Avatar Fire and Ash Trailer ; ಪ್ಯಾಂಡೋರಾದಲ್ಲಿ ಪ್ರತೀಕಾರದ ಜ್ವಾಲೆ, ನಿಬ್ಬೇರಗಾಗಿಸುವ ಟ್ರೇಲರ್

ಅಂಗೈನಲ್ಲೇ ಆಕಾಶ ತೋರಿಸೋದ್ರಲ್ಲಿ ''ಹಾಲಿವುಡ್‌''ನವರು ಸದಾ ಮುಂದು. ಮನುಷ್ಯನ ಊಹೆಗೂ ಮೀರಿದ ಕಥೆಗಳನ್ನು ಬೆಳ್ಳಿತೆರೆಗೆ ತರುವುದರಲ್ಲಿ ಎತ್ತಿದ ಕೈ. ಹೊಸ ಟೆಕ್ನಾಲಜಿ ತ್ರಿಡಿ ಯಾನ ಶುರುವಾದ ಮೇಲಂತೂ ಇವರ ಭಾವನೆ, ಕಲ್ಪನೆಗಳಿಗೆ, ಮತ್ತಷ್ಟು ಮೆರಗು ಬಂದಿದೆ. ಸಿನಿರಸಿಕರ ನಾಡಿ ಮಿಡಿತದ ಜೊತೆ ಇವರ ಕಲ್ಪನೆಗಳು ಬೆರಗಾಗಿಸುತ್ತಿವೆ. ಇದಕ್ಕೆ ಸದ್ಯದ ಮತ್ತೊಂದು ಉದಾಹರಣೆ ''ಅವತಾರ್ :ಫೈರ್ ಆಂಡ್ ಆಶ್''.

ಹೌದು.. ''ಅವತಾರ್''.. ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾಗಳಲ್ಲೊಂದು. 2009ರಲ್ಲಿಯೇ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದ 'ಜೇಮ್ಸ್ ಕ್ಯಾಮರೂನ್‌' ನಿರ್ದೇಶನದ ಈ ಚಿತ್ರದ ಎರಡನೇ ಭಾಗ 2022ರಲ್ಲಿ ತೆರೆಗೆ ಬಂದಿತ್ತು. ಇದೀಗ ''ಅವತಾರ್ 3'' ಸರದಿ.

avatar-fire-and-ash-trailer-unleashed-meet-pandoras-fiery-new-villains-epic-stakes

ಹೌದು, ಅಸಲಿಗೆ ಮೊನ್ನೆಯಷ್ಟೇ ಅವತಾರ್ ಚಿತ್ರದಲ್ಲಿನ ವಿಲನ್ ''ವರಂಗ್‌''ನ ಪರಿಚಯವನ್ನು ಮಾಡಿ ಕೊಡಲಾಗಿತ್ತು. ಚಿತ್ರದ ಟ್ರೇಲರ್‌ನ್ನು 'ದಿ ಫೆಂಟಾಸ್ಟಿಕ್ ಫೋರ್: ಫಸ್ಟ್ ಸ್ಟೆಪ್ಸ್' ಚಿತ್ರದ ಜೊತೆ ಚಿತ್ರಮಂದಿರದಲ್ಲಿಯೇ ನೋಡಬಹುದು ಎಂದು ಚಿತ್ರತಂಡ ಹೇಳಿತ್ತು.

ಆದರೆ.. ಲೀಕಾಸುರರ ಹಾವಳಿ ಈಗೀಗ ಹೆಚ್ಚಾಗಿದೆ. ಎಷ್ಟೇ ಪ್ರಯತ್ನ ಮಾಡಿದರು ಕಗ್ಗತಲಿನಲ್ಲಿ ಕಾರ್ಯಾಚರಣೆ ಮಾಡಿ ಅದನ್ನು ಹೊರಗಡೆವುತ್ತಾರೆ. ''ಅವತಾರ್ :ಫೈರ್ ಆಂಡ್ ಆಶ್'' ಚಿತ್ರದ ಟ್ರೇಲರ್ ವಿಚಾರದಲ್ಲಿ ಕೂಡ ಇದೇ ಆಯ್ತು. ಟ್ರೇಲರ್‌ನ ಲೀಕ್ ಮಾಡಲಾಯ್ತು.

