twitter
    For Quick Alerts
    ALLOW NOTIFICATIONS  
    For Daily Alerts

    ರಿಲೀಸ್‌ಗೂ ಮೊದ್ಲೆ ದೇಶದಲ್ಲಿ 'ಅವತಾರ್'- 2 ಕಲೆಕ್ಷನ್ 12 ಕೋಟಿ: ಎಷ್ಟು ಸ್ಕ್ರೀನ್ಸ್, ಕಾಲಾವಧಿ ಎಷ್ಟು?

    |

    ಜೇಮ್ಸ್ ಕ್ಯಾಮರೂನ್ ಮತ್ತೊಂದು ಅದ್ಭುತ 'ಅವತಾರ್'-2 ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕೆಲವೆಡೆ ಪ್ರೀಮಿಯರ್ ಶೋಗಳು ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಭಾರತದಲ್ಲೂ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. 6 ಭಾಷೆಗಳಲ್ಲಿ ಸಿನಿಮಾ ದೇಶಾದ್ಯಂತ ಪ್ರೇಕ್ಷಕರ ಮುಂದೆ ಬರ್ತಿದೆ.

    2009ರಲ್ಲಿ 'ಅವತಾರ್' ಸಿನಿಮಾ ರಿಲೀಸ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅವತ್ತಿನ ಕಾಲಕ್ಕೆ ಇದ್ದ ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದು ಸಿನಿಮಾ ಸದ್ದು ಮಾಡಿತ್ತು. ಇದೀಗ ಅದರ ಸೀಕ್ವೆಲ್ 'ಅವತಾರ್: ದಿ ವೇ ಆಫ್ ವಾಟರ್' ರಿಲೀಸ್‌ಗೆ ಸಿದ್ಧವಾಗಿದೆ. ಭಾರತದಲ್ಲೂ ಜೇಮ್ಸ್ ಕ್ಯಾಮರೂನ್ ದೃಶ್ಯಕಾವ್ಯ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಜೇಮ್ಸ್, ಆರ್‌ಆರ್‌ಆರ್‌, ಕೆಜಿಎಫ್ ರೀತಿಯೇ ಬೆಂಗಳೂರಿನಲ್ಲಿ ಅವತಾರ್ 2 ಅಬ್ಬರ!ಜೇಮ್ಸ್, ಆರ್‌ಆರ್‌ಆರ್‌, ಕೆಜಿಎಫ್ ರೀತಿಯೇ ಬೆಂಗಳೂರಿನಲ್ಲಿ ಅವತಾರ್ 2 ಅಬ್ಬರ!

    'ಅವತಾರ್' ಚಿತ್ರದಲ್ಲಿ ಜೇಕ್ ಸುಲ್ಲಿ ಕಥೆಯನ್ನು ಹೇಳಿದ್ದ ನಿರ್ದೇಶಕರು ಎರಡನೇ ಭಾಗದಲ್ಲಿ ಆತನ ಮಗಳನ್ನು ಪರಿಚಯಿಸಿ ಕಥೆ ಮುಂದುವರೆಸಿದ್ದಾರೆ. ಈಗಾಗಲೇ 'ಅವತಾರ್: ದಿ ವೇ ಆಫ್ ವಾಟರ್' ಚಿತ್ರದ ಟ್ರೈಲರ್‌ಗಳು ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಆದರೆ ಚಿತ್ರದ ಕಾಲಾವಧಿ ಗೊಂದಲಕ್ಕೆ ಕಾರಣವಾಗಿದೆ.

    192 ನಿಮಿಷಗಳ ಸಿನಿಮಾ

    192 ನಿಮಿಷಗಳ ಸಿನಿಮಾ

    ಇಷ್ಟು ದಿನ ಭಾರತದ ಫಿಲ್ಮ್ ಮೇಕರ್ಸ್‌ಗಳಿಗೆ ಎದುರಾಗುತ್ತಿದ್ದ ಸಮಸ್ಯೆ ಈಗ ಜೇಮ್ಸ್ ಕ್ಯಾಮರೂನ್‌ಗೂ ಎದುರಾದಂತೆ ಕಾಣುತ್ತಿದೆ. 'ಅವತಾರ್' - 2 ಸಿನಿಮಾ ಕಾಲಾವಧಿ ಬರೋಬ್ಬರಿ 3 ಗಂಟೆ 12 ನಿಮಿಷ. ಹಾಲಿವುಡ್ ಸಿನಿಮಾಗಳು ಸಾಮಾನ್ಯವಾಗಿ ಕಡಿಮೆ ಕಾಲಾವಧಿ ಇರುತ್ತವೆ. ಪ್ರೀಕ್ವೆಲ್ ಕೂಡ 2 ಗಂಟೆ 41 ನಿಮಿಷ ಇತ್ತು. ಸೀಕ್ವೆಲ್ ಅದಕ್ಕಿಂತ ಅರ್ಧ ಗಂಟೆ ದೊಡ್ಡದಾಗಿದೆ. ಇದು ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶಿಸಲು ಸಮಸ್ಯೆ ತಂದೊಡ್ಡಿದೆ. ಜೊತೆಗೆ ಇಷ್ಟು ದೀರ್ಘಾವಧಿಯ ಸಿನಿಮಾ ಪ್ರೇಕ್ಷಕರನ್ನು ಆಕಳಿಸದಂತೆ ಹಿಡಿದಿಟ್ಟುಕೊಳ್ಳುತ್ತಾ ಎನ್ನುವ ಪ್ರಶ್ನೆಯೂ ಎದುರಾಗಿದೆ.

