For Quick Alerts
  ALLOW NOTIFICATIONS  
  For Daily Alerts

  ಮಾಜಿ ಪತಿ ಬ್ರಾಡ್ ಪಿಟ್ ವಿರುದ್ಧ ಗಂಭೀರ ಆರೋಪ ಮಾಡಿದ ಆಂಜಲೀನಾ ಜೂಲಿ

  |

  ಹಾಲಿವುಡ್‌ನ ತಾರಾ ಜೋಡಿಯಾಗಿದ್ದ ಬ್ರಾಡ್ ಪಿಟ್ ಹಾಗೂ ಆಂಜಲೀನಾ ಜೋಡಿ ವಿಚ್ಛೇಧನ ಪಡೆದ ಬಳಿಕ ಪರಸ್ಪರ ವೈರಿಗಳಂತೆ ವರ್ತಿಸುತ್ತಿದ್ದು, ಪರಸ್ಪರರನ್ನು ಮಣಿಸಲು ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ.

  ಕೆಲವು ದಿನಗಳ ಹಿಂದೆಯಷ್ಟೆ ಆಂಜಲೀನಾ ಜೂಲಿ ಸಂಸ್ಥೆಯು ಬ್ರಾಡ್ ಪಿಟ್‌ ವಿರುದ್ಧ ನಂಬಿಕೆ ದ್ರೋಹ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು, ಇದೀಗ ಸ್ವತಃ ನಟಿ ಆಂಜಲೀನಾ ಜೂಲಿ ಬಹು ಗಂಭೀರ ಪ್ರಕರಣವನ್ನು ಮಾಜಿ ಪತಿಯ ವಿರುದ್ಧ ಹೊರಸಿದ್ದಾರೆ.

  ಹಾಲಿವುಡ್‌ನ ಖ್ಯಾತ ಮೋಜೊ ಯುಟ್ಯೂಬ್ ಚಾನೆಲ್‌ನಲ್ಲಿ ಫೀಚರ್ ಆದ ಭಾರತದ ಏಕೈಕ ಚಿತ್ರ RRR! ಹಾಲಿವುಡ್‌ನ ಖ್ಯಾತ ಮೋಜೊ ಯುಟ್ಯೂಬ್ ಚಾನೆಲ್‌ನಲ್ಲಿ ಫೀಚರ್ ಆದ ಭಾರತದ ಏಕೈಕ ಚಿತ್ರ RRR!

  ಆಂಜೆಲಿನಾ ಜೂಲಿ ಹಾಗೂ ಬ್ರಾಡ್ ಫಿಟ್‌ ಜಗಳವಾಡುತ್ತಿದ್ದಾಗ ಆ ಜಗಳವನ್ನು ಬಿಡಿಸಲು ಹೋದ ಆಂಜಲೀನಾಳ ಮಕ್ಕಳ ಮೇಲೆ ಬ್ರಾಡ್ ಪಿಟ್‌ ಹಲ್ಲೆ ಮಾಡಿದ್ದಾನೆ ಅಲ್ಲದೆ, ತಮ್ಮ ಮೇಲೆಯೂ ಹಲ್ಲೆ ಮಾಡಿದ್ದಾನೆ ಎಂದು 2016 ರಲ್ಲಿ ನಡೆದ ಘಟನೆಯ ಬಗ್ಗೆ ಆಂಜೆಲಿನಾ ಜೂಲಿ ವಕೀಲರ ಮೂಲಕ ದೂರು ದಾಖಲಿಸಿದ್ದಾರೆ.

  ಖಾಸಗಿ ವಿಮಾನದಲ್ಲಿ ಪ್ರಯಾಣಿಸುವಾಗ ಜಗಳ ಪ್ರಾರಂಭಿಸಿದ ಬ್ರಾಡ್ ಪಿಟ್, ನನ್ನ ತಲೆ ಹಿಡಿದು ಅಲ್ಲಾಡಿಸಿ, ನನ್ನ ಭುಜ ಹಿಡಿದು ಅಲ್ಲಾಡಿಸಿ ಬಾತ್‌ರೂಮ್‌ನ ಗೋಡೆಗೆ ತಳ್ಳಿ ಹಿಡಿದ. ಆ ಬಳಿಕ ಪ್ಲೇನ್‌ನ ಸೀಲಿಂಗ್ ಅನ್ನು ಹಲವು ಬಾರಿ ಗುದ್ದಿದ ಬಳಿಕ ನಾನು ಬಾತ್‌ರೂಮ್‌ನಿಂದ ಹೊರಗೆ ಹೊರಟು ಹೋದೆ'' ಎಂದಿದ್ದಾರೆ.

