ನ್ಯಾಯಾಧೀಶರ ಮುಂದೆ ಪೈಶಾಚಿಕ ಅತ್ಯಾಚಾರದ ಘಟನೆ ಬಿಚ್ಚಿಟ್ಟ ಖ್ಯಾತ ನಟಿ
ಹಾಲಿವುಡ್ ನ ಖ್ಯಾತ ನಟಿ ಅನ್ನಾಬೆಲ್ಲಾ ಸಿಯೊರಾ ತಮ್ಮ ಮೇಲಾದ ಪೈಶಾಚಿಕ ಅತ್ಯಾಚಾರ ಘಟನೆಯನ್ನು ನ್ಯೂಯಾರ್ಕ್ ಕೋರ್ಟ್ ನಲ್ಲಿ ವಿವರಿಸಿದ್ದಾರೆ. 25 ವರ್ಷಗಳ ಹಿಂದೆ ನಟಿ ಅನ್ನಾಬೆಲ್ಲಾ ಮೇಲಾದ ಅತ್ಯಾಚಾರ ಘಟನೆಯ ವಿಚಾರಣೆ ನ್ಯೂಯಾರ್ಕ್ ಕೋರ್ಟ್ ನಲ್ಲಿ ನಡೆಯುತ್ತಿದೆ.
ಮಿರಾಮ್ಯಾಕ್ಸ್ ಎಂಟರ್ ಟೈನ್ ಮೆಂಟ್ ಕಂಪನಿಯ ಸಂಸ್ಥಾಪಕ ಮತ್ತು ಹಾಲಿವುಡ್ ನ ಮಾಜಿ ನಿರ್ಮಾಪಕ ಹಾರ್ವೆ ವೈನ್ಸ್ಟೈನ್, ನಟಿ ಅನ್ನಾಬೆಲ್ಲಾ ಇದ್ದ ಅಪಾರ್ಟ್ ಮೆಂಟ್ ಒಳಗೆ ನುಗ್ಗಿ ಅತ್ಯಾಚಾರ ವೆಸಗಿದ್ದಾರೆ ಎಂದು ನಟಿ ಅನ್ನಾ ವಿಚಾರಣೆ ವೇಳೆ ಸಾಕ್ಷ್ಯ ನುಡಿದಿದ್ದಾರೆ.
ಇತ್ತೀಚಿಗೆ ನ್ಯೂಯಾಕ್ಟ್ ಕೋರ್ಟ್ ನಲ್ಲಿ ನಡೆದ ಹಾರ್ವೆ ವೈನ್ಸ್ಟೈನ್ ಪ್ರಕರಣದ ವಿಚಾರಣೆಯಲ್ಲಿ ನಟಿ ಅನ್ನಾ ಭಾವುಕರಾಗಿ ಹಿಂದಿನ ಕಹಿ ಘಟನೆಯನ್ನು ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ.

1993ರಲ್ಲಿ ನಡೆದ ಘಟನೆ
"1993ರಲ್ಲಿ ಅಂದು ವೈನ್ಸ್ಟೈನ್ ಜೊತೆ ಡಿನ್ನರ್ ಮುಗಿಸಿ ನಂತರ ನ್ಯೂಯಾರ್ಕ್ ನ ಅಪಾರ್ಟ್ ಮೆಂಟ್ ಗೆ ಡ್ರಾಪ್ ಮಾಡಿದರು, ಕೆಲವೆ ಕ್ಷಣಕ್ಕೆ ರೂಮಿನ ಡೋರ್ ಬೆಲ್ ಆಯಿತು. ಬಾಗಿಲು ತೆರೆದಾಗ ಹಾರ್ವೆ ವೈನ್ಸ್ಟೈನ್ ಒಳ ಬಂದರು. ನಾನು ಆಗ ನೈಟ್ ವೇರ್ ನಲ್ಲಿ ಇದ್ದೆ. ತಕ್ಷಣವೆ ನನ್ನ ಹಿಡಿದಕೊಂಡರು. ಬೆಡ್ ರೂ ಒಲಕ್ಕೆ ಕರೆದೊಯ್ದರು. ಆತನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟೆ, ಆತನ ಮುಖಕ್ಕೆ ಹೊಡೆದೆ. ಆದರೂ ಆತ ನನ್ನ ಬಿಡಲಿಲ್ಲ" ಎಂದು ಹೇಳಿದ್ದಾರೆ.

