twitter
    For Quick Alerts
    ALLOW NOTIFICATIONS  
    For Daily Alerts

    ವಿಶ್ವ ಸಿನಿಮಾರಂಗದ ಹೊಸ ಸುಲ್ತಾನ್ 'ಬ್ಯಾಟಲ್ ಅಟ್ ಲೇಕ್ ಚಾಂಗ್ಜಿನ್'

    By ರವೀಂದ್ರ ಕೊಟಕಿ
    |

    ಕಳೆದ ಎರಡು ವರ್ಷಗಳಿಂದ ಕರೋನಾದ ಕಾರಣದಿಂದಾಗಿ ಮನೋರಂಜನೆ ಮಾಧ್ಯಮ ಅದರಲ್ಲೂ ವಿಶೇಷವಾಗಿ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಲು ಸಾಧ್ಯವಾಗುತ್ತಿಲ್ಲ. ಆದಾಗಿಯೂ ಬಿಡುಗಡೆಯಾದ ಅನೇಕ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಿಲ್ಲ. ಹೀಗಾಗಿ ಸಹಜವಾಗಿಯೇ ವಿಶ್ವದಾದ್ಯಂತ ಚಲನಚಿತ್ರಗಳ ಭವಿಷ್ಯದ ಬಗ್ಗೆ ಒಂದು ದೊಡ್ಡ ಪ್ರಶ್ನೆ ಎದ್ದಿರುವ ಈ ಸಂದರ್ಭದಲ್ಲೇ ಕರೋನಾದ ಇಳಿಮುಖದ ಹಿನ್ನಲೆಯಲ್ಲಿ ನಿಧಾನವಾಗಿ ಥಿಯೇಟರ್‌ಗಳ ಗೇಟ್ ತೆರೆಯುತ್ತಿರುವುದರಿಂದ ಧೈರ್ಯವಾಗಿ ಭಾರಿ ಬಜೆಟ್ಟಿನ ಸಿನಿಮಾಗಳು ನಿಧಾನವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

    ಜನಗಳು ಕೂಡ ನಿಧಾನವಾಗಿ ಚಿತ್ರಮಂದಿರಗಳ ಕಡೆ ಬರುತ್ತಿರುವುದರಿಂದ ದೊಡ್ಡ ಸಿನಿಮಾಗಳ ಬಿಡುಗಡೆ ಇದೀಗ ಚಿತ್ರರಂಗಕ್ಕೆ ಧೈರ್ಯ ತುಂಬುತ್ತಿದೆ. ಏತನ್ಮಧ್ಯೆ, ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸಬೇಕಿದ್ದ ಭಾರಿ ಬಜೆಟ್ಟಿನ, ಬಹುನಿರೀಕ್ಷಿತ ಚಿತ್ರಗಳು ದೊಡ್ಡ ಕಲೆಕ್ಷನ್ ಮಾಡುತ್ತಿಲ್ಲ. ಟಾಮ್ ಹಾರ್ಡಿ 'ವೆನಮ್ 2' ಮತ್ತು ಡೇನಿಯಲ್ ಕ್ರೇಗ್ ಜೇಮ್ಸ್ ಬಾಂಡ್ ಚಿತ್ರ 'ನೋ ಟೈಮ್ ಟು ಡೈ' ಬಿಡುಗಡೆಯಾಗಿ ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿವೆ.

    ಆದರೆ ಈ ಎರಡನ್ನು ಹೊರತುಪಡಿಸಿ, ಮತ್ತೊಂದು ಚಿತ್ರವು ಈಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ವಿಯನ್ನು ಕಂಡಿಲ್ಲ. ಆದರೆ ಇದೇ ಸಮಯದಲ್ಲಿಚೀನೀ ವಾರ್ ಡ್ರಾಮಾ 'ಬ್ಯಾಟಲ್ ಅಟ್ ಲೇಕ್ ಚಾಂಗ್ಜಿನ್' ಇತ್ತೀಚೆಗೆ ಬಿಡುಗಡೆಯಾಗಿ ಜಾಗತಿಕವಾಗಿ ಸಂಚಲನವನ್ನು ಉಂಟು ಮಾಡುತ್ತಿದೆ.

