ಚೀನಾದಲ್ಲಿ 'ಕಾಂಗ್ ಘರ್ಜನೆಗೆ ಮೊದಲ ವೀಕೆಂಡ್ ನಲ್ಲಿ 455 ಕೋಟಿ ಗಳಿಕೆ
ಕಳೆದ ತಿಂಗಳಷ್ಟೆ ಬಿಡುಗಡೆಯಾಗಿದ್ದ ಹಾಲಿವುಡ್ ನ ಅಡ್ವೆಂಚರ್ಸ್ ಸಿನಿಮಾ 'ಕಾಂಗ್: ಸ್ಕಲ್ ಐಲ್ಯಾಂಡ್' ಕಳೆದ ವೀಕೆಂಡ್(ಮಾರ್ಚ್ 24) ನಲ್ಲಿ ಚೀನಾದಲ್ಲಿ ತೆರೆಗೆ ಅಪ್ಪಳಿಸಿದೆ. ವಿಶೇಷ ಅಂದ್ರೆ ಚೀನದಲ್ಲಿ ಬಿಡುಗಡೆ ಆದ ನಾಲ್ಕು ದಿನಗಳಲ್ಲೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ.
'ಕಾಂಗ್: ಸ್ಕಲ್ ಐಲ್ಯಾಂಡ್' ಚೀನದಲ್ಲಿ $68.5 ಮಿಲಿಯನ್ (445 ಕೋಟಿ) ಗಳಿಸಿದೆ ಎಂದು Ent Group ಸ್ಥಳೀಯ ಮೂಲದ ಪ್ರಕಾರ ತಿಳಿಯಲಾಗಿದೆ. ಆದರೆ ಚಿತ್ರದ ವಿತರಕರಾದ ವಾರ್ನರ್ ಬ್ರೊಸ್ $72.1 ಮಿಲಿಯನ್ ಗಳಿಸಿರುವುದಾಗಿ ಹೇಳಿದ್ದಾರೆ.

ಸಿನಿಮಾ ಚೀನಾದಲ್ಲಿ 18,000 ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗುತ್ತಿದೆ, 115,000 ಪರದೆಗಳಿಗೆ ಪ್ರತಿದಿನ ಪ್ರದರ್ಶನಕ್ಕಾಗಿ ವಿತರಣೆ ಮಾಡಲಾಗಿದೆ ಎಂದು Ent Group ಹೇಳಿದೆ. ಅಲ್ಲದೇ 387 ಐಮ್ಯಾಕ್ಸ್ ಚಿತ್ರಮಂದಿರಗಳಿಂದ $6.5 ಮಿಲಿಯನ್ ಬಾಕ್ಸ್ ಆಫೀಸ್ ಗಳಿಕೆ ಆಗಿರುವುದಾಗಿ ತಿಳಿಯಲಾಗಿದೆ.
ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಚೀನದಲ್ಲಿ ಪ್ರಸ್ತುತ 'ಬ್ಯೂಟಿ ಅಂಡ್ ದಿ ಬೀಸ್ಟ್' ಮೊದಲ ಸ್ಥಾನದಲ್ಲಿದ್ದು, 'ಕಾಂಗ್: ಸ್ಕಲ್ ಐಲ್ಯಾಂಡ್' ದ್ವೀತಿಯ ಸ್ಥಾನದಲ್ಲಿದೆ. ಚೀನದ ಹೊಸ ಸಿನಿಮಾ 'ಟಾಪ್ ಫನ್ನಿ ಮ್ಯಾನ್: ದಿ ಮೂವಿ' ಮೂರನೇ ಸ್ಥಾನದಲ್ಲಿದ್ದು ಮೊದಲನೇ ದಿನ $6.99 ಮಿಲಿಯನ್ ಡಾಲರ್ ಗಳಿಸಿತ್ತು.

'ಕಾಂಗ್: ಸ್ಕಲ್ ಐಲ್ಯಾಂಡ್' ಸಿನಿಮಾವನ್ನು ಜಾರ್ಡನ್ ವೊಗ್ಟ್ ರಾಬರ್ಟ್ಸ್ ನಿರ್ದೇಶನ ಮಾಡಿದ್ದು, ಮಾನ್ ಸ್ಟರ್ ವರ್ಸ್ ಫಿಲ್ಮ್ ಸೀರೀಸ್ ಚಿತ್ರ ಇದಾಗಿದೆ. 185 ಮಿಲಿಯನ್ ಡಾಲರ್ ಬಜೆಟ್ ನ 'ಕಾಂಗ್: ಸ್ಕಲ್ ಐಲ್ಯಾಂಡ್' ಚಿತ್ರವನ್ನು ವಾರ್ನರ್ ಬ್ರೊಸ್, ಲೆಜೆಂಡರಿ ಎಂಟರ್ ಟೈನ್ ಮೆಂಟ್, ಟೆಂನ್ಸೆಂಟ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.


Click it and Unblock the Notifications











