For Quick Alerts
  ALLOW NOTIFICATIONS  
  For Daily Alerts

  ಬಾಫ್ಟಾ 2021: ರಿಷಿ ಕಪೂರ್, ಇರ್ಫಾನ್‌ಗೆ ಗೌರವ, 'ವೈಟ್‌ ಟೈಗರ್‌'ಗೆ ನಿರಾಸೆ

  |

  ಸಿನಿಮಾಕ್ಕೆ ಸಂಬಂಧಿಸಿದ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಗಳಲ್ಲೊಂದಾದ, ಬ್ರಿಟಿಷ್ ಆಸ್ಕರ್‌ ಎಂದೇ ಖ್ಯಾತವಾಗಿರುವ ಬಾಫ್ಟಾ 2021 ಪ್ರಶಸ್ತಿ ವಿತರಣೆಯು ಲಂಡನ್‌ನಲ್ಲಿ ಭಾನುವಾರ ನಡೆದಿದೆ. ಸಮಾರಂಭದಲ್ಲಿ ಅಗಲಿದ ಭಾರತೀಯ ಸಿನಿಮಾ ತಾರೆಯರಾದ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಅವರುಗಳಿಗೆ ಗೌರವ ಸಲ್ಲಿಸಲಾಗಿದೆ.

  ಪ್ರಿಯಾಂಕಾ ಚೋಪ್ರಾ, ರಾಜ್‌ಕುಮಾರ್ ರಾವ್, ಆದರ್ಶ್ ಗೌರವ್ ನಟಿಸಿದ್ದ 'ದಿ ವೈಟ್ ಟೈಗರ್' ಸಿನಿಮಾವು ಕೆಲವು ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿತ್ತು. ಆದರೆ ಯಾವುದೇ ಪ್ರಶಸ್ತಿ ಸಿನಿಮಾಕ್ಕೆ ದೊರೆತಿಲ್ಲ. ನಟ ಆದರ್ಶ್ ಗೌರವ್ ಅವರು ಅತ್ಯುತ್ತಮ ನಟ ವಿಭಾಗದ ಅಂತಿಮ ಸುತ್ತಿಗೆ ಆಯ್ಕೆ ಆಗಿದ್ದರು ಆದರೆ 'ದಿ ಫಾದರ್' ಸಿನಿಮಾದ ನಟನೆಗಾಗಿ ಆಂಥೊನಿ ಹಾಪ್ಕಿನ್ಸ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.

  ಅತ್ಯುತ್ತಮ ಸ್ಕ್ರೀನ್‌ಪ್ಲೇ ಅಡಾಪ್ಶನ್ ವಿಭಾಗದಲ್ಲಿಯೂ 'ದಿ ವೈಟ್ ಟೈಗರ್' ಸಿನಿಮಾ ಅಂತಿಮ ಸುತ್ತಿಗೆ ಆಯ್ಕೆ ಆಗಿತ್ತು ಆ ಪ್ರಶಸ್ತಿಯೂ ಸಹ 'ದಿ ಫಾದರ್‌' ಸಿನಿಮಾದ ಪಾಲಾಗಿದೆ. ಇದೇ ವಿಭಾಗದಲ್ಲಿ ಆಸ್ಕರ್‌ನ ಅಂತಿಮ ಸುತ್ತಿಗೂ ಆಯ್ಕೆ ಆಗಿದೆ 'ದಿ ವೈಟ್‌ ಟೈಗರ್'.

  ಬಾಫ್ಟಾ 2021 ಪ್ರಶಸ್ತಿ ವಿಜೇತ ಸಿನಿಮಾ, ನಟ-ನಟಿಯರ ಪಟ್ಟಿ ಇಂತಿದೆ.

  ಅತ್ಯುತ್ತಮ ಸಿನಿಮಾ: ನೋಮಡ್‌ಲ್ಯಾಂಡ್

  ಅತ್ಯುತ್ತಮ ಬ್ರಿಟಿಷ್ ಸಿನಿಮಾ: ಪ್ರಾಮಿಸಿಂಗ್ ಯಂಗ್ ವುಮನ್

  ಅತ್ಯುತ್ತಮ ನಿರ್ದೇಶಕ: ಕ್ಲೋವಿ ಜಾವ್ (ನೋಮಡ್‌ಲ್ಯಾಂಡ್)

  ಚಿತ್ರಕತೆ: ಪ್ರಾಮಿಸಿಂಗ್ ಯಂಗ್ ವುಮನ್

  ಅಡಾಪ್ಟೆಡ್ ಸ್ಕ್ರೀನ್‌ಪ್ಲೇ: ದಿ ಫಾದರ್

  ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್‌ಡೋರ್ಮಂಡ್ (ನೋಮಡ್‌ಲ್ಯಾಂಡ್)

  ಅತ್ಯುತ್ತಮ ನಟ: ಆಂಥೊನಿ ಹಾಪ್ಕಿನ್ಸ್ (ದಿ ಫಾದರ್)

  ಪೋಷಕ ನಟಿ: ಯೂ ಜುಂಗ್ ಯಾಂಗ್ (ಮಿನಾರಿ)

  ಪೋಷಕ ನಟ: ಡ್ಯಾನಿಯಲ್ ಕಲೂಯಾ (ಜುಡಾಸ್ ಆಂಡ್ ದಿ ಬ್ಲ್ಯಾಕ್ ಮಸೀಯಾ)

  ಅತ್ಯುತ್ತಮ ಅನಿಮೇಷನ್ ಸಿನಿಮಾ: ಸೋಲ್

  ಅತ್ಯುತ್ತಮ ಸಂಗೀತ: ಸೋಲ್

  ಸಿನಿಮಾಟೋಗ್ರಫಿ: ನೋಮಡ್‌ಲ್ಯಾಂಡ್

  ಸ್ಪೆಷನ್ ಎಫೆಕ್ಟ್ಸ್: ಟೆನೆಟ್

  ಅಮಿತಾಬ್ ಜೊತೆ ನಟಿಸುವ ಆಫರ್ ಬಂದಾಗ ರಶ್ಮಿಕಾ ಪೋಷಕರು ಏನ್ ಹೇಳಿದ್ರು ಗೊತ್ತಾ | Filmibeat Kannada

  ಸಂಕಲನ: ಸೌಂಡ್ ಆಫ್ ಮೆಟಲ್

  English summary
  International movie award BAFTA 2021 announced. Nomadland wins best movie award. No awards for The White Tiger movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X