ನಾಪತ್ತೆಯಾಗಿದ್ದ ನಂ.1 ಮಾಡೆಲ್ ಎಲೋಯಿಸಾ ಕೊಳಗೇರಿಯಲ್ಲಿ ಪತ್ತೆ: ಈಗ ಆಕೆಯ ಸ್ಥಿತಿ ಹೇಗಿದೆ?
ಕಳೆದ ವರ್ಷ ನ್ಯೂಯಾರ್ಕ್ ನಿಂದ ನಾಪತ್ತೆಯಾಗಿದ್ದ ಬ್ರೆಜಿಲ್ ನ ನಂಬರ್.1 ಮಾಡೆಲ್ ಎಲೋಯಿಸಾ ಪಿಂಟೋ ಫಾಂಟೆಸ್ ಈಗ ಕೊಳಗೇರೆಯಲ್ಲಿ ಪತ್ತೆಯಾಗಿದ್ದಾರೆ. ಎಲೋಯಿಸಾ ಈಗಿನ ಸ್ಥಿತಿ ಮಾಡೆಲ್ ಲೋಕ ಬೆಚ್ಚಿಬಿದ್ದಿದೆ.
ವಿಶ್ವದ ಹೆಸರಾಂತ ನಿಯತಕಾಲಿಕೆಗಳಾದ ಎಲ್ಲೆ, ಗ್ರಾಜಿಯಾ, ಗ್ಲಾಮರ್ ನಿಯತಕಾಲಿಕೆಯ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ ಎಲೋಯಿಸಾ ಈಗ ಬ್ರೆಜಿಲ್ ಸ್ಲಂನಲ್ಲಿ ಮಾನಸಿಕ ಅಸ್ವಸ್ಥೆಯಾಗಿ ಕಾಣಿಸಿಕೊಂಡಿದ್ದಾರೆ. ವರ್ಷದಿಂದ ಎಲೋಯಿಸಾ ಅವರನ್ನು ಹುಡುಕಲಾಗುತ್ತಿತ್ತು. ಆದರೆ ಎಲ್ಲಿದ್ದಾರೆ, ಏನ್ಮಾಡುತ್ತಿದ್ದಾರೆ ಎನ್ನುವ ಸುಳಿವು ಯಾರಿಗೂ ಸಿಕ್ಕಿರಲಿಲ್ಲ.
ವರದಿ ಪ್ರಕಾರ ಎಲೋಯಿಸಾ ನ್ಯೂಯಾರ್ಕ್ ನಿಂದ ಬ್ರೆಜಿಲ್ ಗೆ ಮರಳಿ, ರಿಯೋದಲ್ಲಿ ನೆಲೆಸಲು ನಿರ್ಧರಿಸಿದ್ದರಂತೆ. ಬಳಿಕ ಕೆಲಸ ಹುಡುತ್ತಿರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಿದ್ದರಂತೆ. ಆದರೆ ಯಾವ ಸ್ಥಳದಲ್ಲಿ ಇದ್ದಾರೆ ಎನ್ನುವ ಬಗ್ಗೆ ಹೇಳಿರಲಿಲ್ಲ. ಬಳಿಕ ಆಕೆ ಯಾರ ಜೊತೆಯೂ ಸಂಪರ್ಕದಲ್ಲಿ ಇರಲಿಲ್ಲ. ಕುಟುಂಬದವರು ಆಕೆಯನ್ನು ಹುಡುತ್ತಲೇ ಇದ್ದರು ಎಂದು ಹೇಳಲಾಗುತ್ತಿದೆ.

ಬ್ರೆಜಿಲ್ ನ ಸ್ಲಂನಲ್ಲಿ ಕಳೆದ ಕೆಲವು ದಿನಗಳಿಂದ ಎಲೋಯಿಸಾ ಅರೆನಗ್ನ ಸ್ಥಿತಿಯಲ್ಲಿ ಅಲೆದಾಡುತ್ತಿದ್ದರಂತೆ. ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಎಲೋಯಿಸಾ ಅವರನ್ನು ಕಂಡುಹಿಡಿದು ರಕ್ಷಿಸಲಾಗಿದೆ. ಇದೀಗ ಎಲೋಯಿಸಾಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಎಲೋಯಿಸಾ ಕಣ್ಮರೆಯಾಗುವ ಮೊದಲು ಪತಿ ಮತ್ತು ಮಾಡೆಲ್ ಬಿರ್ಲಿಯಾನುಲ್ ಅವರೊಂದಿಗೆ ನ್ಯೂಯಾರ್ಕ್ ನಲ್ಲಿ ವಾಸುತ್ತಿದ್ದರು. ಎಲೋಯಿಸಾ 18ನೇ ವಯಸ್ಸಿನಲ್ಲಿ ರಷ್ಯಾ ಮತ್ತು ರೊಮೇನಿಯನ್ ಮಾಡೆಲ್ ಬಿರ್ಲಿಯಾನುಲ್ ಭೇಟಿಯಾಗಿದ್ದಾರೆ. ಆಗ ಬಿರ್ಲಿಯಾನುಲ್ 34 ವರ್ಷವಯಸ್ಸಾಗಿತ್ತು ಎನ್ನಲಾಗುತ್ತಿದೆ.
ಎಲೋಯಿಸಾ 2013ರಲ್ಲಿ ಹಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಾದ ಬಳಿಕ 2014ರಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಎಲೋಯಿಸಾ ನಾಪತ್ತೆಯಾದ ಬಳಿಕ ಪತಿ ಬಿರ್ಲಿಯಾನುಲ್ ದೂರ ಆಗಿದ್ದಾರೆ. 7 ವರ್ಷದ ಮಗಳು ತಂದೆಯ ಜೊತೆ ಇದೆ ಎಂದು ವರದಿಯಾಗಿದೆ.


Click it and Unblock the Notifications











