»   » ಅನುಷ್ಕಾ ಶರ್ಮಾ ಮೇಲೆ ಸ್ಟೀವನ್ ಸ್ಪೀಲ್ ಬರ್ಗ್ ಕಣ್ಣು

ಅನುಷ್ಕಾ ಶರ್ಮಾ ಮೇಲೆ ಸ್ಟೀವನ್ ಸ್ಪೀಲ್ ಬರ್ಗ್ ಕಣ್ಣು

Posted By:
Subscribe to Filmibeat Kannada

ಹಾಲಿವುಡ್ ನ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ ತೀರಾ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದು ಗೊತ್ತೇ ಇದೆ. ಬಾಲಿವುಡ್ ಅಂಗಳದಲ್ಲಿ ಅವರು ತಾರೆಗಳ ಜೊತೆ ಸಂವಾದ, ಮಾತುಕತೆ ನಡೆಸಿದ್ದರು. ಭಾರತ ಮತ್ತು ಪಾಕಿಸ್ತಾನ ಸಂಬಂಧ ಕುರಿತು ಸಿನಿಮಾ ಮಾಡುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದ್ದರು.

ಆ ಚಿತ್ರವನ್ನು ಸಂಪೂರ್ಣವಾಗಿ ಕಾಶ್ಮೀರ ಕಣಿವೆಯಲ್ಲಿ ಚಿತ್ರೀಕರಿಸುತ್ತೇನೆ ಎಂದಿದ್ದರು. ಇದೇ ಸಂದರ್ಭದಲ್ಲಿ ಅವರ ಕಣ್ಣಿಗೆ ಅನುಷ್ಕಾ ಶರ್ಮಾ ಬಿದ್ದಿದ್ದಾರೆ. ಸ್ಪೀಲ್ ಬರ್ಗ್ ಮುಂದಿನ ಚಿತ್ರದಲ್ಲಿ ಅನುಷ್ಕಾಗೆ ಛಾನ್ಸ್ ಗ್ಯಾರಂಟಿ ಎನ್ನಲಾಗಿದೆ.


ಒಂದು ವೇಳೆ ಅನುಷ್ಕಾಗೆ ಏನಾದರೂ ಚಿತ್ರದಲ್ಲಿ ಛಾನ್ಸ್ ಸಿಕ್ಕಿದರೆ ಬಾಲಿವುಡ್ ನಲ್ಲಿ ಅವರಷ್ಟು ಲಕ್ಕಿ ಗರ್ಲ್ ಇನ್ಯಾರು ಇರಲಿಕ್ಕೆ ಸಾಧ್ಯವಿಲ್ಲ. ಇದುವರೆಗೂ ಆರು ಮತ್ತೊಂದು ಚಿತ್ರದಲ್ಲಿ ಅಭಿನಯಿಸಿರುವ ಅನುಷ್ಕಾಗೆ ಭರ್ಜರಿ ಅವಕಾಶವೇ ಸಿಕ್ಕಂತಾಗಿದೆ.

ಭಾರತ ಪಾಕ್ ಸಂಬಂಧಗಳ ಕುರಿತು ಚಿತ್ರ ಮಾಡಬೇಕೆಂದು ಸ್ಪೀಲ್ ಬರ್ಗ್ ಇನ್ನೂ ಅಂದುಕೊಂಡಿದ್ದಾರಷ್ಟೇ. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ. ಆದರೆ ಅನುಷ್ಕಾಗೆ ಅವಕಾಶ ಕೊಡುವ ಬಗ್ಗೆ ಸ್ಪೀಲ್ ಬರ್ಗ್ ಆಸಕ್ತಿ ತೋರಿದ್ದಾರೆ ಎನ್ನುತ್ತವೆ ಮೂಲಗಳು.

ಅನಿಲ್ ಹಾಗೂ ಟೀನಾ ಅಂಬಾನಿ ಆಯೋಜಿಸಿದ್ದ ಸ್ಪೀಲ್ ಬರ್ಗ್ ಕಾರ್ಯಕ್ರಮದ ಎ ಲಿಸ್ಟ್ ಆಹ್ವಾನಿತರಲ್ಲಿ ಅನುಷ್ಕಾ ಸಹ ಒಬ್ಬರಾಗಿದ್ದರು. ಒಟ್ಟಿನಲ್ಲಿ ಅನುಷ್ಕಾಗೆ ಇಷ್ಟೆಲ್ಲಾ ಮಣೆ ಹಾಕಿರುವುದು ನೋಡಿದರೆ ಹಾಲಿವುಡ್ ಚಿತ್ರದಲ್ಲಿ ಆಕೆ ಅಭಿನಯಿಸುವುದು ಪಕ್ಕಾ ಎನ್ನಲಾಗಿದೆ. (ಏಜೆನ್ಸೀಸ್)

English summary
Hollywood filmmaker Steven Spielberg is on his trip to India and during an interactive session, he expressed his desire to make a film based on Indo-Pakistan relationship and he wished to shoot the movie in Kashmir valley. Anushka Sharma might be the lucky girl to grab the project.
Please Wait while comments are loading...