twitter
    For Quick Alerts
    ALLOW NOTIFICATIONS  
    For Daily Alerts

    'ಬ್ಲ್ಯಾಕ್ ಪ್ಯಾಂಥರ್' ನಾಯಕ ನಟ ಚಾಡ್ವಿಕ್ ಬೋಸ್‌ಮನ್ ನಿಧನ

    |

    'ಅವೆಂಜರ್ಸ್‌' ಸಿನಿಮಾ ಸರಣಿಯ ಸೂಪರ್‌ ಹೀರೋಗಳಲ್ಲಿ ಒಬ್ಬರಾದ 'ಬ್ಲ್ಯಾಕ್ ಪ್ಯಾಂಥರ್' ಪಾತ್ರ ನಿರ್ವಹಿಸುತ್ತಿದ್ದ ಚಾಡ್ವಿಕ್ ಬೋಸ್‌ಮನ್ ಅಕಾಲಿಕವಾಗಿ ಸಾವಿಗೆ ತುತ್ತಾಗಿದ್ದಾರೆ.

    ಅವೇಂಜರ್ಸ್ ಸರಣಿ ಜೊತೆಗೆ 'ಬ್ಲಾಕ್ ಪ್ಯಾಂಥರ್' ಸಿನಿಮಾದಲ್ಲಿಯೂ ನಟಿಸಿದ್ದ ಚಾಡ್ವಿಕ್ ಬೋಸ್‌ಮನ್ ತಮ್ಮ ಕಟ್ಟು ಮಸ್ತಾದ ದೇಹ, ಚುರುಕಾದ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು.

    ಸ್ಪೈಡರ್ ಮ್ಯಾನ್, ಸೂಪರ್‌ಮ್ಯಾನ್, ಹಲ್ಕ್, ಐರನ್ ಮ್ಯಾನ್, ಬ್ಯಾಟ್‌ಮ್ಯಾನ್ ಹತ್ತು ಹಲವು ಸೂಪರ್ ಹೀರೋ ಪಾತ್ರಗಳು ಹಾಲಿವುಡ್‌ನಲ್ಲಿ ಈಗಾಗಲೇ ಖ್ಯಾತವಾಗಿದ್ದರೂ ಕೆಲವೇ ವರ್ಷಗಳ ಹಿಂದೆ ಬಂದ ಬ್ಲ್ಯಾಕ್ ಪ್ಯಾಂಥರ್ ಕಡಿಮೆ ಅವಧಿಯಲ್ಲಿ ಮೆಚ್ಚಿನ ಸೂಪರ್ ಹೀರೋ ಎನಿಸಿಕೊಂಡಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ಬ್ಲ್ಯಾಕ್ ಪ್ಯಾಂಥರ್ ಪಾತ್ರ ನಿರ್ವಹಿಸುತ್ತಿದ್ದ ಚಾಡ್ವಿಕ್ ಬೋಸ್‌ಮನ್.

    2016 ರಲ್ಲಿಯೇ ಕ್ಯಾನ್ಸರ್‌ಗೆ ತುತ್ತಾಗಿದ್ದ ಚಾಡ್ವಿಕ್

    2016 ರಲ್ಲಿಯೇ ಕ್ಯಾನ್ಸರ್‌ಗೆ ತುತ್ತಾಗಿದ್ದ ಚಾಡ್ವಿಕ್

    2016 ರಲ್ಲಿಯೇ ಚಾಡ್ವಿಕ್‌ ಬೋಸ್‌ಮನ್‌ ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆಗಿನಿಂದಲೂ ಚಿಕಿತ್ಸೆಗಳು ನಡೆಯುತ್ತಲೇ ಇದ್ದವು. ಆದರೆ ಯಾವುದೂ ಫಲಿಸಲಿಲ್ಲ. ನಿನ್ನೆ (ಆಗಸ್ಟ್ 28) ರಂದು ಅವರು ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

