For Quick Alerts
  ALLOW NOTIFICATIONS  
  For Daily Alerts

  ನನಗೆ ತಂದೆಯಿಂದ ಸ್ವಾತಂತ್ರ್ಯ ಕೊಡಿಸಿ: ನ್ಯಾಯಾಲಯದಲ್ಲಿ ಬ್ರಿಟ್ನಿ ಅಳಲು

  |

  ಹಾಡುಗಾರ್ತಿ, ನಟಿ ಬ್ರಿಟ್ನಿ ಸ್ಪಿಯರ್ಸ್ ವಿಶ್ವದ ಅತ್ಯಂತ ಜನಪ್ರಿಯ ಹಾಡುಗಾರ್ತಿಯರಲ್ಲಿ ಒಬ್ಬರು. ಅವರ ಒಂದೊಂದು ಆಲ್ಬಂಗಳು ಕೋಟ್ಯಂತರ ಡಾಲರ್‌ಗೆ ಮಾರಾಟವಾಗುತ್ತದೆ. ಬ್ರಿಟ್ನಿ ಸ್ಪಿಯರ್ಸ್ ಜಗಿದಿರುವ ಚೂಯಿಂಗ್ ಗಮ್ ಸಹ 1.5 ಕೋಟಿಗೆ ಹರಾಜಾಗಿತ್ತೆಂದರೆ ಆಕೆಯ ಜನಪ್ರಿಯತೆಯನ್ನು ಊಹಿಸಬಹುದು.

  ಕೋಟ್ಯಂತರ ಡಾಲರ್ ಆಸ್ತಿ ಹೊಂದಿರುವ ಬ್ರಿಟ್ನಿ ಸ್ಪಿಯರ್ಸ್ ತಾವೇ ಸಂಪಾದಿಸಿರುವ, ಸಂಪಾದಿಸುತ್ತಿರುವ ಹಣವನ್ನು ಖರ್ಚು ಮಾಡಲು ನ್ಯಾಯಾಲಯ ನೇಮಿಸಿರುವ ವ್ಯಕ್ತಿಯ ಒಪ್ಪಿಗೆ ಪಡೆಯಬೇಕು!

  ಹೌದು, ಸತತ 13 ವರ್ಷದಿಂದ ಬ್ರಿಟ್ನಿ ಸ್ಪಿಯರ್ಸ್‌ ನ್ಯಾಯಾಲಯ ನೇಮಿಸಿರುವ ವ್ಯಕ್ತಿಯ 'ಸಂರಕ್ಷಣೆ'ಯಲ್ಲಿದ್ದಾರೆ. ನ್ಯಾಯಾಲಯವು ಬ್ರಿಟ್ನಿ ಸ್ಪಿಯರ್ಸ್‌ನ ಗಾರ್ಡಿಯನ್ ಆಗಿ ನೇಮಿಸಿರುವುದು ಆಕೆಯ ತಂದೆ ಜೇಮ್ಸ್ ಪಾರ್ನೆಲ್ ಸ್ಪಿಯರ್ಸ್ ಅನ್ನು. ಆದರೆ ಇವರಿಬ್ಬರ ನಡುವೆ ಸಂಬಂಧ ಒಡೆದು ಬಹಳ ಕಾಲವಾಗಿದೆ.

  ನ್ಯಾಯಾಲಯ ಹೇರಿರುವ ಈ ಗಾರ್ಡಿಯನ್‌ಶಿಪ್ ಅನ್ನು ಅಂತ್ಯ ಮಾಡಬೇಕು ಎಂದು ಬ್ರಿಟ್ನಿ ಸ್ಪಿಯರ್ಸ್‌ ಅಭಿಮಾನಿಗಳು ಹಾಗೂ ಸ್ವತಃ ಬ್ರಿಟ್ನಿ ಸ್ಪಿಯರ್ಸ್ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆ ಪ್ರಕರಣ ಈಗಲೂ ನ್ಯಾಯಾಲಯದಲ್ಲಿ ಜಾರಿಯಲ್ಲಿದೆ.

