ಗಳಿಕೆಯಲ್ಲಿ 'ಟೈಟಾನಿಕ್' ಸಿನಿಮಾ ಹಿಂದಿಕ್ಕಿದ 'ಅವೆಂಜರ್:ಎಂಡ್ ಗೇಮ್'

'ಅವೆಂಜರ್:ಎಂಡ್ ಗೇಮ್' ಸದ್ಯ ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿರುವ ಸಿನಿಮಾ. ಗಳಿಕೆ ವಿಚಾರದಲ್ಲಿ ದಾಖಲೆ ನಿರ್ಮಿಸುತ್ತಿರುವ ಈ ಈಗ ಮತ್ತೊಂದು ದಾಖಲೆ ಮಾಡಿದೆ. ಸಾರ್ವಕಾಲಿಕ ದಾಖಲೆ ಸಿನಿಮಾವಾಗಿದ್ದ 'ಟೈಟಾನಿಕ್' ಸಿನಿಮಾದ ಗಳಿಕೆಯನ್ನು ಹಿಂದಿಕ್ಕುವ ಮೂಲಕ ಅಚ್ಚರಿ ಮೂಡಿಸಿದೆ ಅವೆಂಜರ್.

'ಅವೆಂಜರ್:ಎಂಡ್ ಗೇಮ್' ಸಿನಿಮಾ ರಿಲೀಸ್ ಆಗಿ 11 ದಿನಗಳಾಗಿವೆ. ಕಳೆದ ತಿಂಗಳು 26ರಂದು ರಿಲೀಸ್ ಆದ ಅವೆಂಜರ್ ದಾಖಲೆ ಮಟ್ಟದಲ್ಲಿ ಹಣ ಬಾಚಿಕೊಳ್ಳುತ್ತಿದೆ. 2.189 ಬಿಲಿಯನ್ ಡಾಲರ್ ಗಳಿಸುವ ಮೂಲಕ, 1997ರಲ್ಲಿ ರಿಲೀಸ್ ಆಗಿದ್ದ ಸೂಪರ್ ಹಿಟ್ ಟೈಟಾನಿಕ್ ಸಿನಿಮಾವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ಕೇವಲ 11ದಿನದಲ್ಲಿ ಈ ಪರಿ ಕಲೆಕ್ಷನ್ ಮಾಡಿದ್ದು ನೋಡಿ ಸಿನಿ ಪಂಡಿತರು ಶಾಕ್ ಆಗಿದ್ದಾರೆ. 'ಟೈಟಾನಿಕ್' ಸಿನಿಮಾ 2.128 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿತ್ತು. ಹಾಲಿವುಡ್ ನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ 'ಅವೆಂಜರ್:ಎಂಡ್ ಗೇಮ್' ಸದ್ಯ ಎರಡನೆ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ 'ಅವತಾರ್' ಸಿನಿಮಾವಿದೆ.

Avengers: Endgame beat titanic movie collection

ಇನ್ನು ವಿಶೇಷ ಅದ್ರೆ ಅವೆಂಜರ್ ಭಾರತದಲ್ಲೂ ದಾಖಲೆ ಮಟ್ಟದ ಕಲೆಕ್ಷನ್ ಮಾಡಿದೆ. 11ದಿನಗಳಲ್ಲಿ 372.56ಕೋಟಿ ಬಾಚಿಕೊಂಡಿದೆ. ವಿಶ್ವದಾದ್ಯಂತ 'ಅವೆಂಜರ್:ಎಂಡ್ ಗೇಮ್' ಚಿತ್ರಕ್ಕೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದೆ. ಈ ಪರಿ ಕಲೆಕ್ಷನ್ ಮಾಡುತ್ತಿರುವುದನ್ನ ನೋಡಿದ್ರೆ ಮುಂದಿನ ದಿನಗಳಲ್ಲಿ ಇನ್ನೆಷ್ಟು ಬಾಚಿಕೊಳ್ಳಲಿದೆ ಎನ್ನುವ ಕುತೂಹಲ ಮೂಡಿಸಿದೆ.

More from Filmibeat

English summary
After just 12 days in theaters worldwide, Avengers: Endgame has surpassed the 21 year global box office record held by Titanic. Avengers: Endgame become the second-highest grossing film in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X