ಭಾರತೀಯ ಚಿತ್ರಗಳ ದಾಖಲೆ ಪುಡಿ ಮಾಡಿದ 'ಅವೆಂಜರ್:ಎಂಡ್ ಗೇಮ್'
Recommended Video
ಹಾಲಿವುಡ್ ನ 'ಅವೆಂಜರ್:ಎಂಡ್ ಗೇಮ್' ಸಿನಿಮಾಗೆ ಭಾರತೀಯ ಚಿತ್ರಪ್ರಿಯರು ಫಿದಾ ಆಗಿದ್ದಾರೆ. ಮುಂಗಡ ಟಿಕೇಟ್ ಬುಕ್ಕಿಂಗ್ ನಲ್ಲಿಯೇ ದಾಖಲೆ ನಿರ್ಮಿಸಿದ್ದ 'ಅವೆಂಜರ್:ಎಂಡ್ ಗೇಮ್' ರಿಲೀಸ್ ಆದ್ಮೇಲು ದಾಖಲೆಯ ಕಲೆಕ್ಷನ್ ಮಾಡಿದೆ. ಭಾರತೀಯ ಚಿತ್ರಗಳ ದಾಖಲೆ ಪುಡಿ ಪುಡಿ ಮಾಡಿರುವ 'ಅವೆಂಜರ್' ಕೋಟಿ ಕೋಟಿ ಬಾಚಿಕೊಂಡಿದೆ.
ಹೌದು, 'ಅವೆಂಜರ್:ಎಂಡ್ ಗೇಮ್' ಇದೇ ತಿಂಗಳು 26ರಂದು ಭಾರತದಲ್ಲಿ ರಿಲೀಸ್ ಆಗಿದೆ. ರಿಲೀಸ್ ಆದ ಮೊದಲ ದಿನವೆ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಎರಡನೆ ದಿನ 51ಕೋಟಿ ಬಾಚಿಕೊಂಡಿದೆ. ಸದ್ಯ 100ಕೋಟಿ ಕ್ಲಬ್ ದಾಟಿ ಯಶಸ್ವಿಯಗಿ ಪ್ರದರ್ಶನ ಕಾಣುತ್ತಿರುವ 'ಅವೆಂಜರ್:ಎಂಡ್ ಗೇಮ್' ನೋಡಲು ಭಾರತೀಯರು ಮುಗಿ ಬಿದ್ದಿದ್ದಾರೆ.
ಎರಡು ದಿನಗಳಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಅವೇಂಜರ್ ಭಾರತದಲ್ಲಿ 2800ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಾರಾಜಿಸುತ್ತಿದೆ. ಕೆಲವು ಕಡೆ 6ಕ್ಕೂ ಹೆಚ್ಚು ಶೋಗಳು ಪ್ರದರ್ಶನವಾಗುತ್ತಿದೆ. ಸದ್ಯ ಮಕ್ಕಳಿಗೂ ರಜೆ ಇರುವ ಕಾರಣ ಕಲೆಕ್ಷನ್ ವಿಷಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನು ವಿಶ್ವದಾದ್ಯಂತ 'ಅವೆಂಜರ್:ಎಂಡ್ ಗೇಮ್'ಗೆ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿದೆ. ಮೊದಲ ದಿನ 8, 384 ಕೋಟಿ ಬಾಚಿಕೊಂಡಿದೆ. ಎರಡನೇ ದಿನ ಕೂಡ ಬರೊಬ್ಬರಿ 2,130 ಕೋಟಿ ಜೇಬಿಗೆ ಸೇರಿದೆ. ಚೀನಾದಲ್ಲೆ ಸಾವಿರ ಕೋಟಿ ಬಾಚಿಕೊಂಡಿದೆ ಅವೇಂಜರ್. ಈ ಪರಿ ಕಲೆಕ್ಷನ್ ಮಾಡುತ್ತಿರುವುದನ್ನ ನೋಡುತ್ತಿದ್ರೆ 'ಅವೆಂಜರ್:ಎಂಡ್ ಗೇಮ್' ಇನ್ನೆಷ್ಟು ಕೋಟಿ ಬಾಚಿಕೊಳ್ಳಲಿದೆ ಎನ್ನುವ ಕುತೂಹಲ ಮೂಡಿಸಿದೆ.
'ಅವೆಂಜರ್:ಎಂಡ್ ಗೇಮ್' ಭಾರತದಲ್ಲಿ ಇಂಗ್ಲಿಷ್, ಹಿಂದಿ ಸೇರಿದಂತೆ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಮಾರ್ವೆಸ್ ಸಿನಿಮೆಟಿಕ್ ಯೂನಿವರ್ಸ್ ಅವರ 22ನೇ ಸಿನಿಮಾ 'ಅವೆಂಜರ್:ಎಂಡ್ ಗೇಮ್'. ಜೂನಿಯರ್ ರಾಬರ್ಟ್ ಡೌನಿ, ಕ್ರಿಸ್ ಇವಾನ್ಸ್, ಮಾರ್ಕ್ ರುಫಲೋ,ಸ್ಕಾರ್ಲೆಟ್ ಜೋಹಾನ್ಸನ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.


Click it and Unblock the Notifications