ಹೀಗಾಗಿಯೇ ಇದೀಗ ಜೇಮ್ಸ್ ಕ್ಯಾಮರೂನ್ ಮತ್ತು ಅವರ ತಂಡ ಸದ್ಯ ಚಿತ್ರದ ಟ್ರೇಲರ್‌ನ ಅಧಿಕೃತವಾಗಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಪ್ಯಾಂಡೋರಾ ಪ್ರಪಂಚದ ಚಿತ್ರಣವನ್ನು ಎಲ್ಲರ ಎದುರಿಟ್ಟು ನೋಡುಗರನ್ನು ನಿಬ್ಬೇರಗಾಗಿಸಿದ್ದಾರೆ.

ಮೊದಲ ಭಾಗದಲ್ಲಿ ಭೂಮಿಯ ಮೇಲೆ ವಿಚಿತ್ರ ಆದರೆ ಅದ್ಭುವಾದ ಲೋಕ ಸೃಷ್ಟಿಸಿದ್ದ ಜೇಮ್ಸ್ ಕ್ಯಾಮರೂನ್ ''ಅವತಾರ್ 2'' ಚಿತ್ರದ ಮೂಲಕ ಸಮುದ್ರದಾಳಕ್ಕೆ ಪ್ರೇಕ್ಷಕರನ್ನು ಕರೆದೊಯ್ದಿದ್ದರು. ಈಗ ''ಅವತಾರ್ 3'' ಮೂಲಕ ಬೆಂಕಿ ಮತ್ತು ಬೂದಿಯ ಕಥೆಯನ್ನು ಹೇಳಲು ಅಣಿಯಾಗಿದ್ದಾರೆ.

avatar-fire-and-ash-trailer-unleashed-meet-pandoras-fiery-new-villains-epic-stakes

ಪ್ರಕೃತಿಯನ್ನು ಆರಾಧಿಸುವ ನಾವಿಗಳು ಹಾಗೂ ಬೆಂಕಿಯನ್ನು ಆರಾಧಿಸುವ ಜನಾಂಗದದವರ ನಡುವಿನ ಸಂಘರ್ಷದ ಕಥೆಯನ್ನೊಂದಿರುವ ಈ ಚಿತ್ರದಲ್ಲಿ ಕೇವಲ ಪ್ರತಿಕಾರದ ಜ್ವಾಲೆ ಮಾತ್ರ ಇಲ್ಲ ಬದಲಿಗೆ ಭಾವನಾತ್ಮಕವಾದ ಅಂಶಗಳಿಗೆ ಕೂಡ ಈ ಬಾರಿ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಎಂಬ ಸುಳಿವನ್ನು ಸದ್ಯ ಬಿಡುಗಡೆಯಾದ ಟ್ರೇಲರ್ ನೀಡುತ್ತಿದೆ.

ಇನ್ನು ಕಣ್ಮನ ಸೆಳೆಯುವ ಈ ಟ್ರೇಲರ್‌ನಲ್ಲಿ ವಿಎಫ್‌ಎಕ್ಸ್‌ ಗಮನ ಸೆಳೆಯುವಂತಿದೆ. ಭವಿಷ್ಯದ ಕಥೆಯ ಎಳೆಯನ್ನು ಕೂಡ ತೋರಿಸಲಾಗಿದ್ದು ಪೂರ್ವಜರ ಶಕ್ತಿ ಇಲ್ಲಿದೆ.. ನಿಮ್ಮ ದೇವತೆಗೆ ಇಲ್ಲಿ ಯಾವುದೇ ಶಕ್ತಿ ಇಲ್ಲ ಎಂಬಂತಹ ಸಂಭಾಷಣೆಗಳು ಗಮನ ಸೆಳೆಯುವಂತಿವೆ.