    ನಿರೀಕ್ಷಿತ ಯಶಸ್ಸು ಕಾಣದ ಹಾಲಿವುಡ್ ಚಿತ್ರಗಳು

    ನಿರೀಕ್ಷಿತ ಯಶಸ್ಸು ಕಾಣದ ಹಾಲಿವುಡ್ ಚಿತ್ರಗಳು

    ಡೇನಿಯಲ್ ಕ್ರೇಗ್ ಅವರ 'ನೋ ಟೈಮ್ ಟು ಡೈ' ಕೊನೆಯ ಜೇಮ್ಸ್ ಬಾಂಡ್ ಆಗಿರುವುದರಿಂದ ಈ ಚಲನಚಿತ್ರವು ಬಹಳ ನಿರೀಕ್ಷೆಯಿತ್ತು. ಸುಮಾರು 300 ಮಿಲಿಯನ್ ಡಾಲರ್ ಬಜೆಟ್ ಹೊಂದಿರುವ ಈ ಆಕ್ಷನ್-ಕಾಮಿಡಿ ಸಿನಿಮಾವು ವಾರಾಂತ್ಯದ ಸಂಗ್ರಹಗಳ ವಿಷಯದಲ್ಲಿ ಪ್ರಭಾವಶಾಲಿಯಾಗಿಲ್ಲ. ಕೇವಲ 119 ಮಿಲಿಯನ್ ಡಾಲರ್ (ಸಾಗರೋತ್ತರ) ಮತ್ತು 'ವೆನಮ್: ಲೆಟ್ ದೆರ್ ಕಾರ್ನೇಜ್' ದೇಶೀಯ ಸರ್ಕ್ಯೂಟ್‌ನಲ್ಲಿ 12.9 ಮಿಲಿಯನ್ ಡಾಲರ್ ಸಂಗ್ರಹಿಸಿದೆ. 110 ಮಿಲಿಯನ್ ಡಾಲರ್ ಬಜೆಟ್‌ನ 'ವೆನಮ್ 2' ಇದುವರೆಗೆ ಕೇವಲ 131.3 ಮಿಲಿಯನ್ ಡಾಲರ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಅಮೇರಿಕನ್ ವೈಜ್ಞಾನಿಕ ಡ್ರಾಮಾ 'ಡ್ಯೂನ್' ವಾರಾಂತ್ಯಕ್ಕೆ 13.7 ಡಾಲರ್ ಮಿಲಿಯನ್ ಗಳಿಸಿದೆ. 165 ಮಿಲಿಯನ್ ಡಾಲರ್ ಬಜೆಟ್ ಚಲನಚಿತ್ರವು ಕೇವಲ 103 ಮಿಲಿಯನ್ ಡಾಲರ್ ಗಳಿಸಿತು.

    2021 ಬಾಕ್ಸ್ ಆಫೀಸ್ ಕಿಂಗ್ ಚಾಂಗ್ಜಿನ್

    2021 ಬಾಕ್ಸ್ ಆಫೀಸ್ ಕಿಂಗ್ ಚಾಂಗ್ಜಿನ್

    ಚೀನಾ ಯುದ್ಧದ ಹಿನ್ನೆಲೆಯಲ್ಲಿ ಮೂಡಿಬಂದಿರುವ 'ಬ್ಯಾಟಲ್ ಅಟ್ ಲೇಕ್ ಚಾಂಗ್ಜಿನ್' ಜಾಗತಿಕ ಗಲ್ಲಾಪೆಟ್ಟಿಗೆಯನ್ನು ಸುನಾಮಿ ಸಂಗ್ರಹದೊಂದಿಗೆ ನಡುಗಿಸುತ್ತಿದೆ. ಕೊರಿಯನ್ ಯುದ್ಧದ ಹಿನ್ನಲೆಯಲ್ಲಿ, ಈ ಚಿತ್ರವನ್ನು ಚೆನ್ ಕೈಗೆ, ಸುಯಿ ಹಾರ್ಕ್ ಮತ್ತು ಡಾಂಟೆ ಲ್ಯಾಮ್ ನಿರ್ದೇಶಿಸಿದ್ದಾರೆ. ಇದು ಚೀನಾದ ಸೈನಿಕರ ಸ್ಪೂರ್ತಿದಾಯಕ ಹೋರಾಟದ ಹಿನ್ನೆಲೆಯ ಕಥೆಯಾಗಿದೆ. ಈ ಚಿತ್ರದ ಬಜೆಟ್ 200 ಮಿಲಿಯನ್ ಡಾಲರ್. ಫೋರ್ಬ್ಸ್ ವರದಿಯ ಪ್ರಕಾರ, 'ಬ್ಯಾಟಲ್ ಅಟ್ ಲೇಕ್ ಚಾಂಗ್ಜಿನ್' ವಾರಾಂತ್ಯದಲ್ಲಿ 237 ಮಿಲಿಯನ್ ಡಾಲರ್ ಗಳಿಸಿದೆ. ಈ ಸಾಧನೆಯು ಚಲನಚಿತ್ರ ವ್ಯಾಪಾರ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ. ಮ್ಯಾಂಡರಿನ್ ಭಾಷೆಯಲ್ಲಿ ತಯಾರಾಗಿರುವ ಈ ಚಿತ್ರ ಕೇವಲ ಹನ್ನೊಂದು ದಿನಗಳಲ್ಲಿ 600 ಮಿಲಿಯನ್ ಡಾಲರ್ ಹಣವನ್ನು ದೋಚಿದ್ದು ವರ್ಷದ (2021) ಅತಿ ದೊಡ್ಡ ವರ್ಲ್ಡ್ ಸಿನಿಮಾ ಅಟ್ ಬಾಕ್ಸ್ ಆಫೀಸ್ ಅಂತ ಕರೆಸಿಕೊಳ್ಳುವ ದಿನಗಳು ತುಂಬಾ ದೂರವಿಲ್ಲ ಎಂಬುವುದು ಸಿನಿ ಪಂಡಿತರ ವಿಶ್ಲೇಷಣೆ.ಈ ಚಿತ್ರ ಪ್ರಸ್ತುತ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಕಲೆಕ್ಷನ್ ಕೂಡ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಸಿನಿಮಾ ವಿಶ್ಲೇಷಕರು ಹೊಂದಿದ್ದಾರೆ.

