ಕೆಜಿಎಫ್ 2, ಬಾಹುಬಲಿ 2 ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ದಾಖಲೆ ಅಳಿಸಲಿದೆ 'ಅವತಾರ್ 2'!
ದಾಖಲೆಗಳು ಇರುವುದೇ ಮುರಿಯಲು. ಅದರಲ್ಲಿಯೂ ಬಾಕ್ಸ್ ಆಫೀಸ್ ದಾಖಲೆಗಳಂತೂ ಹೆಚ್ಚು ಸಮಯ ಉಳಿಯುವುದಿಲ್ಲ. ಈ ಪ್ಯಾನ್ ಇಂಡಿಯಾ ಕಾಲದಲ್ಲಿ ಬಾಕ್ಸ್ ಆಫೀಸ್ ದಾಖಲೆಗಳು ಮುರಿದು ಬೀಳಲು ಹೆಚ್ಚು ಸಮಯ ಹಿಡಿಯುವುದಿಲ್ಲ.
ಇದೇ ವರ್ಷಾರಂಭವನ್ನೊಮ್ಮೆ ಗಮನಿಸಿ ರಾಜಮೌಳಿ ನಿರ್ದೇಶಿಸಿದ 'RRR' ಸಿನಿಮಾ ಸಾವಿರ ಕೋಟಿ ಹಣವನ್ನು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿತು. ಆ ಸಿನಿಮಾದ ದಾಖಲೆಯನ್ನು ಮೀರಿಸುವುದು ಕಷ್ಟ ಎಂದುಕೊಳ್ಳುತ್ತಿರುವಾಗಲೇ 'ಕೆಜಿಎಫ್ 2' ಬಂದು 'RRR' ಸಿನಿಮಾ ಸೇರಿದಂತೆ ಹಲವು ಸಿನಿಮಾಗಳ ದಾಖಲೆಗಳನ್ನು ಮುರಿದು ನಿಂತಿತು.
ಈಗ ಈ ಎರಡು ಮಾತ್ರವೇ ಅಲ್ಲದೆ 'ಬಾಹುಬಲಿ 2' 'ದಂಗಲ್' ಸಿನಿಮಾಗಳ ದಾಖಲೆಯನ್ನೂ ಮೀರಿಸಲು ಸಿನಿಮಾ ಒಂದು ರೆಡಿಯಾಗಿದೆ. ಈಗಾಗಲೇ ಲಕ್ಷಗಟ್ಟಲೆ ಟಿಕೆಟ್‌ಗಳು ಅಡ್ವಾನ್ಸ್ ಆಗಿ ಮಾರಾಟಗೊಂಡಿವೆ.

ಮುರಿಯುತ್ತದೆಯೇ 'ಕೆಜಿಎಫ್ 2', 'ಬಾಹುಬಲಿ 2' ದಾಖಲೆ?
ಹಾಲಿವುಡ್ ಸಿನಿಮಾ 'ಅವತಾರ್ 2' ಅಥವಾ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಸಿನಿಮಾದ ಲಕ್ಷಾಂತರ ಟಿಕೆಟ್‌ಗಳು ಮುಂಗಡವಾಗಿ ಮಾರಾಟಗೊಂಡಿವೆ. ಸಿನಿಮಾ ಬಿಡುಗಡೆ ಆಗಲು ಇನ್ನೂ ಒಂದು ವಾರ ಇರುವಂತೆಯೇ ಸಿನಿಮಾದ ಬಹುತೇಕ ಶೋಗಳು ಹೌಸ್‌ಫುಲ್ ಆಗಿದ್ದು, ಸ್ವತಃ ಬೆಂಗಳೂರಿನ ಕೆಲವೊಂದು ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದೊರಕುತ್ತಿಲ್ಲ.