    ಕ್ಯಾಪ್ಟನ್ ಅಮೆರಿಕದಲ್ಲಿ ಮೊದಲ ಬಾರಿಗೆ ಬ್ಲ್ಯಾಕ್ ಪ್ಯಾಂಥರ್ ಪಾತ್ರ

    ಕ್ಯಾಪ್ಟನ್ ಅಮೆರಿಕದಲ್ಲಿ ಮೊದಲ ಬಾರಿಗೆ ಬ್ಲ್ಯಾಕ್ ಪ್ಯಾಂಥರ್ ಪಾತ್ರ

    2016 ರಲ್ಲಿ ಕ್ಯಾಪ್ಟನ್ ಅಮೆರಿಕ ಸಿವಿಲ್ ವಾರ್ ಸಿನಿಮಾದಲ್ಲಿ ಮೊದಲ ಬಾರಿಗೆ ಬ್ಲ್ಯಾಕ್ ಪ್ಯಾಂಥರ್ ಆಗಿ ಕಾಣಿಸಿಕೊಂಡರು ಚಾಡ್ವಿಕ್ ಬೋಸ್‌ಮನ್. ಬ್ಲ್ಯಾಕ್ ಪ್ಯಾಂಥರ್ ಪಾತ್ರವನ್ನು ಅದೇ ಮೊದಲ ಬಾರಿಗೆ ಅವರು ನಿರ್ವಹಿಸಿದ್ದರು. ನಂತರ ಎರಡು ಅವೇಂಜರ್ಸ್ ಸರಣಿಯಲ್ಲಿ ಅವರ ಪಾತ್ರ ಮುಂದುವರೆಯಿತು.

    ಡಾ 5 ಬ್ಲಡ್ ಕೊನೆಯದಾಗಿ ಬಿಡುಗಡೆಯಾದ ಸಿನಿಮಾ

    ಡಾ 5 ಬ್ಲಡ್ ಕೊನೆಯದಾಗಿ ಬಿಡುಗಡೆಯಾದ ಸಿನಿಮಾ

    ಬ್ಲ್ಯಾಕ್ ಪ್ಯಾಂಥರ್ ಹೆಸರಿನ ಪ್ರತ್ಯೇಕ ಸಿನಿಮಾದಲ್ಲಿ ಚಾಡ್ವಿಕ್ ನಟಿಸಿದ್ದರು. ಟಿ ಚಾಲಾ ದ ರಾಜನಾಗಿ, ಬ್ಲ್ಯಾಕ್ ಪ್ಯಾಂಥರ್ ಆಗಿ ಅದ್ಭುತ ಅಭಿನಯ ನೀಡಿದ್ದರು. ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೇ ಜೂನ್ 12 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ 'ಡಾ 5 ಬ್ಲಡ್' ನಲ್ಲಿ ಅವರು ನಟಿಸಿದ್ದರು.

    ಇನ್ನೊಂದು ಸಿನಿಮಾ ಬಿಡುಗಡೆ ಆಗಬೇಕಿದೆ

    ಇನ್ನೊಂದು ಸಿನಿಮಾ ಬಿಡುಗಡೆ ಆಗಬೇಕಿದೆ

    1976 ರಲ್ಲಿ ಸೌತ್ ಕೆರೊಲಿನಾದ ಆಂಡರ್ಸನ್ ಎಂಬಲ್ಲಿ ಹುಟ್ಟಿದ ಚಾಡ್ವಿಕ್‌ ಆರಂಭದಲ್ಲಿ ಕೆಲವು ಟಿವಿ ಶೋ ಗಳಲ್ಲಿ ನಟಿಸಿದರು. ನಂತರ 2008 ರಿಂದ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಅವರು ನಟಿಸಿರುವ ಕೊನೆಯ ಸಿನಿಮಾ ಮಾ ರೈನೀಸ್ ಬ್ಲ್ಯಾಕ್ ಬಾಟಮ್ ಇದು ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ.

    English summary
    Black Panther fame hero Chadwick Boseman died of cancer. He is 42 years old.
    Saturday, August 29, 2020, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X