ವಿಶೇಷ ಅಂದರೆ ಅವತಾರ್ 3ಯ ಚಿತ್ರೀಕರಣವನ್ನು ಎರಡನೇ ಭಾಗದ ಸಂದರ್ಭದಲ್ಲಿಯೇ ಮಾಡಲಾಗಿದೆ. ಇಷ್ಟೇ ಅಲ್ಲ ನಾಲ್ಕನೇ ಭಾಗದ ಚಿತ್ರೀಕರಣ ಕೂಡ ಮುಗಿದಿದೆ. ಒಟ್ಟಿಗೆ ಮೂರು ಸಿನಿಮಾಗಳ ಚಿತ್ರೀಕರಣ ಮಾಡಲು ಮುಖ್ಯ ಕಾರಣವೆಂದರೆ ಪಾತ್ರಧಾರಿಗಳ ವಯಸ್ಸು.ಸಿನಿಮಾದಲ್ಲಿ ಕೆಲವು ಮಕ್ಕಳು, ಯುವಕ-ಯುವತಿಯರನ್ನು ಬಳಸಿಕೊಳ್ಳಲಾಗಿದೆ. ಒಂದೊಮ್ಮೆ ಒಟ್ಟಿಗೆ ಚಿತ್ರೀಕರಣ ಮಾಡಲಿಲ್ಲವೆಂದರೆ ಅವರಿಗೆ ವಯಸ್ಸಾಗಿ ಅವರ ಮುಖ, ದೇಹಾಕಾರದ ಬದಲಾವಣೆ ಆಗುತ್ತದೆ. ಈ ಕಾರಣಕ್ಕೆ ಅವರು ಬಾಲ್ಯಾವಸ್ಥೆಯಲ್ಲಿರುವ ಕತೆ ಇರುವ ಸಿನಿಮಾಗಳ ಚಿತ್ರೀಕರಣವನ್ನು ಒಟ್ಟಿಗೆ ಮುಗಿಸಿಬಿಟ್ಟಿರುವುದಾಗಿ ಹಿಂದೊಮ್ಮೆ ಖುದ್ದು ಹಿಂದೊಮ್ಮೆ ಜೇಮ್ಸ್ ಕ್ಯಾಮರೂನ್ ಹೇಳಿದ್ದರು.

ಜೇಕ್ ಸೂಲಿ..ನಟಿರಿ ಅವರ ಜೊತೆ ಸ್ಯಾಮ್ ವರ್ತಿಂಗ್ಟನ್, ಜೊಯಿ ಸಲ್ಡಾನಾ, ಸಿಗೌರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕೇಟ್ ವಿನ್ಸ್ಲೆಟ್, ಕ್ಲಿಫ್ ಕರ್ಟಿಸ್, ಬ್ರಿಟನ್ ಡಾಲ್ಟನ್, ಜ್ಯಾಕ್ ಚಾಂಪಿಯನ್, ಟ್ರಿನಿಟಿ ಜೋ-ಲಿ ಬ್ಲಿಸ್, ಬೈಲಿ ಬಾಸ್, ಜೋಯಲ್ ಡೇವಿಡ್ ಮೂರ್, ಎಡಿ ಫಾಲ್ಕೊ ಮುಂತಾದವರು ಇದ್ದಾರೆ.ಊನಾ ಚಾಪ್ಲಿನ್ ಚಿತ್ರದಲ್ಲಿ ಖಳನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಡೇವಿಡ್ ಥೆವ್ಲಿಸ್ ಮತ್ತು ಮಿಚೆಲ್ ಯೆಹ್ ಕೂಡ ಚಿತ್ರದಲ್ಲಿದ್ದಾರೆ. ಡಿಸೆಂಬರ್ 19ರಂದು ಚಿತ್ರ ಇಂಗ್ಲಿಷ್ ಜೊತೆಯಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Dive into the stunning new 'Avatar: Fire and Ash' trailer! Witness Jake & Neytiri's darkest battles and breathtaking new worlds. The saga continues fiercely.
Read more about: avatar filmibeat news trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X