ಹಾಲಿವುಡ್ ನಲ್ಲಿ ಮಿಂಚುತ್ತಿರುವ ಬೆಂಗಳೂರು ಹುಡುಗಿ
ಹಾಲಿವುಡ್ ನಲ್ಲಿ ಕೆಲಸ ಮಾಡಬೇಕು, ಹಾಲಿವುಡ್ ಸಿನಿಮಾ, ಶೋಗಳಲ್ಲಿ ತನ್ನ ಪ್ರತಿಭೆ ತೋರಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಆದ್ರೆ, ಈ ಆಸೆ ಕೆಲವರಿಗೆ ಮಾತ್ರ ಈಡೇರುತ್ತೆ. ಇದೀಗ, ಇಂತಹ ಆಸೆಯನ್ನ ನೆರವೇರಿಸಿಕೊಂಡಿದ್ದಾರೆ ಬೆಂಗಳೂರು ಮೂಲದ ಹುಡುಗಿ ಆರ್ಗ್ಯ ಸದನ್.
ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಪದವಿ (Architecture-ವಾಸ್ತುಶಿಲ್ಪ) ಮುಗಿಸಿರುವ ಆರ್ಗ್ಯ ಸದನ್ ಸದ್ಯ ಹಾಲಿವುಡ್ ಟಿವಿ ಕಾರ್ಯಕ್ರಮದಲ್ಲಿ ಸೆಟ್ ಡಿಸೈನರ್ ಆಗಿ ಕೆಲಸ ಮಾಡ್ತಿದ್ದಾರೆ.
ಫಾಕ್ಸ್ ಟಿವಿಯಲ್ಲಿ ಪ್ರಸಾರವಾಗುವ 9-1-1 ಶೋನಲ್ಲಿ ಆರ್ಗ್ಯ ಸದನ್ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ. ಸೀಸನ್ ಒಂದರಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿದ್ದ ಆರ್ಗ್ಯ ಈಗ ಎರಡನೇ ಆವೃತ್ತಿಯಲ್ಲಿ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಪದವಿ ಮಾಡಿದ್ದ ಆರ್ಗ್ಯ ಅಮೇರಿಕನ್ ಫಿಲಂ ಸಂಸ್ಥೆಯಲ್ಲಿ ಮಾಸ್ಟರ್ ಡಿಗ್ರಿ (Production Design) ಮಾಡಿದ್ದಾರೆ. ಅದಕ್ಕೂ ಮುಂಚೆ ಕೆಪ್ ಟೌನ್ ನಲ್ಲಿ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಆ ವೇಳೆ ಹಾಲಿವುಡ್ ನ ಖ್ಯಾತ ಡಿಸೈನರ್ Jeffrey Mossa ಅವರನ್ನ ಸಂಪರ್ಕಿಸಿ ಅವರ ಸಹಾಯಕರಾಗಿ ಸೇರಿಕೊಂಡರು.
ಬಳಿಕ ಅನೇಕ ಮಂದಿ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಜೊತೆ ಮಾತನಾಡುವ ಅವಕಾಶ ಪಡೆದುಕೊಂಡರು. ಅಂತಾರಾಷ್ಟ್ರೀಯ ಮಟ್ಟದ ಡಿಸೈನರ್ ಗಳಿಂದ ಅನೇಕ ವಿಷ್ಯಗಳನ್ನ ತಿಳಿದುಕೊಳ್ಳುವ ಚಾನ್ಸ್ ಪಡೆದುಕೊಂಡ ಅರ್ಗ್ಯ ಇಂದು ಹಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ.
ಹೀಗೆ, ಬೆಂಗಳೂರಿನ ಹುಡುಗಿ ಆರ್ಗ್ಯ ಸದನ್ ಈಗ ಹಾಲಿವುಡ್ ನಲ್ಲಿ ತನ್ನದೇ ಆದ ಪ್ರತಿಭೆಯಿಂದ ಗುರುತಿಸಿಕೊಂಡು ಕರ್ನಾಟಕದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಯಶಸ್ಸು ಮತ್ತಷ್ಟು ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿದೆ.


Click it and Unblock the Notifications











