'ಗೇಮ್ ಆಫ್ ಥ್ರೋನ್ಸ್' ಖ್ಯಾತಿಯ ನಟಿ ಡಯಾನಾ ರಿಗ್ ನಿಧನ
ಅವೆಂಜರ್ಸ್, ಜೇಮ್ಸ್ ಬಾಂಡ್, ಗೇಮ್ ಆಫ್ ಥ್ರೋನ್ ಖ್ಯಾತಿಯ ನಟಿ ಡಯಾನಾ ರಿಗ್ ನಿಧನ ಹೊಂದಿದ್ದಾರೆ. 82 ವರ್ಷದ ನಟಿ ಡಯಾನಾ ಬುಧವಾರ ಬೆಳಗ್ಗೆ ಇಂಗ್ಲೆಂಡ್ ನ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಡಯಾನಾ ಮಗಳು ಮತ್ತು ನಟಿ ರಾಚೆಲ್ ಸ್ಟಿರ್ಲಿಂಗ್ ಖಚಿತಪಡಿಸಿದ್ದಾರೆ. 'ನನ್ನ ಪ್ರೀತಿಯ ಅಮ್ಮ ಬೆಳಗ್ಗೆ ಮನೆಯಲ್ಲಿ ಚಿರನಿದ್ರೆಗೆ ಜಾರಿದ್ದಾರೆ' ಎಂದು ತಿಳಿಸಿದ್ದಾರೆ. ನಟಿ ಡಯಾನಾ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 'ಕೊನೆಯ ತಿಂಗಳನ್ನು ಪ್ರೀತಿ, ನಗು ಹೆಮ್ಮೆ ತುಂಬಿದ ಅಸಾಮಾನ್ಯ ಜೀವನವನ್ನು ಸಂತೋಷದಿಂದ ಕಳೆದರು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಮಗಳು ಹೇಳಿದ್ದಾರೆ.
ಉತ್ತರ ಇಂಗ್ಲೆಂಡ್ ನಲ್ಲಿ ಜನಿಸಿದ ಡಯಾನಾ ಶಾಲೆಗೆ ಹೋಗುವ ಮೊದಲು ಕುಟುಂಬದ ಜೊತೆ ಭಾರತಕ್ಕೆ ಬಂದು ನೆಲೆಸಿದ್ದರು. ಬಳಿಕ ಲಂಡನ್ ನ ರಾಯಲ್ ಅಕಾಡೆಮಿ ಆಫ್ ಡ್ರಮಾಟಿಕ್ ಆರ್ಟ್ ಸೇರಿಕೊಂಡರು. ಬಳಿಕ 1959ರಲ್ಲಿ ರಾಯಲ್ ಷೇಕ್ಸ್ ಪಿಯರ್ ಕಂಪನಿಯನ್ನು ಸೇರಿದರು.

ಜೇಮ್ಸ್ ಬಾಂಡ್ ಸರಣಿಯ 'ಆನ್ ಹರ್ ಮೆಜೆಸ್ಟಿ ಸಿಕ್ರೆಟ್ ಸರ್ವೀಸ್' ನಲ್ಲಿ ನಟಿಸಿದ್ದ ಡಯಾನಾಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಇತ್ತೀಚಿಗೆ ಗೇಮ್ ಆಫ್ ಥ್ರೋನ್ಸ್ ನಲ್ಲಿ ಒಲೆನ್ನಾ ಟೈರೆಲ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ರಿಗ್ ಅದ್ಭುತ ಅಭಿನಯಕ್ಕೆ ಪ್ರತಿಷ್ಠಿತ ಎಮ್ಮಿ, ಟೋನಿ ಮತ್ತು ಬಾಫ್ಟಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.


Click it and Unblock the Notifications











