ್
ಸದ್ಯ ಎಡ್ ಜೊತೆಗಿನ ಒಂದಷ್ಟು ರೊಮ್ಯಾಂಟಿಕ್ ಫೋಟೊಗಳನ್ನ ಶೇರ್ ಮಾಡಿರುವ ನಟಿ ಆಮಿ, "ನಿನ್ನೊಟ್ಟಿಗೆ ನನ್ನ ಜೀವನ. ಹ್ಯಾಪಿ ವ್ಯಾಲೆಂಟೈನ್ಸ್ ಬೇಬಿ. ಹೊಟ್ಟೆ ಹುಣ್ಣಾಗಿಸುವಂತಹ ನಗು ಹಾಗೂ ಅನಂತ ಪ್ರೀತಿಗೆ ನಾನು ಕೃತಜ್ಞಳಾಗಿದ್ದೇನೆ" ಎಂದು ವಿಲನ್ ಬ್ಯೂಟಿ ಬರೆದುಕೊಂಡಿದ್ದಾರೆ. ಆಮಿ ಪೋಸ್ಟ್‌ಗೆ ಲಕ್ಷ ಲಕ್ಷ ಕಾಮೆಂಟ್ಸ್ ಲೈಕ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಆಮಿ- ಎಡ್ ಲವ್ ಸ್ಟೋರಿ
ವರದಿಗಳ ಪ್ರಕಾರ ಈ ಜೋಡಿ 2021ರ ರೆಡ್ ಸೀ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭೇಟಿ ಆಗಿದ್ದರು. ಆದರೆ ಬಹಳ ಬೇಗ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. 2022 ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಜೋಡಿ ಕಾಣಿಸಿಕೊಂಡಿತ್ತು. ನಂತರ ಹೊಸ ಪ್ರಿಯಕರನ ಹುಟ್ಟುಹಬ್ಬವನ್ನು ತಮ್ಮ ಫ್ಯಾಮಿಲಿ ಜೊತೆ ಆ್ಯಮಿ ಸೆಲೆಬ್ರೇಟ್ ಮಾಡಿದ್ದರು. ಇವರಿಬ್ಬರ ರಿಲೇಶಷನ್‌ಶಿಪ್‌ನಲ್ಲಿ ಇರೋದಾಗಿ ಬ್ರಿಟನ್ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇತ್ತು.

ಭಾರತದ ಚಿತ್ರಗಳಲ್ಲಿ ಆಮಿ
ತಮಿಳಿನ 'ಮದ್ರಾಸಿಪಟ್ಟಿಣಂ' ಮೂಲಕ ಭಾರತದ ಸಿನಿಮಾಗಳಲ್ಲಿ ಆ್ಯಮಿ ನಟಿಸಲು ಆರಂಭಿಸಿದರು. ಮುಂದೆ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಳು. ತಮಿಳಿನ 'ತಾಂಡವಂ', ತೆಲುಗಿನ 'ಯವಡು' ಸಿನಿಮಾಗಳಲ್ಲಿ ಗ್ಲಾಮರ್ ಡಾಲ್ ಆಗಿ ಆಕೆ ರಂಗೇರಿಸಿದರು. 'ಸಿಂಗ್ ಈಸ್ ಬ್ಲಿಂಗ್', 'ಅಭಿನೇತ್ರಿ', 'ತೆರಿ', 'ಫೀಕ್ರಿ ಅಲಿ', 'ದೇವಿ' ಆ್ಯಮಿ ನಟಿಸಿದ ಕೆಲ ಚಿತ್ರಗಳು.

ಕಿಚ್ಚನಿಗೆ ಜೋಡಿ ಆಗಿದ್ದ ಆಮಿ
ಕನ್ನಡದ 'ದಿ ವಿಲನ್' ಚಿತ್ರದಲ್ಲಿ ಸೀತಾ ಎನ್ನುವ ಪಾತ್ರದಲ್ಲಿ ಆಮಿ ಜಾಕ್ಸನ್ ನಟಿಸಿದ್ದರು. ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದ ಈ ಮಲ್ಟಿಸ್ಟಾರರ್ ಸಿನಿಮಾ 4 ವರ್ಷಗಳ ಹಿಂದೆ ತೆರೆಗಪ್ಪಳಿಸಿತ್ತು. ಕಿಚ್ಚು ಸುದೀಪ್ ಜೊತೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ನಟಿಸಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು. ಇನ್ನು ರಜಿನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ '2.0' ಆಮಿ ಭಾರತದಲ್ಲಿ ನಟಿಸಿದ ಕೊನೆಯ ಸಿನಿಮಾ.


Click it and Unblock the Notifications











