ಏಂಜಲಿನಾ ಜೋಲಿ ಎರಡೂ ಸ್ತನ ತೆಗೆಸಲು ಕಾರಣ?
ಅವರು ಹಾಗೆ ಮಾಡಿದ್ದೇ ತಡ, ಎಲ್ಲೆಡೆಯಿಂದ ಅವರಿಗೆ ಅಭಿನಂದನೆ, ಮೆಚ್ಚುಗೆಗಳ ಪ್ರವಾಹವೇ ಹರಿದುಬರುತ್ತಿದೆ. ಎಲ್ಲೆಡೆಯಿಂದ ಬರುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಜೋಲಿ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತಿವೆಯಂತೆ.
ಏಂಜಲೀನಾ ಜೋಲಿ ಅವರ ತಾಯಿ ಮಾರ್ಚೆಲಿನ್ ಬರ್ಟ್ಯಾಂಡ್ ಅವರು ಅಂಡಾಶಯ ಕ್ಯಾನ್ಸರ್ ಗೆ ತುತ್ತಾಗಿ 56ನೇ ವರ್ಷದಲ್ಲಿ ಸಾವಪ್ಪಿದರು. ಈಗ ಏಂಜಲೀನಾ ಅವರಿಗೂ ಶೇ.50ರಷ್ಟು ಅಂಡಾಶಯ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ಸತ್ಯಾಂಶ ನನಗೆ ಗೊತ್ತಾದ ಬಳಿಕ ಸುಮ್ಮನೆ ಕೂರಲಿಲ್ಲ. ಚಿಕಿತ್ಸೆ ಕೊಡಿಸುವುದಕ್ಕಿಂತ ಮುನ್ನವೇ ರೋಗ ಬರದಂತೆ ತಡೆಯುವುದೇ ಕ್ಷೇಮ ಅನ್ನಿಸಿ ತಾನು ಸ್ತನಛೇದನ ಶಸ್ತ್ರಚಿಕಿತ್ಸೆಗೆ (double mastectomy) ಏಪ್ರಿಲ್ 27ರಂದು ಒಳಗಾದೆ. ಈ ವಿಷಯವನ್ನು ಇಷ್ಟು ದಿನ ಬಹಿರಂಗಪಡಿಸಿರಲಿಲ್ಲ. ನನ್ನ ಕೆಲಸದಲ್ಲಿ ನಾನು ತೊಡಗಿಕೊಂಡಿದ್ದೆ. ಈಗ ತಮ್ಮದೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಜಾಗೃತಿ ಮೂಡಿಸಬೇಕು ಅನ್ನಿಸಿತು...ಹಾಗಾಗಿ ಈ ಪತ್ರ ಎಂದಿದ್ದಾರೆ.
ಈ ಮೂಲಕ ಮಹಿಳೆಯರಿಗೆ ಹೊಸ ಭರವಸೆ, ಸ್ತನ ಕ್ಯಾನ್ಸರ್ ಬಗ್ಗೆ ಹೊಸ ಜಾಗೃತಿಯನ್ನು ಏಂಜಲೀನಾ ಜೋಲಿ ಮೂಡಿಸಿದಂತಾಗಿದೆ. ಅವರ ಈ ಬೋಲ್ಡ್ ನಿರ್ಧಾರವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳಿರುವ ಮಹಿಳೆಯರಿಗೆ ಹೊಸ ದಾರಿಯನ್ನು ಏಂಜಲೀನಾ ತೋರಿದಂತಾಗಿದೆ. ನೀವೇನಂತೀರಿ?


Click it and Unblock the Notifications











