For Quick Alerts
  ALLOW NOTIFICATIONS  
  For Daily Alerts

  ಜೇಮ್ಸ್ ಬಾಂಡ್ ನಾಯಕಿ ತಾನ್ಯಾ ರಾಬರ್ಟ್ಸ್ ನಿಧನ

  |

  1985 ರಲ್ಲಿ ಬಿಡುಗಡೆ ಆಗಿದ್ದ ಬಾಂಡ್ ಸಿನಿಮಾ 'ಎ ವೀವ್‌ ಟು ಕಿಲ್' ನ ನಾಯಕಿ ತಾನ್ಯಾ ರಾಬರ್ಟ್ಸ್ ಜನವರಿ 03 ರಂದು ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

  ಡಿಸೆಂಬರ್ 24 ರಂದು ತಮ್ಮ ನಾಯಿಗಳೊಂದಿಗೆ ವಾಕಿಂಗ್ ಹೋಗಿದ್ದಾಗ ಅಚಾನಕ್ಕನೆ ಬಿದ್ದಿದ್ದ ತಾನ್ಯಾರನ್ನು ಲಾಸ್ ಏಂಜಲಿಸ್ ಸೆಡರ್-ಸೈನರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದ ತಾನ್ಯಾ ನಿನ್ನೆ ಜೀವ ಬಿಟ್ಟಿದ್ದಾರೆ.

  ತಾನ್ಯಾ ಗೆ ಆಪ್ತವಾಗಿದ್ದ ಮೈಕ್ ಪಿಂಗೆಲ್ ಹೇಳಿರುವಂತೆ, ತಾನ್ಯಾ ರಾಬರ್ಟ್ಸ್ ಗೆ ಕೋವಿಡ್ ಆಗಿರಲಿಲ್ಲ. ಅವರು ಆಸ್ಪತ್ರೆ ಸೇರುವ ಮೊದಲು ಅವರಿಗೆ ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಆಸ್ಪತ್ರೆಯವರೂ ಸಹ ಸಾವಿಗೆ ನಿಖರ ಕಾರಣ ಹೇಳಿಲ್ಲ.

  ಬಾಂಡ್ ಸಿನಿಮಾಗಳ ಜೊತೆಗೆ 'ದಟ್ 70's ಶೋ' ದ ಮೂಲಕವೂ ಭಾರಿ ಜನಪ್ರಿಯತೆಯನ್ನು ತಾನ್ಯಾ ರಾಬರ್ಟ್ಸ್ ಗಳಿಸಿದ್ದರು. 1975 ರಲ್ಲಿ ನಟನೆ ಪ್ರಾರಂಭಿಸಿದ್ದ ತಾನ್ಯಾ ರೋಬರ್ಟ್ಸ್ ಸಿನಿಮಾ ಹಾಗೂ ಟಿವಿ ಎರಡರಲ್ಲೂ ಜನಪ್ರಿಯತೆ ಗಳಿಸಿದ್ದರು.

  1994 ರಲ್ಲಿ ಬಿಡುಗಡೆ ಆದ 'ಡೀಪ್ ಡೌನ್' ತಾನ್ಯಾ ನಟಿಸಿದ್ದ ಕೊನೆಯ ಸಿನಿಮಾ, 2005 ರಲ್ಲಿ ಬಾರ್ಬರ್ ಶಾಪ್ ಹೆಸರಿನ ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ನಟನೆಯಿಂದ ದೂರ ಉಳಿದಿದ್ದರು ತಾನ್ಯಾ.

  1974 ರಲ್ಲಿ ಬ್ಯಾರಿ ರಾಬರ್ಟ್ಸ್ ಜೊತೆ ಮದುವೆ ಆಗಿದ್ದ ತಾನ್ಯಾ ರಾಬರ್ಟ್ಸ್ ಸಂತಸದ ಜೀವನ ಕಳೆದಿದ್ದರು. 2006 ರಲ್ಲಿ ಪತಿ ಮರಣ ಹೊಂದಿದರು. ಅವರಿಗೆ ಮಕ್ಕಳಿರಲಿಲ್ಲ.

  English summary
  Bond actress Tanya Roberts died in Los Angeles on January 03. She acted in A view to Kill bond movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X