  ಇದೀಗ ನಿನ್ನೆಯಷ್ಟೆ ವಿಡಿಯೋ ಮೂಲಕ ವಿಚಾರಣೆ ನಡೆದಿದ್ದು ನ್ಯಾಯಾಲಯದಲ್ಲಿ ಮಾತನಾಡಿರುವ ಬ್ರಿಟ್ನಿ ಸ್ಪಿಯರ್ಸ್, ''ನನಗೆ ನನ್ನ ಜೀವನ ವಾಪಸ್ ಬೇಕು, ಹದಿಮೂರು ವರ್ಷವಾಗಿದೆ ಇದು ಇಲ್ಲಿಗೆ ಸಾಕು'' ಎಂದಿದ್ದಾರೆ.

  ''ಈ ದೌರ್ಜನ್ಯಕರ ಗಾರ್ಡಿಯನ್‌ಶಿಪ್‌ ನನ್ನನ್ನು ಖಿನ್ನತೆಗೆ ನೂಕಿದೆ. ನನಗೆ ನಿದ್ದೆ ಮಾಡಲಾಗುತ್ತಿಲ್ಲ. ಊಟ ಸೇರುತ್ತಿಲ್ಲ. ನಾನು ಆಘಾತಕ್ಕೆ ಒಳಗಾಗಿದ್ದೇನೆ'' ಎಂದಿದ್ದಾರೆ ಬ್ರಿಟ್ನಿ ಸ್ಪಿಯರ್ಸ್.

  ''ಈ ಸಂರಕ್ಷಣಾಧೀನತೆ ದೌರ್ಜನ್ಯದಿಂದ ಕೂಡಿದೆ, ನಿಂದನಾತ್ಮಕವಾಗಿದೆ. ನನಗೆ ಬದಲಾವಣೆ ಬೇಕು, ಬದಲಾವಣೆಗೆ ಹಕ್ಕುದಾರಳು ನಾನು. ನನ್ನ ಜೀವನ ನನಗೆ ವಾಪಸ್ ಕೊಟ್ಟುಬಿಡಿ'' ಎಂದಿದ್ದಾರೆ ಬ್ರಿಟ್ನಿ ಸ್ಪಿಯರ್ಸ್.

  ಕರೀನಾ ಕಪೂರ್ ಸೀತೆ ಅಲ್ಲ ಎಂದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ | Filmibeat Kannada

  2008ರಲ್ಲಿ ಡ್ರಗ್ಸ್ ಸೇವಿಸಿ ಬ್ರಿಟ್ನಿ ಸ್ಪಿಯರ್ಸ್ ಸಿಕ್ಕಿಹಾಕಿಕೊಂಡಿದ್ದರು. ಆಕೆಯ ಬುದ್ಧಿ ಸ್ಥಿಮಿತದಲ್ಲಿಲ್ಲವೆಂದು ಅವರ ತಂದೆ ಆರೋಪಿಸಿ ಬ್ರಿಟ್ನಿಯ ಗಾರ್ಡಿಯನ್‌ಶಿಪ್ ಅನ್ನು ಪಡೆದುಕೊಂಡಿದ್ದರು. ಆಗಿನಿಂದಲೂ ಬ್ರಿಟ್ನಿ ಸ್ಪಿಯರ್ಸ್‌ನ ಎಲ್ಲ ಆರ್ಥಿಕ ಹಾಗೂ ಕಾರ್ಯಕ್ರಮಗಳ ನಿರ್ಣಯವನ್ನು ಬ್ರಿಟ್ನಿ ತಂದೆಯೇ ತೆಗೆದುಕೊಳ್ಳುತ್ತಿದ್ದಾರೆ.

  English summary
  Singer Britney Spears requested court to end guardianship her father Jamie Spears.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X