ಭರ್ಜರಿಯಾಗಿ ಟಿಕೆಟ್ ಮಾರಾಟವಾಗುತ್ತಿದೆ
'ಅವತಾರ್ 2' ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಟ್ರೇಡ್ ವಿಶ್ಲೇಷಕರ ಪ್ರಕಾರ, 'ಬಾಹುಬಲಿ 2', 'ಕೆಜಿಎಫ್ 2' ಹಾಗೂ ಇನ್ನಿತರೆ ಭಾರತದ ಸಿನಿಮಾಗಳ ಓಪನಿಂಗ್ ಡೇ ಕಲೆಕ್ಷನ್ ದಾಖಲೆಯನ್ನು 'ಅವತಾರ್ 2' ಮುರಿದು ಹಾಕಲಿದೆ ಎನ್ನಲಾಗುತ್ತಿದೆ. 'ಬಾಹುಬಲಿ 2', 'ಕೆಜಿಎಫ್ 2' ಗೆ ಹೋಲಿಸಿದರೆ 'ಅವತಾರ್ 2' ಸಿನಿಮಾ ಕಡಿಮೆ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗುತ್ತಿದೆ. ಆದರೆ ಈ ಸಿನಿಮಾದ ಟಿಕೆಟ್ ದರ ಭಾರಿ ದುಬಾರಿ ಆಗಿರುವ ಕಾರಣದಿಂದ ಓಪನಿಂಗ್ ಡೇ ಕಲೆಕ್ಷನ್ ಅದ್ಧೂರಿಯಾಗಿ ಆಗುವ ಸಾಧ್ಯತೆ ಇದೆ.

2.70 ಲಕ್ಷ ಟಿಕೆಟ್ ಮುಂಗಡವಾಗಿ ಮಾರಾಟ
ಪ್ರಮುಖ ಮಲ್ಟಿಪ್ಲೆಕ್ಸ್‌ಗಳಾದ ಪಿವಿಆರ್, ಐನಾಕ್ಸ್ ಹಾಗೂ ಸಿನಿಪೋಲಿಸ್ ಗಳು ಈಗಾಗಲೇ ಸುಮಾರು 2.70 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಅದೂ ಕೇವಲ ಮೆಟ್ರೊ ನಗರಗಳಲ್ಲಿ. ಇವುಗಳ ಹೊರತಾಗಿ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಹಲವೆಡೆ ಮುಂಗಡ ಟಿಕೆಟ್ ಬುಕಿಂಗ್ ಅದ್ಭುತವಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಆರು ದಿನ ಬಾಕಿ ಇದ್ದು, ಇನ್ನಷ್ಟು ಬುಕಿಂಗ್ಸ್ ಆಗುವ ನಿರೀಕ್ಷೆ ಇದೆ. ಬಿಡುಗಡೆ ಆದ ಮೊದಲ ವೀಕೆಂಡ್‌ಗೆ ಸುಮಾರು 5 ಲಕ್ಷ ಟಿಕೆಟ್ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಆಗಿದೆಯಂತೆ.

ಎಲ್ಲ ದಾಖಲೆ ಅಳಿಸಿ ಹಾಕಲಿದೆ 'ಅವತಾರ್ 2'
ಈ ಹಿಂದೆ 'ಅವೇಂಜರ್ಸ್; ಎಂಡ್ ಗೇಮ್' ಹಾಗೂ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾಗಳು ಭಾರತದಲ್ಲಿ ಅತಿ ದೊಡ್ಡ ಓಪನಿಂಗ್ ಡೇ ಕಲೆಕ್ಷನ್ ಹಾಗೂ ವೀಕೆಂಡ್ ಕಲೆಕ್ಷನ್ ಮಾಡಿದ ಸಿನಿಮಾಗಳಾಗಿವೆ. ಈ ಎರಡೂ ಸಿನಿಮಾಗಳ ಕಲೆಕ್ಷನ್ ದಾಖಲೆಯನ್ನು 'ಅವತಾರ್ 2' ಅಳಿಸಿ ಹಾಕುವ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಬಿಡುಗಡೆ ಮುನ್ನವೇ ಭಾರತದಲ್ಲಿ ಸುಮಾರು 80 ಕೋಟಿ ಬ್ಯುಸಿನೆಸ್ ಅನ್ನು 'ಅವತಾರ್ 2' ಮಾಡಿದೆ ಎನ್ನಲಾಗುತ್ತಿದೆ.


Click it and Unblock the Notifications