    'ಕೆಜಿಎಫ್ 2', 'RRR' ಬಾಕ್ಸಾಫೀಸ್ ದಾಖಲೆ ಉಡೀಸ್ ಮಾಡುತ್ತಾ 'ಅವತಾರ್ 2'? ಏನಿದೆ ಲೆಕ್ಕಾಚಾರ?'ಕೆಜಿಎಫ್ 2', 'RRR' ಬಾಕ್ಸಾಫೀಸ್ ದಾಖಲೆ ಉಡೀಸ್ ಮಾಡುತ್ತಾ 'ಅವತಾರ್ 2'? ಏನಿದೆ ಲೆಕ್ಕಾಚಾರ?

    ಭಾರತದ 4000 ಸ್ಕ್ರೀನ್‌ಗಳಲ್ಲಿ ರಿಲೀಸ್

    ಭಾರತದ 4000 ಸ್ಕ್ರೀನ್‌ಗಳಲ್ಲಿ ರಿಲೀಸ್

    ದೇಶ್ಯಾದ್ಯಂತ ಬಹಳದ ದೊಡ್ಡಮಟ್ಟದಲ್ಲಿ 'ಅವತಾರ್: ದಿ ವೇ ಆಫ್ ವಾಟರ್' ಸಿನಿಮಾ ತೆರೆಗಪ್ಪಳಿಸ್ತಿದೆ. ಬಾಲಿವುಡ್‌ನ ದೊಡ್ಡ ಸಿನಿಮಾ ರೇಂಜ್‌ಗೆ ಈ ಹಾಲಿವುಡ್ ಸಿನಿಮಾ 4000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ರಾಜ್ಯದಲ್ಲೂ ಬಹುತೇಕ ಮಲ್ಟಿಫ್ಲೆಕ್ಸ್, ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ 'ಅವತಾರ್- 2' ಸಿನಿಮಾ ಸದ್ದು ಮಾಡಲಿದೆ. ಇಂಗ್ಲೀಷ್ ಜೊತೆಗೆ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ.

    12 ಕೋಟಿ ಕಲೆಕ್ಷನ್

    12 ಕೋಟಿ ಕಲೆಕ್ಷನ್

    ಕಳೆದ ಕೆಲ ದಿನಗಳಿಂದ 'ಅವತಾರ್- 2' ಚಿತ್ರದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ದೇಶದಲ್ಲಿ 12 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರೇಕ್ಷಕರು ಜೇಮ್ಸ್ ಕ್ಯಾಮರೂನ್ ದೃಶ್ಯಕಾವ್ಯ ನೋಡಲು ಬಹಳ ಉತ್ಸುಕರಾಗಿರುವುದು ಗೊತ್ತಾಗುತ್ತಿದೆ.

    ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

    ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

    ಈಗಾಗಲೇ ಕೆಲವೆಡೆ 'ಅವತಾರ್- 2' ಚಿತ್ರದ ಪ್ರೀಮಿಯರ್ ಶೋಗಳು ನಡೆದಿದೆ. ಸಿನಿಮಾ ನೋಡಿದವರಿಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಅದ್ಭುತ ದೃಶ್ಯಕಾವ್ಯ ಎಂದರೆ ಮತ್ತೆ ಕೆಲವರು ಬೋರಿಂಗ್ ಸಿನಿಮಾ ಎಂದು ಹೇಳುತ್ತಿದ್ದಾರೆ. ಪ್ರೇಕ್ಷಕರು ಚಿತ್ರಕ್ಕೆ ಎಷ್ಟು ಅಂಕ ನೀಡುತ್ತಾರೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

    English summary
    Avatar The Way Of Water is releasing in 4,000+ screens in India, In 6 languages. Movie has already done ₹12 Crs Pre-sales, and movie Runtime 3 hours, 12 mins. know more.
    Thursday, December 15, 2022, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X