ಕಾಸ್ಮೆಟಿಕ್ ಸರ್ಜರಿ ವೇಳೆ ನಾಲ್ಕು ಬಾರಿ ಹೃದಯಾಘಾತ, 29 ವರ್ಷದ ಮಾಡೆಲ್ ಸಾವು

ಸಿನಿಮಾ, ಮಾಡೆಲಿಂಗ್ ಇಂಡಸ್ಟ್ರಿಯಲ್ಲಿ ಕಾಸ್ಮೆಟಿಕ್ ಸರ್ಜರಿ ಎನ್ನುವುದು ಬಹಳ ಕಾಮನ್ ಎನಿಸಿಬಿಟ್ಟಿದೆ. ಅವಶ್ಯಕತೆ ಇಲ್ಲದಿದ್ದರೂ ಕೂಡ ಹಲವು ಮಂದಿ ಇದಕ್ಕೆ ಒಳಗಾಗುತ್ತಿದ್ದಾರೆ. ಅಂದ ಹೆಚ್ಚಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಜೀವ ತೆಗೆಯಬಹುದಾದ ಇಂತಹ ಸರ್ಜರಿಗೆ ಒಳಗಾಗಿ ತಮ್ಮ ಆಪ್ತರಿಗೆ ನೋವು ನೀಡುತ್ತಿದ್ದಾರೆ.

ಮೂಗಿನ ಸರ್ಜರಿ, ತುಟಿ ಮತ್ತು ಎದೆಯನ್ನು ತೆಳ್ಳಗೆ ಇಲ್ಲ ದಪ್ಪ ಮಾಡಿಸಿಕೊಳ್ಳುವುದು, ಮುಖದ ಸುಕ್ಕು ಕೊನೆಯಾಗಿಸುವುದು ಹೀಗೆ ಹಲವು ಕಾಸ್ಮೆಟಿಕ್ ಸರ್ಜರಿಗೆ ಈ ಕ್ಷೇತ್ರದವರು ಬಲಿಯಾಗುತ್ತಿದ್ದು, ಇದರಲ್ಲಿ ಯುವತಿಯರೇ ಹೆಚ್ಚಿದ್ದಾರೆ. ಇತ್ತೀಚೆಗೆ 29 ವರ್ಷದ ಬ್ರೆಜಿಲಿಯನ್ ಮಾಡೆಲ್ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾರೆ. ಇದು ಹಲವು ಸೆಲೆಬ್ರಿಟಿಗಳ ಆತಂಕಕ್ಕೆ ಕಾರಣವಾಗಿದೆ.

Brazilian influencer Luana Andrade (29) dies while undergoing cosmetic surgery

29 ವರ್ಷಕ್ಕೆ ಜೀವ ಕಳೆದುಕೊಂಡ ಸೆಲೆಬ್ರಿಟಿ

ಬ್ರೆಜಿಲಿಯನ್ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಆಗಿದ್ದ ಖ್ಯಾತ ಲುವಾನಾ ಆಂಡ್ರೇಡ್ ಕೇವಲ 29 ವರ್ಷಕ್ಕೆ ತಮ್ಮ ಜೀವ ಕಳೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ಹಲವು ಟಿವಿ ಶೋಗಳಲ್ಲಿ ಕೆಲಸ ಮಾಡಿ ಖ್ಯಾತಿ ಪಡೆದಿದ್ದ ಇವರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದರು.

ಬ್ರೆಜಿಲಿಯನ್ ಟಿವಿ ಶೋ ಪವರ್ ಕಪಲ್ 6 ನಿಂದ ಖ್ಯಾತಿ ಗಳಿಸಿದ ಇವರು, ಟಿವಿ ಶೋ ಡೊಮಿಂಗೊ ಲೀಗಲ್‌ನಲ್ಲಿ ಸ್ಟೇಜ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. 29 ವರ್ಷದ ಉದಯೋನ್ಮುಖ ನಟಿ ಕಾಸ್ಮೆಟಿಕ್ ಸರ್ಜರಿ ವೇಳೆ ಹೃದಯಾಘಾತಕ್ಕೆ ಒಳಗಾಗಿ ನವೆಂಬರ್ 7 ಮಧ್ಯಾಹ್ನ ನಿಧನರಾದ್ದಾರೆ.

