»   » 'ಹ್ಯಾರಿ ಪಾಟರ್' ವೇಷ ಧರಿಸಿ ಮಕ್ಕಳಿಂದ ಹೊಸ ಗಿನ್ನೆಸ್ ದಾಖಲೆ!

'ಹ್ಯಾರಿ ಪಾಟರ್' ವೇಷ ಧರಿಸಿ ಮಕ್ಕಳಿಂದ ಹೊಸ ಗಿನ್ನೆಸ್ ದಾಖಲೆ!

Posted By:
Subscribe to Filmibeat Kannada

ಹಾಲಿವುಡ್ ನಿರ್ದೇಶಕ ಡೇವಿಡ್ ಯೇಟ್ಸ್ ರವರ 'ಹ್ಯಾರಿ ಪಾಟರ್' ಸಿನಿಮಾ ಜಾಗತಿಕ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅವುಗಳ ಜೊತೆಗೆ ಈಗ ಇನ್ನೊಂದು ಹೊಸ ದಾಖಲೆ ಸೇರ್ಪಡೆ ಆಗಿದೆ.

'ಹ್ಯಾರಿ ಪಾಟರ್' ಸಿನಿಮಾ ಸರಣಿಗಳು ಮೂಲತಃ ಅಮೆರಿಕದ ಖ್ಯಾತ ಲೇಖಕ ಜೆ.ಕೆ.ರೋಲಿಂಗ್ ರವರ ಪ್ರಸಿದ್ಧ 'ಹ್ಯಾರಿ ಪಾಟರ್' ಹೆಸರಿನ ಸರಣಿ ಕಾದಂಬರಿ ಆಧಾರಿತವಾಗಿವೆ. ನಿನ್ನೆಯಷ್ಟೆ ಬ್ರಿಟನ್ ನ 676 ಮಕ್ಕಳು ಈ ಕಾದಂಬರಿಯ ಕಥಾ ನಾಯಕ ಹ್ಯಾರಿ ಪಾಟರ್ ವೇಷ ಧರಿಸಿ ಗಿನ್ನೆಸ್ ದಾಖಲೆ ಬರೆದಿದ್ದಾರೆ.

Britain kids set world record to mark 20 years of Harry Potter

20 ವರ್ಷಗಳ ಹಿಂದೆ ಅಂದರೆ 1997 ಜೂನ್ 26 ರಂದು ಜೆ.ಕೆ.ರೋಲಿಂಗ್ ಅವರ 'ಹ್ಯಾರಿ ಪಾಟರ್' ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ಎಂಬ ಏಳು ಭಾಗಗಳ ಸರಣಿಯ ಮೊದಲ ಕಾದಂಬರಿಯನ್ನು Bloomsbury ಪ್ರಕಟಿಸಿತ್ತು. ಇದರ ನೆನಪಿಗಾಗಿ ನಿನ್ನೆ (ಜೂನ್ 26) ಬ್ರಿಟನ್ ನ ಬೋಲ್ಟನ್ ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ 676 ಮಕ್ಕಳು ಹ್ಯಾರಿ ಪಾಟರ್ ವೇಷ ಧರಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ ಅಷ್ಟು ಮಕ್ಕಳು ಹ್ಯಾರಿ ಪಾಟರ್ ವೇಷ ಧರಿಸಿದ್ದರಿಂದ ಹೊಸ ಗಿನ್ನೆಸ್ ದಾಖಲೆ ಆಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಂದು ಮಕ್ಕಳು ಸಹ 'ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ಕಾದಂಬರಿ ಪುಸ್ತಕವನ್ನು ಸ್ವೀಕರಿಸಿದ್ದಾರೆ. ಈ ಹಿಂದೆ ಬಹುದೊಡ್ಡ ಸಂಖ್ಯೆಯಲ್ಲಿ ಜೆ.ಕೆ.ರೋಲಿಂಗ್ ರವರ ಖ್ಯಾತಿಯ Wizard ವೇಷವನ್ನು 521 ಜನರು 2015 ರಲ್ಲಿ ಧರಿಸಿದ್ದರು.

ಜೆ.ಕೆ.ರೋಲಿಂಗ್ ರವರ 'ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ಕಾದಂಬರಿ ಆಧಾರಿತವಾಗಿ ಈ ವರೆಗೂ 8 ಚಿತ್ರಗಳು ನಿರ್ಮಾಣ ಆಗಿವೆ.

English summary
An incredible 676 children in the UK set a new Guinness record for the world's largest gathering of people dressed as Harry Potter, to mark the 20 years since the first book of J K Rowling's popular fantasy fiction series was published.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada