ಅವತಾರ್ 2, ಅವತಾರ್ 3 ಚಿತ್ರೀಕರಣ ಬಹುತೇಕ ಪೂರ್ಣ: ಬಿಡುಗಡೆ ದಿನಾಂಕ ಪ್ರಕಟ

ಗಳಿಕೆಯಲ್ಲಿ ವಿಶ್ವದಾಖಲೆಗಳನ್ನು ನಿರ್ಮಿಸಿದ ಜನಪ್ರಿಯ ಹಾಲಿವುಡ್ ಸಿನಿಮಾ, 'ಅವತಾರ್‌'ನ ಎರಡನೇ ಭಾಗ 'ಅವತಾರ್ 2' ಚಿತ್ರೀಕರಣ ಪೂರ್ಣವಾಗಿದೆ ಎಂದು ನಿರ್ದೇಶಕ ಜೇಮ್ಸ್ ಕ್ಯಾಮರನ್ ಹೇಳಿದ್ದಾರೆ.

2009 ರಲ್ಲಿ 'ಅವತಾರ್' ಸಿನಿಮಾ ಬಿಡುಗಡೆ ಆಗಿತ್ತು. ಆಗಲೇ ಅವತಾರ್ 2 ಸಿನಿಮಾ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಅವತಾರ್ 2 ಸಿನಿಮಾ ತಯಾರಾಗಲು ಹತ್ತು ವರ್ಷ ತೆಗೆದುಕೊಂಡಿದೆ.

ಸಂತೋಷದ ಸಂಗತಿಯೆಂದರೆ ಅವತಾರ್ 2 ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದರೆ, ಅವತಾರ್ 3 ಸಿನಿಮಾದ ಚಿತ್ರೀಕರಣ ಶೇ95 ಮುಗಿದಿದೆ ಎಂದು ಜೇಮ್ಸ್ ಕ್ಯಾಮರನ್ ಹೇಳಿದ್ದಾರೆ. ಅಲ್ಲಿಗೆ ಒಂದರ ಹಿಂದೆ ಒಂದು ಅವತಾರ್ ಸಿನಿಮಾಗಳನ್ನು ನೋಡುವ ಅದೃಷ್ಟ ಪ್ರೇಕ್ಷಕರಿಗೆ ಒದಗಿ ಬರಲಿದೆ.

ಅವತಾರ್ 2 ಚಿತ್ರೀಕರಣ ಮುಗಿದಿದೆ

ಅವತಾರ್ 2 ಚಿತ್ರೀಕರಣ ಮುಗಿದಿದೆ

ಅವತಾರ್ 2 ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆಯಾದರೂ ಈಗಲೇ ಸಿನಿಮಾ ಬಿಡುಗಡೆ ಆಗುವುದಿಲ್ಲ. ಮೊದಲು ನಿಗದಿಪಡಿಸಿದಂತೆ 2021 ರ ಡಿಸೆಂಬರ್ ನಲ್ಲಿ ಅವತಾರ್ 2 ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಸಿನಿಮಾ ಬಿಡುಗಡೆ 2022 ಡಿಸೆಂಬರ್ 16 ರಂದು ಬಿಡುಗಡೆ ಆಗಲಿದೆಯಂತೆ.

ಅರ್ನಾಲ್ಡ್ ಜೊತೆ ಕ್ಯಾಮರನ್ ಮಾತುಕತೆ

ಅರ್ನಾಲ್ಡ್ ಜೊತೆ ಕ್ಯಾಮರನ್ ಮಾತುಕತೆ

ಈ ವಿಷಯಗಳನ್ನು ಸ್ವತಃ ನಿರ್ದೇಶಕ ಜೇಮ್ಸ್ ಕ್ಯಾಮರುನ್, ಹಾಲಿವುಡ್ ನಟ ಅರ್ನಾಲ್ಡ್ ಜೊತೆ ವಿಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಸತತವಾಗಿ ಅವತಾರ್ 2 ಸಿನಿಮಾ ಚಿತ್ರೀಕರಣ ಮಾಡಿರುವ ಕಾರಣ ಚಿತ್ರೀಕರಣ ಮುಗಿದಿದೆ ಎಂದಿದ್ದಾರೆ ಜೇಮ್ಸ್ ಕ್ಯಾಮರನ್.

ಅವತಾರ್ ಸರಣಿಯ ಐದೂ ಸಿನಿಮಾದ ಬಿಡುಗಡೆ ದಿನಾಂಕ

ಅವತಾರ್ ಸರಣಿಯ ಐದೂ ಸಿನಿಮಾದ ಬಿಡುಗಡೆ ದಿನಾಂಕ

ಅವತಾರ್ 2 ಸಿನಿಮಾ ಡಿಸೆಂಬರ್ 16, 2022 ಕ್ಕೆ ಬಿಡುಗಡೆ ಆಗಲಿದೆ. ಅವತಾರ್ 3 ಸಿನಿಮಾ ಡಿಸೆಂಬರ್ 20, 2024 ಕ್ಕೆ ಬಿಡುಗಡೆ ಆಗಲಿದೆ. ಅವತಾರ್ 4 ಸಿನಿಮಾ ಡಿಸೆಂಬರ್ 18, 2026 ಕ್ಕೆ ಹಾಗೂ ಅವತಾರ್ 5 ಸಿನಿಮಾವು ಡಿಸೆಂಬರ್ 22, 2028 ಕ್ಕೆ ಬಿಡುಗಡೆ ಆಗಲಿದೆ. ಈ ವೇಳಾಪಟ್ಟಿಯನ್ನು ಡಿಸ್ನಿ ಪ್ರಕಟಿಸಿದೆ.

Recommended Video

DIRECTORS DIARY : ಪ್ರಶಾಂತ್ ನೀಲ್ KGF ಮಾಡಿದ್ದಾರೆ ಅಂದ್ರೆ ನನ್ ಕಯ್ಯಲ್ಲಿ ಆಗಲ್ವ | Filmibeat Kannada
ಅವತಾರ್ ಸರಣಿಯ ಮೂರು ಸಿನಿಮಾ ಜೇಮ್ಸ್ ನಿರ್ದೇಶನ

ಅವತಾರ್ ಸರಣಿಯ ಮೂರು ಸಿನಿಮಾ ಜೇಮ್ಸ್ ನಿರ್ದೇಶನ

ಟೈಟ್ಯಾನಿಕ್, ಟರ್ಮಿನೇಟರ್, ಫಿರ್ಹಾನಾ 2, ಟ್ರು ಲೈಸ್‌ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿರುವ ಜೇಮ್ಸ್ ಕ್ಯಾಮರನ್, ಅವತಾರ್ ಸರಣಿಯ ಮೊದಲ ಸಿನಿಮಾ ಈಗಾಗಲೆ ನಿರ್ದೇಶಿಸಿದ್ದಾರೆ. ಇದರ ಜೊತೆಗೆ ಅವತಾರ್ 2 ಮತ್ತು ಅವತಾರ್ 3 ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ.

More from Filmibeat

English summary
Director James Cameron said that Avatar 2 shooting complete and Avatar 3 movie shooting completed 95%.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X