    ಸರ್ಕಾರದ ನೆರವಿನಿಂದ ತಯಾರಿಸಲಾದ ಸಿನಿಮಾ

    ಸರ್ಕಾರದ ನೆರವಿನಿಂದ ತಯಾರಿಸಲಾದ ಸಿನಿಮಾ

    'ಬ್ಯಾಟಲ್ ಅಟ್ ಲೇಕ್ ಚಾಂಗ್ಜಿನ್ ' ಸಿನಿಮಾ 'ಚೋಸಿನ್ ಜಲಾಶಯ'ದ ಬಳಿ ನಡೆದ ಕೊರಿಯನ್ ಯುದ್ಧ ಯುದ್ಧವನ್ನು ಕಥಾ ಹಿನ್ನಲೆಯಾಗಿ ಹೊಂದಿದೆ. ಈ ಚಿತ್ರವನ್ನು ಚೀನಾದ 'ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ' ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಘೋಷಣೆ ಮಾಡಲಾಯಿತು. ಇನ್ನು ಈ ಚಿತ್ರದ ಯುದ್ಧದ ವಿಷಯಕ್ಕೆ ಬರುವುದಾದರೆ ಆ ಯುದ್ಧದಲ್ಲಿ ಅಮೆರಿಕದ ಸೋಲಿನ ಹಿನ್ನಲೆಯನ್ನು ಕಥಾವಸ್ತುವಾಗಿ ತೋರಿಸಲಾಗಿದೆ ಈ ಚಿತ್ರವನ್ನು ಚೀನಾದಲ್ಲಿ ಕಮ್ಯುನಿಸ್ಟ್ ಪಾರ್ಟಿ ವತಿಯಿಂದ ವಿಪರೀತವಾದ ಪ್ರಚಾರ ನೀಡಲಾಗುತ್ತಿದೆ. ಚೀನಿಯರ ಧೈರ್ಯ, ಸಾಹಸ ದೇಶಭಕ್ತಿಯನ್ನು ಎತ್ತಿ ಹಿಡಿಯುವ ಈ ಚಿತ್ರವನ್ನು ಎಲ್ಲರೂ ಕಡ್ಡಾಯವಾಗಿ ನೋಡಲೇಬೇಕು ಎಂದು ಅಲ್ಲಿನ ಸರ್ಕಾರ ಬಲವಂತವಾಗಿ ಹಲವಾರು ಪರದೆಗಳನ್ನು ಇತರ ಸಿನಿಮಾಗಳಿಂದ ಕಿತ್ತುಕೊಂಡು ಹೆಚ್ಚುವರಿಯಾಗಿ ಈ ಸಿನಿಮಾ ಬಿಡುಗಡೆಯಾಗುವಂತೆ ನೋಡಿಕೊಂಡಿದೆ.

    ಪತ್ರಕರ್ತನ ಬಂಧನ

    ಪತ್ರಕರ್ತನ ಬಂಧನ

    ಎಲ್ಲ ತರದ ಸ್ವಾತಂತ್ರ್ಯಗಳನ್ನು ಕಿತ್ತುಕೊಂಡಿರುವ ಚೀನಾದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕೂಡ ಉಳಿದಿಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಪ್ರಮುಖ ಪತ್ರಕರ್ತ ಲುವೋ ಚಾಂಗ್‌ಪಿಂಗ್‌ನನ್ನು ಅಲ್ಲಿನ ಸರ್ಕಾರ ಬಂಧಿಸಿರುವುದು.