ಅತ್ಯಾಚಾರ ವೆಸಗಿ ಬಿಟ್ಟಿದ್ದ
"ಏನು ನಡೆಯುತ್ತಿದೆ ಎಂದು ತಿಳಿಯುವ ಅಷ್ಟೊತ್ತಿಗೆ ಬೆಡ್ ಮೇಲೆ ನನ್ನ ಕೈಗಳನ್ನು ಒತ್ತಿ ಹಿಡಿದು ಲಾಕ್ ಮಾಡಿದ್ದ. ನನಗೆ ಹೋರಾಡಲು ಸಾಧ್ಯವಾಗಿಲ್ಲ. ಅತ್ಯಾಚಾರ ವೆಸಗಿದನು" ಎಂದು ಭಾವುಕರಾಗಿ ನ್ಯಾಯಾದೀಶರ ಮುಂದೆ ವಿವರಿಸಿದ್ದಾರೆ.

ಆತನ ನೋಟ ಭಯ ಭೀತಿಗೊಳಿಸುತ್ತಿತ್ತು
ವಾರದ ನಂತರ ಮತ್ತೆ ಡಿನ್ನರ್ ನಲ್ಲಿ ಹಾರ್ವೆ ವೈನ್ಸ್ಟೈನ್ ಎದುರಾದರು, ಆತನ ನೋಟ ತುಂಬ ಭಯ ಭೀತಿಗೊಳಿಸಿತು. ಬೆದರಿಕೆ ಹಾಕುವ ಹಾಗೆ ಇತ್ತು, ನಾನು ತುಂಬ ಹೆದರಿದ್ದೆ" ಎಂದು ಹೇಳಿದ್ದಾರೆ. ಕೋರ್ಟ್ ನಲ್ಲಿ ವಿಚಾರಣೆ ನಡೆಯುವ ವೇಳೆ ವೈನ್ಸ್ಟೈನ್, ಅನ್ನಾ ಮುಖವನ್ನು ನೋಡದೆ ನಿಂತಿದ್ದರು ಎನ್ನುವುದು ವರದಿ ಆಗಿದೆ.

ಅರೋಪ ಸಾಬೀತಾದರೆ ಜೀವಾವದಿ ಶಿಕ್ಷೆ
ವೈನ್ಸ್ಟೈನ್ ಹಾಲಿವುಡ್ ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಆತನ ವಿರುದ್ಧ 80 ಕ್ಕೂ ಹೆಚ್ಚು ಮಹಿಳೆಯರಿಂದ ಲೈಂಗಿಕ ಕಿರುಕುಳದ ದೂರು ಕೇಳಿ ಬಂದಿದೆ. ಇದು ಮಿ ಟೂ ಅಭಿಯಾನಕ್ಕೆ ಸಹಾಯಕವಾಗಿದೆ. ಒಂದು ವೇಳೆ ಹಾರ್ವೆ ವೈನ್ಸ್ಟೈನ್ ಮೇಲಿನ ಆರೋಪ ಸಾಭೀತಾದರೆ ಜೀವಾವದಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರಣೆ ಮಾರ್ಚ್ ಆರಂಭದಲ್ಲಿ ಮುಕ್ತಾಯವಾಗುವ ಸಾಧ್ಯತೆ ಇದೆ. 67 ವರ್ಷದ ಹಾರ್ವೆ ವೈನ್ಸ್ಟೈನ್ ಗೆ ನ್ಯೂಯಾರ್ಕ್ ಕೋರ್ಟ್ ನೀಡುವ ಶಿಕ್ಷೆ ಏನಾಗಿರಲಿದೆ ಎನ್ನುವುದು ಸದ್ಯದ ಕುತೂಹಲ.


Click it and Unblock the Notifications











