Oppenheimer controversy: ಪ್ರಣಯ ದೃಶ್ಯದಲ್ಲಿ ಭಗವದ್ಗೀತೆ: 'ಆಪೆನ್‌ಹೈಮರ್' ಸಿನಿಮಾ ಬ್ಯಾನ್‌ಗೆ ಒತ್ತಾಯ

ಈ ವಾರ ಬಿಡುಗಡೆಯಾಗಿರುವ ಹಾಲಿವುಡ್‌ನ 'ಆಪೆನ್‌ಹೈಮರ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದೆ. ಭಾರತದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಚಿತ್ರಕ್ಕೆ ಹೊಸ ವಿವಾದ ಸುತ್ತಿಕೊಂಡಿದೆ. ಚಿತ್ರದಲ್ಲಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಗೆ ಅವಮಾನ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ.

ಖ್ಯಾತ ವಿಜ್ಞಾನಿ ಆಪೆನ್‌ಹೈಮರ್ ಮೇಲೆ ಹಿಂದೂ ಗ್ರಂಥಗಳ ಪ್ರಭಾವ ಹೆಚ್ಚಾಗಿ ಇತ್ತು. ಅಣುಬಾಂಬ್ ಕಂಡುಹಿಡಿಯುವ ಹಾದಿಯಲ್ಲಿ ಭಗವದ್ಗೀತೆ ತನಗೆ ಸಹಕಾರಿಯಾಗಿತ್ತು ಎಂದು ಖುದ್ದು ಆಪೆನ್‌ಹೈಮರ್ ಹೇಳಿದ್ದರು. ಇದೀಗ ಅವರ ಜೀವನವನ್ನಾಧರಿಸಿ ಕ್ರಿಸ್ಟೋಫರ್ ನೋಲನ್ 'ಆಪೆನ್‌ಹೈಮರ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಆಪೆನ್‌ಹೈಮರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಐರಿಷ್ ನಟ ಕಿಲಿಯನ್ ಮರ್ಫಿ ಕೂಡ ಭಗವದ್ಗೀತೆ ಓದಿದ್ದಾಗಿ ಹೇಳಿದ್ದರು.

Bhagavad Gita in intimate Scene In Oppenheimer Sparks controversy

'ಆಪೆನ್‌ಹೈಮರ್' ಚಿತ್ರದಲ್ಲಿ ಆ ಪಾತ್ರವನ್ನು ಅರ್ಥಮಾಡಿಕೊಳ್ಳಲು ತಾನು ಭಗವದ್ಗೀತೆಯನ್ನು ಓದಿದ್ದೇನೆ ಎಂದು ಕಿಲಿಯನ್ ಮರ್ಫಿ ಹೇಳಿಕೊಂಡಿದ್ದರು. ಆದರೆ ಚಿತ್ರದಲ್ಲಿ ಭಗವದ್ಗೀತೆಗೆ ಅವಮಾನ ಮಾಡಿದ್ದಾರೆ, ಇದು ಆ ದೃಶ್ಯಗಳ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದೆ ಎನ್ನುವ ಆಕ್ರೋಶ ವ್ಯಕ್ತವಾಗ್ತಿದೆ. ಚಿತ್ರದ ಮೇಲೆಭಗದ್ಗೀತೆ ಪ್ರಭಾವ ಇದೆ. ಅದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಚಿತ್ರದ ದೃಶ್ಯವೊಂದರಲ್ಲಿ ಫ್ಲಾರೆನ್ಸ್ ಪಿಗ್ಸ್ ಪಾತ್ರಧಾರಿ ಜೀನ್ ಟಾಟ್ಸ್ಲಾಕ್ ಮತ್ತು ಆಪೆನ್‌ಹೈಮರ್ ನಡುವಿನ ಪ್ರಣಯ ದೃಶ್ಯದಲ್ಲಿ ಆಕೆ ಭಗವದ್ಗೀತೆಯನ್ನು ಓದುತ್ತಿರುವುದನ್ನು ತೋರಿಸಲಾಗಿದೆ. ಇದೇ ವಿಚಾರ ಈಗ ವಿವಾದ ಸೃಷ್ಟಿಸಿದೆ.