    ಇಷ್ಟಕ್ಕೂ ಈ ಪತ್ರಕರ್ತರು ಮಾಡಿದ ಪಾಪ ವಾದರೂ ಏನು? ಕೊರಿಯನ್ ಯುದ್ಧದಲ್ಲಿ ಚೀನಾದ ಪಾತ್ರದ ಬಗ್ಗೆ ಋಣಾತ್ಮಕ ವಿಮರ್ಶೆ ಮತ್ತು ಅನುಮಾನಗಳನ್ನು ಹುಟ್ಟುಹಾಕಿದ್ದಕ್ಕಾಗಿ ಚೀನಾ ಸರ್ಕಾರ 40 ವರ್ಷದ ಪ್ರಮುಖ ಪತ್ರಕರ್ತಲುವೋಚಾಂಗ್‌ಪಿಂಗ್‌ನನ್ನು ಬಂಧಿಸಿದೆ.

    ನಡುಗಿದ ವಿಶ್ವ ಬಾಕ್ಸ್ ಆಫೀಸ್

    ನಡುಗಿದ ವಿಶ್ವ ಬಾಕ್ಸ್ ಆಫೀಸ್

    ಹಾಗೆ ನೋಡಿದರೆ, ಸಿನಿಮಾ ವಿಮರ್ಶಕರಿಂದ ಅಂತಹ ಒಳ್ಳೆ ವಿಮರ್ಶೆಯನ್ನು ಚಿತ್ರ ಪಡೆಯದೇ ಹೋದರೂ ಕೂಡ ಬಾಕ್ಸಾಫೀಸ್ ನಲ್ಲಿ ಕೊಳ್ಳೆಹೊಡೆಯಲು ಚಿತ್ರದಲ್ಲಿನ ಯುದ್ಧ ವಿಶೇಷಗಳು ಮತ್ತು ಅದರ ವಿನ್ಯಾಸಗಳು, ಮತ್ತು ಅದರ ಮೇಕಿಂಗ್ ಸಹಕಾರಿಯಾಗಿದೆ. ಚಿತ್ರದ ಬಗ್ಗೆ ವಿಮರ್ಶೆಗಳು ಏನೇ ಇರಬಹುದು ಆದರೆ ಚಿತ್ರ ಮಾತ್ರ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಲನಚಿತ್ರ ವಿಶ್ಲೇಷಕರು ಈ ಚಿತ್ರವು ಜಾಗತಿಕ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ತೀರ್ಮಾನಿಸಿದ್ದಾರೆ. ಚೀನಾದಲ್ಲಿ ರಜಾದಿನಗಳ ಸರಣಿಯಿಂದಾಗಿ ಚೀನಾ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದ ಗಳಿಕೆ ಕಂಡಿದೆ. ಜೊತೆಗೆ ಅದರ ಪರಿಣಾಮ ವರ್ಲ್ಡ್ ಬಾಕ್ಸಾಫೀಸ್ ಮೇಲೂ ಕೂಡ ಕಂಡುಬಂದಿದೆ.

    ಹಾಲಿವುಡ್ ವರ್ಸಸ್ ಚೈನಿಸ್

    ಹಾಲಿವುಡ್ ವರ್ಸಸ್ ಚೈನಿಸ್

    ಈ ವರ್ಷ ಹಾಲಿವುಡ್ ಗೆ ಹೋಲಿಸಿದರೆ. ಚೈನೀಸ್ ಸಿನಿಮಾಗಳ ಪ್ರಾಬಲ್ಯ ಅಗಾಧವಾಗಿ ಕಾಣುತ್ತಿದೆ. 'ಡಿಟೆಕ್ಟಿವ್ ಚೈನಾಟೌನ್ 3' 690 ಮಿಲಿಯನ್ ಡಾಲರ್ ಗಳಿಸಿದರೆ, 'ಹಾಯ್, ಮೊಮ್' 840 ಮಿಲಿಯನ್ ಡಾಲರ್ ಗಳಿಸಿದೆ.

    'ಯುಎಸ್ ವರ್ಸಸ್ ಚೀನಾ' ಸೂಪರ್ ಪವರ್ ಗಾಗಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಯುತ್ತಿರುವ ಈ ಸಮಯದಲ್ಲಿ 'ಹಾಲಿವುಡ್ ವರ್ಸಸ್ ಚೈನಿಸ್' ಪೈಪೋಟಿ ಕೂಡ ಜಾಗತಿಕ ಸಿನಿಮಾ ರಂಗದ ಮೇಲೆ ಕಂಡುಬರುತ್ತಿದೆ.

    English summary
    'Battle at lake Changjin' movie earned very big amount of money than any other recent movies. It beaten No Time To Die and Venom 2 movies in collection.
    Thursday, October 14, 2021, 18:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X