ಕಾಸ್ಮೆಟಿಕ್ ಸರ್ಜರಿ ವೇಳೆ ನಾಲ್ಕು ಬಾರಿ ಹೃದಯಾಘಾತ

ಉದಯೋನ್ಮುಖ ನಟಿ ಲುವಾನಾ ಆಂಡ್ರೇಡ್ ಅವರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಿದ್ದರು. ಸರ್ಜರಿ ಸಮಯದಲ್ಲಿ ಹಠಾತ್ ಉಸಿರಾಟದ ತೊಂದರೆ ಮತ್ತು ಬರೋಬ್ಬರಿ ನಾಲ್ಕು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸ್ಯಾನ್ ಲೂಯಿಸ್ ಆಸ್ಪತ್ರೆಯಲ್ಲಿ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಲುವಾನಾ ಆಂಡ್ರೇಡ್ ಪಲ್ಮನರಿ ಎಂಬಾಲಿಸಮ್‌ನಿಂದ ನಿಧನರಾದರು ಎಂದು ಆಪ್ತರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Brazilian influencer Luana Andrade (29) dies while undergoing cosmetic surgery

ವೈದ್ಯರು ಎಷ್ಟೇ ಪ್ರಯತ್ನಿಸಿದರು ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ. ಪ್ಲಾಸ್ಟಿಕ್ ಸರ್ಜನ್ ಡಿಯೋವಾನೆ ರುವಾರೊ ಪ್ರಕಾರ, "ಲುವಾನಾ ಆಂಡ್ರೇಡ್ ಆರೋಗ್ಯ ಉತ್ತಮವಾಗಿತ್ತು. ಸಾಕಷ್ಟು ಪೂರ್ವ ಶಸ್ತ್ರಚಿಕಿತ್ಸಾ ವಿಧಾನವನ್ನು ನಡೆಸಲಾಗಿತ್ತು. ಆದರೂ, ದುರದೃಷ್ಟವಶಾತ್, ಈ ಸಾವು ಸಂಭವಿಸಿದೆ. ಇದು ನಮಗೆ ದುಃಖ ತಂದಿದೆ" ಎಂದಿದ್ದಾರೆ.

ಲುವಾನಾ ನಿಧನಕ್ಕೆ ಬ್ರೆಜಿಲಿಯನ್ ಫುಟ್ಬಾಲ್ ತಾರೆ ನೇಮರ್ ಸೇರಿದಂತೆ ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ನೇಮರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, 'ದುಃಖದ ದಿನ, ಎರಡು ಕೆಟ್ಟ ಸುದ್ದಿಗಳು. ಮೊದಲನೆಯದಾಗಿ, ಬ್ರೂನ (ಬ್ರೂನಾ ಬಿಯಾನ್ಕಾರ್ಡಿ) ಪೋಷಕರ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಅವರೆಲ್ಲರೂ ಕ್ಷೇಮವಾಗಿದ್ದಾರೆ. ದೇವರಿಗೆ ಧನ್ಯವಾದಗಳು!. ಎರಡನೆಯದಾಗಿ, ಸ್ನೇಹಿತೆಯ ಸಾವು. ಲುವಾನಾ ಅವರ ಕುಟುಂಬಕ್ಕೆ ನನ್ನ ಸಂತಾಪ" ಎಂದು ನೋವು ತೋಡಿಕೊಂಡಿದ್ದಾರೆ.

More from Filmibeat

English summary
Brazilian influencer Luana Andrade passes away
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X