ಒಂದು ಶೋಗೆ 200 ಕೋಟಿ ಸಂಭಾವನೆ ಪಡೆಯುತ್ತಿರುವ ಗಾಯಕಿ! ಯಾರೀಕೆ?

By ಫಿಲ್ಮಿಬೀಟ್ ಡೆಸ್ಕ್

ಗಾಯಕರ ಲೈವ್ ಶೋಗಳು, ಕಾನ್‌ಸರ್ಟ್‌ಗಳಿಗೆ ಒಳ್ಳೆಯ ಬೇಡಿಕೆ ಇದೆ. ಹಲವು ಗಾಯಕರು, ಸಂಗೀತ ನಿರ್ದೇಶಕರು, ನೃತ್ಯಕಲಾವಿದರು, ಸಿನಿಮಾಗಳಲ್ಲಿ ಕೆಲಸ ಮಾಡುವುದಕ್ಕಿಂತಲೂ ಲೈವ್ ಶೋ ನೀಡುವುದಕ್ಕೆ ಆದ್ಯತೆ ನೀಡುತ್ತಾರೆ. ಇದಕ್ಕೆ ಕಾರಣ ಅಲ್ಲಿ ಸಿಗುವ ದೊಡ್ಡ ಮೊತ್ತದ ಸಂಭಾವನೆ.

ಭಾರತದ ಹಲವು ಗಾಯಕರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಒಳ್ಳೆಯ ಬೇಡಿಕೆ ಇದೆ. ಎಆರ್ ರೆಹಮಾನ್ ಆಗಾಗ್ಗೆ ವರ್ಲ್ಡ್ ಟೂರ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಸೋನು ನಿಗಮ್, ಕೈಲಾಶ್ ಖೇರ್ ಇನ್ನೂ ಹಲವು ಹೊಸ ಹಳೆಯ ಗಾಯಕರು ಸಹ ಹೊರದೇಶಗಳಲ್ಲಿ ಲೈವ್ ಶೋ ಮಾಡುತ್ತಲೇ ಇರುತ್ತಾರೆ.

ಈ ಲೈವ್ ಶೋಗಳಿಂದ ಒಳ್ಳೆಯ ಸಂಭಾವನೆ ಸಿಗುತ್ತದೆ ಆದರೆ ಒಬ್ಬ ಗಾಯಕಿ ಮಾತ್ರ ಹಿಂದೆಂದೂ ಯಾವ ಗಾಯಕನೂ ಕಾಣದಷ್ಟು ಸಂಭಾವನೆ ಪಡೆಯುತ್ತಿದ್ದಾರೆ!

Beyonce Charging 200 Crore Rs For Her Live Show In Dubai

ಹೌದು, ಜನಪ್ರಿಯ ಪಾಪ್ ಗಾಯಕಿ ಬಿಯಾನ್ಸೆ, ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಖಾಸಗಿ ಶೋ ನಡೆಸಲು ಮುಂದಾಗಿದ್ದು, ಕೆಲವೆ ಗಂಟೆಗಳ ಈ ಶೋಗೆ ಸರಿ ಸುಮಾರು 200 ಕೋಟಿ ಹಣವನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ.

ದುಬೈನ ಐಶಾರಾಮಿ ಅಟ್ಲಾಂಟೀಸ್ ಹೋಟೆಲ್‌ನಲ್ಲಿ ಬಿಯಾನ್ಸೆಯ ಈ ಶೋ ನಡೆಯಲಿದೆ. ಆದರೆ ಶೋಗೆ ಆಹ್ವಾನಿತರು ಮಾತ್ರವೇ ಹಾಜರಾಗಲಿದ್ದಾರೆ. ಕಡಿಮೆ ಜನ ಸೇರುವ ಶೋಗೆ ಅತಿ ಹೆಚ್ಚು ಸಂಭಾವನೆ ಪಡೆದ ಶ್ರೇಯ ಬಿಯಾನ್ಸೆ ಪಾಲಾಗಿದೆ. ಶೋಗಾಗಿ ಬಿಯಾನ್ಸೆ ತಾಲೀಮು ನಡೆಸುತ್ತಿರುವ ದೃಶ್ಯಗಳನ್ನು ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ.

ದುಬೈನ ಬಿಯಾನ್ಸೆಯ ಈ ಇವೆಂಟ್‌ಗೆ ದುಬೈನ ಗಣ್ಯರು ಹಾಗೂ ದುಬೈನ ಕೆಲವು ಐಶಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವವರು ಹಾಗೂ ಹೋಟೆಲ್‌ಗಳ ಐಶಾರಾಮಿ ಸೂಟ್‌ಗಳಲ್ಲಿ ಸ್ಟೇ ಆಗಿರುವವರನ್ನು ಮಾತ್ರವೇ ಆಹ್ವಾನಿಸಲಾಗಿದೆ. ಕೇವಲ ಎ ಲಿಸ್ಟೆಡ್ ಅತಿಥಿಗಳು ಮಾತ್ರವೇ ಬಿಯಾನ್ಸೆಯ ಶೋ ನೋಡಲಿದ್ದಾರೆ. ಜನಪ್ರಿಯ ಬ್ರಿಟೀಷ್ ರ್ಯಾಪರ್ ಬೀ ರನ್‌ವೇ ಸಹ ಬಿಯಾನ್ಸೆಯ ಶೋ ಗೆ ವಿಶೇಷ ಆಹ್ವಾನಿತರಾಗಿದ್ದು, ಈ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಿಯಾನ್ಸೆ ಹೀಗೊಂದು ಲೈವ್ ಶೋ ನೀಡಿ ಐದು ವರ್ಷಗಳಾಗಿದ್ದವು. ಹಲವು ಕಾರಣಗಳಿಂದ ಬಿಯಾನ್ಸೆ ಲೈವ್ ಶೋ ನೀಡಿರಲಿಲ್ಲ. ಇದೀಗ ಬಿಯಾನ್ಸೆ ತಮ್ಮ 'ರಿನಾಯ್ಸೆನ್ಸ್ ಟೂರ್' ಅನ್ನು ಘೋಷಿಸಿದ್ದು, ಈ ಶೋ ಕೆಲವು ಪ್ರಮುಖ ನಗರಗಳಲ್ಲಿ ನಡೆಯಲಿದೆ. ಶೋನ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ತಮ್ಮ 'ರಿನಾಯ್ಸೆನ್ಸ್ ಟೂರ್' ಗೆ ಮುಂಚಿತವಾಗಿ ಬಿಯಾನ್ಸೆ ದುಬೈನ ಶೋ ಮಾಡುತ್ತಿದ್ದಾರೆ.

More from Filmibeat

English summary
Singer Beyonce charging 200 crore rs for her live show which is organized in Dubai's Atlanta Hotel. A list guests were invited to the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X