Just In
Don't Miss!
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾಜಿ ಪತಿ ನೀಡಿದ ಚಿತ್ರವನ್ನು ವಿಶ್ವದಾಖಲೆ ಬೆಲೆಗೆ ಮಾರಿದ ನಟಿ
ಹಾಲಿವುಡ್ ನಟಿ ಆಂಜೆಲಿನಾ ಜೂಲಿ ವಿಶ್ವದ ಶ್ರೀಮಂತ ನಟಿಯರಲ್ಲಿ ಒಬ್ಬರು. ಆಂಜೆಲಿನಾ ಜೂಲಿ ಹಾಗೂ ನಟ ಬ್ರಾಡ್ ಪಿಟ್ ಜೋಡಿ ಹಾಲಿವುಡ್ ನ ಸಖತ್ ಗ್ಲಾಮರಸ್ ಜೋಡಿ ಎಂಬ ಹೆಸರು ಗಳಿಸಿತ್ತು.
ಆಂಜೆಲಿನಾ ಜೂಲಿಯ ಮೂರನೇ ಪತಿ ಬ್ರಾಡ್ ಪಿಟ್ ಉಡುಗೊರೆ ನೀಡಿದ್ದರು ಎನ್ನಲಾದ ಐತಿಹಾಸಿಕ ಮಹತ್ವವುಳ್ಳ ಚಿತ್ರವನ್ನು ಅಂಜೆಲಿನಾ ಜೂಲಿ ಹರಾಜು ಹಾಕಿದ್ದು, ಚಿತ್ರವು ಭಾರಿ ಮೊತ್ತಕ್ಕೆ ಹರಾಜಾಗಿದೆ. ಈ ಹರಾಜು ವಿಶ್ವದಾಖಲೆ ಪಟ್ಟಿಗೆ ಸಹ ಸೇರಿಕೊಂಡಿದೆ.
ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರು ವಿಶ್ವಯುದ್ಧದ ಸಮಯದಲ್ಲಿ ರಚಿಸಿ ಅದನ್ನು ಆಗಿನ ಪ್ರಧಾನಿ ಫ್ರಾಂಕ್ಲಿನ್ ರೂಸ್‌ವೆಲ್ಟ್‌ಗೆ ಉಡುಗೊರೆಯಾಗಿ ನೀಡಿದ್ದ ಚಿತ್ರವನ್ನು 2011 ರ ಸಮಯದಲ್ಲಿ ನಟ ಬ್ರಾಡ್ ಪಿಟ್ ತನ್ನ ಆಗಿನ ಪ್ರೇಯಸಿ ಆಂಜೆಲಿನಾ ಜೂಲಿಗೆ ಉಡುಗೊರೆಯಾಗಿ ನೀಡಿದ್ದರು. ಈಗ ಅದೇ ಚಿತ್ರವನ್ನು ಹರಾಜು ಹಾಕಿದ್ದಾರೆ ಆಂಜೆಲಿನಾ ಜೂಲಿ.

ವಿಶ್ವದಾಖಲೆ ಮೊತ್ತಕ್ಕೆ ಮಾರಾಟವಾದ ಚಿತ್ರ
ವಿನ್‌ಸ್ಟನ್ ಚರ್ಚಿಲ್ ರಚಿಸಿದ ಈ ಚಿತ್ರ ಬರೋಬ್ಬರಿ 1.15 ಕೋಟಿ ಡಾಲರ್‌ಗೆ ಮಾರಾಟವಾಗಿದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಈ ಚಿತ್ರ ಸುಮಾರು 85 ಕೋಟಿ ರೂಪಾಯಿಗೆ ಹರಾಜಾಗಿದೆ. ಇಷ್ಟೋಂದು ದೊಡ್ಡ ಮೊತ್ತಕ್ಕೆ ಮಾರಾಟವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಯನ್ನು ಸಹ ಈ ಚಿತ್ರ ಪಡೆದುಕೊಂಡಿದೆ. ಈ ಚಿತ್ರವು ಹರಾಜಿನ ಆರಂಭಿಕ ಬೆಲೆಗಿಂತಲೂ ನಾಲ್ಕು ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ. ಚಿತ್ರವನ್ನು ಖರೀದಿಸಿದ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಲಾಗಿಲ್ಲ.

ಚಿತ್ರದ ಹೆಸರು 'ಟವರ್ ಆಫ್ ಕೊತುಬಿಯಾ ಮೋಸ್ಕ್'
ಚರ್ಚಿಲ್ ರಚಿತ ಈ ಚಿತ್ರದ ಹೆಸರು 'ಟವರ್ ಆಫ್ ಕೊತುಬಿಯಾ ಮೋಸ್ಕ್'. ಈ ಚಿತ್ರವನ್ನು 2011 ರಲ್ಲಿ ಹರಾಜು ಹಾಕಲಾಗಿತ್ತು. ಆ ಹರಾಜಿನಲ್ಲಿ ಕೊಂಡು ಅದನ್ನು ಆಂಜೆಲಿನಾ ಜೂಲಿಗೆ ಉಡುಗೊರೆ ನೀಡಿದ್ದರು ನಟ ಬ್ರಾಡ್ ಪಿಟ್.

ಎರಡನೇ ವಿಶ್ವಯುದ್ಧ ಸಂದರ್ಭ ರಚಿಸಿದ ಚಿತ್ರ
ಎರಡನೇ ವಿಶ್ವಯುದ್ಧ (1935-1945) ರ ಸಂದರ್ಭದಲ್ಲಿ ವಿನ್‌ಸ್ಟನ್ ಚರ್ಚಿಲ್ ಈ ಚಿತ್ರವನ್ನು ಬರೆದಿದ್ದರು. ಚರ್ಚಿಲ್ ಬರೆದ ಏಕಮಾತ್ರ 'ಲ್ಯಾಂಡ್‌ಸ್ಕೇಪ್' ಮಾದರಿಯ ಚಿತ್ರವಿದು. ಈ ಚಿತ್ರವನ್ನು ಅವರು ಮೊರಾಕ್ಕೊದಲ್ಲಿದ್ದಾಗ ಬರೆದಿದ್ದರು ಎನ್ನಲಾಗಿದೆ. ಚಿತ್ರವನ್ನು ಅವರು ಆಗಿನ ಪ್ರಧಾನಿ ಫ್ರಾಂಕ್ಲಿನ್ ರೂಸ್‌ವೆಲ್ಟ್‌ಗೆ ಉಡುಗೊರೆಯಾಗಿ ನೀಡಿದ್ದರು.

ಬ್ರಾಡ್ ಪಿಟ್, ಆಂಜೆಲಿನಾಳ ಮೂರನೇ ಪತಿ
ಆಂಜೆನಿಲಾ ಜೂಲಿ ಹಾಗೂ ಬ್ರಾಡ್ ಪಿಟ್ 2005 ರಿಂದಲೂ ಪ್ರೀತಿಯಲ್ಲಿದ್ದರು. 12 ವರ್ಷ ಒಟ್ಟಿಗಿದ್ದ ಈ ಜೋಡಿ 2016 ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಬೇರಾದರು. ಬ್ರಾಡ್ ಪಿಟ್, ಆಂಜೆಲಿನಾ ಜೂಲಿಯ ಮೂರನೇ ಪತಿ. ಬ್ರಾಡ್ ಪಿಟ್‌ಗೆ ಆಂಜೆಲಿನಾ ಜೂಲಿ ಎರಡನೇ ಪತ್ನಿ.