ಕೆಲವು ಹಿಂದೂ ಸಂಘಟನೆಗಳು 'ಆಪೆನ್‌ಹೈಮರ್' ಚಿತ್ರದ ಈ ದೃಶ್ಯದ ಬಗ್ಗೆ ಆಕ್ರೋಶಗೊಂಡಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ನೆಟ್ಟಿಗರು ಸಹ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಿರ್ದೇಶಕ ನೋಲನ್ ತಮ್ಮ ಚಿತ್ರದಲ್ಲಿ ಭಗವದ್ಗೀತೆಯನ್ನು ಪ್ರಸ್ತಾಪಿಸಿರುವುದು ಒಳ್ಳೆಯದು, ಆದರೆ ಪವಿತ್ರ ಭಗವದ್ಗೀತೆಯನ್ನು ಬೋಲ್ಡ್ ದೃಶ್ಯಗಳಲ್ಲಿ ತೋರಿಸಿರುವುದ ಸೂಕ್ತವಲ್ಲ ಎನ್ನುತ್ತಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಈ ದೃಶ್ಯ ತೆಗೆದು ಹಾಕಬೇಕೆಂದು ಅಥವಾ ಭಾರತದಲ್ಲಿ ಚಿತ್ರವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಅಂದಹಾಗೆ ಈ ಸಿನಿಮಾದಲ್ಲಿ ಬೋಲ್ಡ್ ದೃಶ್ಯದಲ್ಲಿ ಮಾತ್ರ ಭಗವದ್ಗೀತೆ ಪ್ರಸ್ತಾಪವಾಗಿಲ್ಲ. ಚಿತ್ರದಲ್ಲಿ ಸಾಕಷ್ಟು ಕಡೆಗಳಲ್ಲಿ ಭಗವದ್ಗೀತೆಯ ಪ್ರಭಾವ ಕಾಣಬಹುದು. ನಿಜ ಹೇಳಬೇಕು ಅಂದರೆ ನಿಜ ಜೀವನದಲ್ಲಿಯೂ ಸಹ, ಆಪೆನ್‌ಹೈಮರ್, ಭಗವದ್ಗೀತೆ ಮತ್ತು ವಿವಿಧ ಹಿಂದೂ ಮಹಾಕಾವ್ಯಗಳನ್ನು ಓದಿದ್ದರು. ಅವರಿಗೆ ಸಂಸ್ಕೃತ ಭಾಷೆಯ ಮೇಲೆ ಅಪಾರ ಅಭಿಮಾನವಿತ್ತು. ಸಂಸ್ಕೃತ ಕಲಿತ್ತಿದ್ದರು. ಭಗವದ್ಗೀತೆಯ ಒಂದು ಶ್ಲೋಕ ಆಪೆನ್‌ಹೈಮರ್ ಮೇಲೆ ತುಂಬಾ ಪ್ರಭಾವ ಬೀರಿತು. ಇದೇ ಅವರಲ್ಲಿ ಪರಿವರ್ತನೆಗೆ ಕಾರಣ ಎನ್ನಲಾಗುತ್ತದೆ.

Bhagavad Gita in intimate Scene In Oppenheimer Sparks controversy

ಇನ್ನು ಆಪೆನ್‌ಹೈಮರ್ ಸಿನಿಮಾ ಕಥೆ ಏನು ಎನ್ನುವುದನ್ನು ನೋಡುವುದಾದರೆ 2ನೇ ಮಹಾಯುದ್ಧದ ಸಮಯದಲ್ಲಿ ಅಣುಬಾಂಬ್ ಸಿದ್ಧಪಡಿಸಿದ ಕಥೆ ಚಿತ್ರದಲ್ಲಿದೆ. ಅಣುಬಾಂಬ್ ತಯಾರಿಸುವಂತೆ ಅಮೇರಿಕನ್ ಪರಮಾಣು ಶಕ್ತಿಯ ಅಧ್ಯಕ್ಷ ಲೂಯಿಸ್ ಸ್ಟ್ರಾಸ್, ಪ್ರಸಿದ್ಧ ವಿಜ್ಞಾನಿ ಓಪನ್ ಹೈಮರ್ ಅವರನ್ನು ಸಂಪರ್ಕಿಸುತ್ತಾರೆ. ಲಾಸ್ ಅಲ್ಮಾಸ್ ಎಂಬ ನಗರ ನಿರ್ಮಿಸಿ, ಕೆಲ ವಿಜ್ಞಾನಿಗಳ ಜೊತೆ ಅಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಾರೆ. ಪರಮಾಣು ಬಾಂಬ್ ಅನ್ನು ಯಶಸ್ವಿಯಾಗಿ ತಯಾರಿಸುತ್ತಾರೆ. ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕಾ ಅಣುಬಾಂಬ್ ಪ್ರಯೋಗಿಸುತ್ತದೆ.

ಅಣುಬಾಂಬ್ ತಯಾರಿಸುವ ಮುನ್ನ ಆಪೆನ್‌ಹೈಮರ್ ಜೀವನದಲ್ಲಿ ಏನಾಯಿತು? ಅಣುಬಾಂಬ್ ಪ್ರಯೋಗದ ನಂತರ ನಡೆದ ಬೆಳವಣಿಗೆಗಳೇನು? ಆಪೆನ್‌ಹೈಮರ್ ಕೊನೆಗೆ ಪಶ್ಚಾತಾ ಪಡುವುದು ಯಾಕೆ? ಹೀಗೆ ಸಾಕಷ್ಟು ವಿಚಾರಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಮ್ಯಾಟ್ ಡ್ಯಾಮನ್, ರಾಬರ್ಟ್ ಡೌನಿ ಜೂನಿಯರ್, ಎಮಿಲಿ ಬ್ಲಂಟ್, ರಾಮಿ ಮಾಲೆಕ್ ಸೇರಿದಂತೆ ಹಲವರು ಚಿತ್ರದ ತಾರಾಗಣದಲ್ಲಿದ್ದಾರೆ.

More from Filmibeat

English summary
Oppenheimer movie Bhagavad Gita controversy. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X