ಟಾಪ್‌ಲೆಸ್ ಚಿತ್ರ ಪ್ರಕಟಿಸಿದ ಹಾಲಿವುಡ್ ತಾರೆ: ಸಿಕ್ಕಾಪಟ್ಟೆ ವೈರಲ್
ಹಾಲಿವುಡ್ ತಾರೆ ಬ್ರಿಟ್ನಿ ಸ್ಪಿಯರ್ಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಚಿತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಮ್ಮ ಹಾಡು, ನೃತ್ಯ, ನಟನೆಯಿಂದ ವಿಶ್ವ ವಿಖ್ಯಾತರಾಗಿರುವ ಬ್ರಿಟ್ನಿಯ ಸೌಂದರ್ಯಕ್ಕೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಸಾಮಾನ್ಯ ಚಿತ್ರಗಳೇ ವೈರಲ್ ಆಗುತ್ತವೆ ಅಂಥಹುದರಲ್ಲಿ ಟಾಪ್‌ಲೆಸ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ ಬ್ರಿಟ್ನಿ.
ಮೇಲುಡುಪು ತೊಡದೆ ಎದೆ ಭಾಗವನ್ನು ಅಂಗೈಯಿಂದ ಮುಚ್ಚಿಕೊಂಡು ಫೊಟೋಕ್ಕೆ ಫೋಸ್ ನೀಡಿದ್ದಾರೆ ಬ್ರಿಟ್ನಿ ಸ್ಪಿಯರ್ಸ್. ಇಂಥಹುದೇ ಎರಡು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎರಡೂ ಚಿತ್ರಗಳು ಸಖತ್ ವೈರಲ್ ಆಗಿವೆ. ಬ್ರಿಟ್ನಿ ಹಂಚಿಕೊಂಡಿದ್ದ ಎರಡನೇ ಚಿತ್ರವನ್ನು ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿತ್ತು ಹಾಗಾಗಿ ಕೆಲವು ಬದಲಾವಣೆಗಳನ್ನು ಮಾಡಿ ಮತ್ತೆ ಅದೇ ಚಿತ್ರವನ್ನು ಬ್ರಿಟ್ನಿ ಹಂಚಿಕೊಂಡಿದ್ದಾರೆ.

ಬ್ರಿಟ್ನಿ ಸ್ಪಿಯರ್ಸ್‌ಗೆ ಇವೆಲ್ಲ ಹೊಸದೇನೂ ಅಲ್ಲ 2006ರಲ್ಲಿಯೇ ಹಾರ್ಪರ್ಸ್ ಬ್ಯಾಜರ್ ಎಂಬ ಮ್ಯಾಗಜೀನ್‌ಗಾಗಿ ಬೆತ್ತಲಾಗಿ ಫೋಸ್ ನೀಡಿದ್ದರು. ಆ ಚಿತ್ರ ಸಹ ಬಹಳ ವೈರಲ್ ಆಗಿತ್ತು.
ಬ್ರಿಟ್ನಿ ಸ್ಪಿಯರ್ಸ್ ತಮ್ಮ ಖಾಸಗಿ ಜೀವನದ ವಿವಾದದಿಂದಲೂ ಸಾಕಷ್ಟು ಖ್ಯಾತರು. 2007ರಲ್ಲಿ ಮಾದಕ ದ್ರವ್ಯ ವ್ಯಸನಕ್ಕೆ ಸಿಲುಕಿದ್ದ ಬ್ರಿಟ್ನಿ ತಮ್ಮ ತಲೆ ಬೋಳಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆ ನಂತರ ಅವರನ್ನು ಬಲವಂತದಿಂದ ಆಸ್ಪತ್ರೆಗೆ ಸೇರಿಸಲಾಯಿತು. ಆಕೆಯ ಸಕಲ ಆಸ್ತಿಗೂ ಆಕೆಯ ತಂದೆಯನ್ನು ಮೇಲ್ವಿಚಾರಕರನ್ನಾಗಿಸಲಾಯಿತು.
2007ರಿಂದಲೂ ತಮ್ಮ ಆಸ್ತಿಯ ಮೇಲಿನ ಹಕ್ಕು ಕಳೆದುಕೊಂಡಿರುವ ಬ್ರಿಟ್ನಿ ಹಕ್ಕನ್ನು ಮರಳಿ ಪಡೆಯಲು ಹಲವು ವರ್ಷಗಳಿಂದಲೂ ಕಾನೂನು ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ ಈವರೆಗೆ ತಮ್ಮ ಆಸ್ತಿಯ ಮೇಲಿನ ಪೂರ್ಣ ಹಕ್ಕು ಆಕೆಗೆ ದೊರಕಿಲ್ಲ. ಆಕೆಯ ಅಭಿಮಾನಿಗಳು ಸಹ ಬ್ರಿಟ್ನಿ ಪರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.


Click it and Unblock the Notifications











