For Quick Alerts
  ALLOW NOTIFICATIONS  
  For Daily Alerts

  ಬ್ರೇಕಿಂಗ್ ನ್ಯೂಸ್, ಶಕೀರಾಗೆ ಗಂಡುಮಗು

  By Rajendra
  |
  ಕೊಲಂಬಿಯಾ ಮೂಲದ ಖ್ಯಾತ ಪಾಪ್ ತಾರೆ ಶಕಲಕ ಬೇಬಿ ಶಕೀರಾ ಗಂಡುಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಕ್ಷೇಮವಾಗಿರುವುದಾಗಿ ಮೂಲಗಳು ತಿಳಿಸಿವೆ.

  ಶಕೀರಾಗೆ ಇದು ಚೊಚ್ಚಲ ಹೆರಿಗೆ. ಬಾರ್ಸಿಲೋನಾದ ಆಸ್ಪತ್ರೆಯಲ್ಲಿ ಮಗುವಿಗೆ ಮಂಗಳವಾರ (ಜ.22) ಜನ್ಮ ನೀಡಿದ್ದಾರೆ ಆಕೆಯ ಕುಟುಂಬ ಮೂಲಗಳು ತಿಳಿಸಿವೆ. ಮಗುವಿನ ತೂಕ 3 ಕೆ.ಜಿಗಳಷ್ಟಿದ್ದು ಉತ್ತಮ ಆರೋಗ್ಯದಿಂದ ಕೂಡಿದೆ ಎಂದಿದ್ದಾರೆ.

  ಹೆರಿಗೆ ನೋವು ಕಾಣಿಸಿಕೊಂಡ ಕೂಡಲೆ ಬಾರ್ಸಿಲೋನಾದ ಟೆಕ್ ನಾನ್ ಕ್ಲಿನಿಕ್ ಗೆ ಶಕೀರಾ ದಾಖಲಾಗಿದ್ದರು. ಆಗ ಆಕೆಯೊಂದಿಗೆ ಬಾಯ್ ಫ್ರೆಂಡ್ ಎಫ್.ಸಿ.ಬಾರ್ಸೆಲೋನಾ ಹಾಗೂ ಆಕೆಯ ಪ್ರಿಯತಮ ಗೆರಾರ್ಡ್ ಪಿಕ್ಯೂ ಜೊತೆಗಿದ್ದರು.

  ನವಜಾತ ಶಿಶುವಿಗೆ ಶಕೀರಾ ದಂಪತಿಗಳು ನಾಮಕರಣವನ್ನೂ ಮಾಡಿ ಮುಗಿಸಿದ್ದಾರೆ. ತಮ್ಮ ಮಗುವಿಗೆ ಮೀಲ್ಹನ್ (pronounced MEE-lahn) ಎಂದು ಹೆಸರಿಟ್ಟಿದ್ದಾರೆ. ಈ ಪದಕ್ಕೆ ಆತ್ಮೀಯ, ಎಲ್ಲರ ಪ್ರೀತಿಪಾತ್ರಕ್ಕೆ ಒಳಗಾದವನು ಎಂಬರ್ಥವಿದೆಯಂತೆ. ಸಂಸ್ಕೃತದಲ್ಲಾದರೆ 'ಸಂಘಟಿಸು' ಎಂಬ ಅರ್ಥವಿದೆ ಎಂದು ಸ್ವತಃ ಶಕೀರಾ ಹೇಳಿಕೊಂಡಿದ್ದಾರೆ.

  ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ, "ತಮ್ಮೆಲ್ಲರ ಶುಭಹಾರೈಕೆಗಳಿಗೆ ಧನ್ಯವಾದಳು" ಎಂದಿದ್ದಾರೆ 35ರ ಹರೆಯದ ಶಕೀರಾ. ಜನವರಿ 14ರಂದು ಶಕೀರಾ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಅವರು ಸಾರ್ವಜನಿಕ ಸಭೆ ಸಮಾರಂಭಗಳಿಗೆ ದೂರವಾದರು. (ಏಜೆನ್ಸೀಸ್)

  English summary
  Colombian pop singer Shakira gave birth to her first child - a boy - in a Barcelona hospital Tuesday, her family confirmed in a communique. The boy weighing almost 3 kg and both the mother and child are "in perfect health".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X