  ಜಗಳ ಬಿಡಿಸಲು ಬಂದ ನನ್ನ ಒಬ್ಬ ಮಗಳ ಕತ್ತು ಹಿಸಿಕಿದ ಬ್ರಾಡ್ ಪಿಟ್ ಬಳಿಕ ಇನ್ನೊಬ್ಬ ಮಗನ ಮುಖಕ್ಕೆ ಹೊಡೆದಿದ್ದಾರೆ ಎಂದಿದ್ದಾರೆ. ಮಗಳ ಕತ್ತು ಹಿಸುಕಲು ಬ್ರಾಡ್ ಪಿಟ್ ಯತ್ನಿಸಿದಾಗ ಆಂಜೆಲಿನಾ ಜೂಲಿ, ಬ್ರಾಡ್ ಪಿಟ್ ಅನ್ನು ಹಿಂದಿನಿಂದ ಹಿಡಿದುಕೊಂಡು ಬಲಪ್ರಯೋಗ ಮಾಡಿದರಂತೆ. ಹಿಂಬದಿಯಿಂದ ಹಿಡಿದುಕೊಂಡಿದ್ದ ಜೂಲಿಯಿಂದ ಬಿಡಿಸಿಕೊಳ್ಳಲು ಬ್ರಾಡ್ ಪಿಟ್ ಹಿಮ್ಮುಖವಾಗಿ ವಿಮಾನದ ಸೀಟಿನ ಮೇಲೆ ಬಿದ್ದಿದ್ದಾರೆ. ಆಗ ಜೂಲಿಯ ಮೊಣಕೈ ಹಾಗೂ ಬೆನ್ನಿಗೆ ಗಾಯವಾಗಿದೆ ಎಂದು ಆಂಜೆಲಿನಾ ಜೂಲಿ ಪರ ವಕೀಲರು ಹೇಳಿದ್ದಾರೆ.

  ಆಗ ವಿಮಾನದಲ್ಲಿದ್ದ ಎಲ್ಲ ಮಕ್ಕಳು ಒಟ್ಟಾಗಿ ರಕ್ಷಣೆಗೆ ಧಾವಿಸಿದರು. ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಲು ಸಿದ್ಧರಾದರು. ಆಗ ಬ್ರಾಡ್ ಪಿಟ್ ಒಬ್ಬ ಮಗನ ಮುಖಕ್ಕೆ ಪಂಚ್ ಮಾಡಿ ತೀವ್ರವಾಗಿ ಗಾಯಗೊಳಿಸಿದ ಎಂದು ಆಂಜಿನಾ ಜೂಲಿ ವಕೀಲರ ಮೂಲಕವಾಗಿ ನ್ಯಾಯಾಲಯಕ್ಕೆ ಹೇಳಿದ್ದಾರೆ.

  ಆ ಬಳಿಕ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಹೋಗಲು ತಮಗೆ ಹಾಗೂ ತಮ್ಮ ಮಕ್ಕಳಿಗೆ ಬೇರೆ ವಾಹನ ವ್ಯವಸ್ಥೆ ಮಾಡಲು ಮುಂದಾದಾಗ ಆಂಜೆಲಿನಾ ಜೂಲಿಯ ಮೇಲೆ ಕಿರುಚಾಡಿ ಆಕೆಯನ್ನು ಕೆಳಕ್ಕೆ ತಳ್ಳಿ ಬೀಳಿಸಿದರಂತೆ ಬ್ರಾಡ್ ಪಿಟ್. ಆಂಜೆಲಿನಾ ಜೂಲಿ ಈ ಹಿಂದೆ ಒಮ್ಮೆ ಅನಾಮಿಕ ದೂರನ್ನು ದಾಖಲಿಸಿದ್ದರು. ಅದರಲ್ಲಿ ತನ್ನ ಪತಿಯಿಂದ ಪ್ಲೇನ್‌ನಲ್ಲಿ ದೈಹಿಕ ಹಲ್ಲೆಗೆ ಒಳಗಾಗಿದ್ದಾಗಿ ದೂರು ದಾಖಲಿಸಿದ್ದನ್ನು ಸಹ ಜೂಲಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

  English summary
  Angelina Jolie accuses Brad Pitt of choking one of their kids and slapping another in the face. Know more about it.
  Wednesday, October 5, 2022, 18:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X