ಮತ್ತೊಬ್ಬ ಬಾಲಿವುಡ್ ನಟ ಹಾಲಿವುಡ್‌ ಕಡೆಗೆ

ಬಾಲಿವುಡ್ ನ ಕೆಲವು ನಟಿಯರು ಈಗಾಗಲೇ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿ ಕೆಲವರು ಯಶಸ್ವಿಯೂ ಆಗಿದ್ದಾರೆ. ಆದರೆ ನಟರು ಹಾಲಿವುಡ್‌ ನಲ್ಲಿ ಯಶಸ್ಸು ಕಂಡಿರುವುದು ತುಸು ಕಡಿಮೆ.

ಇದೀಗ ಯುವ ಬಾಲಿವುಡ್ ನಟರೊಬ್ಬರು ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ನಟ ಅಲಿ ಫಾಜಲ್ ಹಾಲಿವುಡ್‌ನ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಅಲಿಗೆ ಈ ಅವಕಾಶ ಸಿಕ್ಕಿರುವ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತ್ರಿ ಇಡಿಯಟ್ಸ್ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಅಲಿ ಫಾಜಲ್ ಆ ನಂತರ ಫಕ್ರಿ, ಹ್ಯಾಪಿ ಬಾಗ್ ಜಾಯೇಜಿ, ಮಿಲಾನ್ ಟಾಕೀಸ್ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿರುವಂತೆ, 'ಕೋಡ್ ನೇಮ್ ಜಾನಿ ವಾಕರ್' ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Bollywood Actor Ali Fazal Bagged Opportunity In Hollywood Movie

ಈ ಹಿಂದೆ ಅವರು 'ಫಾಸ್ಟ್ ಆಂಡ್ ಫ್ಯೂರಿಯಸ್ 7' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ವಿಕ್ಟೋರಿಯಾ ಆಂಡ್ ಅಬ್ದುಲ್' ಇಂಗ್ಲಿಷ್ ಸಿನಿಮಾದಲ್ಲಿ ಸಹ ಅಲಿ ನಟಿಸಿದ್ದಾರೆ.

ನಾಸಿರುದ್ಧೀನ್ ಶಾ, ಅನುಪಮ್ ಖೇರ್, ಅಮಿತಾಬ್ ಬಚ್ಚನ್, ರಣದೀಪ್ ಹೂಡಾ, ಇರ್ಫಾನ್ ಖಾನ್ ಇನ್ನೂ ಕೆಲವು ನಟರು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲ್ಲಿಕಾ ಶೆರಾವತ್, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ನಟಿಯರು.

More from Filmibeat

English summary
Bollywood actor Ali Fazal acting in Hollywood movie 'code name Jhony Walker'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X