3 ಮದುವೆಯಾದರೂ ಸಿಗದ ಸಂಸಾರ ಸುಖ ; ನೋವು-ಹತಾಶೆ-ಖಿನ್ನತೆ-ಜಗದ್ವಿಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಬಂಧನ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಗೊತ್ತಿದ್ದರೂ ಕೂಡ ಹಲವರು ಮದ್ಯಪಾನ ಮಾಡುತ್ತಾರೆ. ಸಾಲದಕ್ಕೆ ಕಂಠಪೂರ್ತಿ ಎಣ್ಣೆ ಕುಡಿದು ತಮ್ಮ ಕಾರಿನ ಸ್ಟೇರಿಂಗ್ ಹಿಡಿಯುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ. ಕೈಗೊಬ್ಬರು.. ಕಾಲಿಗೊಬ್ಬರು.. ಸೇವಕರು ಇದ್ದರೂ ಕೂಡ ಚಿತ್ರರಂಗದ ಹಲವರು ಕುಡಿದು ಕಾರು ಚಲಾಯಿಸುತ್ತಾರೆ.

ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಸೂಕ್ಷ್ಮ ಜವಾಬ್ದಾರಿ, ಎನ್ನುವುದನ್ನು ಮರೆತು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಸಾವು ನೋವಿಗೂ ಕೂಡ ಕಾರಣವಾಗುತ್ತಾರೆ. ವರ್ಷಾನುವರ್ಷ ಬೆವರು ಸುರಿಸಿ ಸಂಪಾದಿಸಿದ್ದ ತಮ್ಮ ಹೆಸರನ್ನು ತಮ್ಮ ಕೈಯಾರೆ ಕ್ಷಣಾರ್ಧದಲ್ಲಿ ಹಾಳು ಮಾಡಿಕೊಳ್ಳುತ್ಥಾರೆ. ಉದಾಹರಣೆಗೆ ಬ್ರಿಟ್ನಿ ಸ್ಪಿಯರ್ಸ್.

Britney Spears Tearful Breaking Point Pop Icon Ashamed Following Emotional Late-Night DUI Arrest

ಹೌದು, ಬ್ರಿಟ್ನಿ ಸ್ಪಿಯರ್ಸ್.. ಒಂದ್ಕಾಲದಲ್ಲಿ ತನ್ನ ಚಿನ್ನದ ಕಂಠದಿಂದ ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಗಾಯಕಿ. ಅಭಿನಯದಲ್ಲಿ ಕೂಡ ಸೈ ಎನಿಸಿಕೊಂಡಿದ್ದ ನಾಯಕಿ. ಆ ಕಾಲದಲ್ಲಿ ಪ್ರಿನ್ಸಸ್ ಆಫ್ ಪಾಪ್ ಎಂದೇ ಜನ ಜನಿತರಾದವರು ಇವರು. ಆದರೆ ಜಗ ಗೆದ್ದ ಬ್ರಿಟ್ನಿಗೆ ವೈಯಕ್ತಿಕ ಬದುಕಿನಲ್ಲಿ ನೆಮ್ಮದಿ ಸಿಗಲಿಲ್ಲ. ಮೂರು ಮದುವೆಯಾದರು ಸಂಸಾರದ ಸುಖ ಸಿಗಲಿಲ್ಲ. ಬದಲಿಗೆ ಸಿಕ್ಕಿದ್ದು ನೋವು, ಹತಾಶೆ ಮತ್ತು ಕಣ್ಣೀರು.

ಇಂಥಾ ಬ್ರಿಟ್ನಿ ಸ್ಪಿಯರ್ಸ್ ಅವರನ್ನು ಮಾರ್ಚ್ 4ರಂದು (ಬುಧವಾರ) ರಾತ್ರಿ, ಕ್ಯಾಲಿಫೋರ್ನಿಯಾದ ವೆಂಚುರಾ ಕೌಂಟಿಯ ಪೊಲೀಸರು ಬಂಧಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಶಂಕೆಯ ಮೇಲೆ ಬ್ರಿಟ್ನಿ ಅವರನ್ನು ಅರೆಸ್ಟ್ ಮಾಡಲಾಗಿದ್ದು, ''ಬಿಬಿಸಿ'' ವರದಿಯ ಪ್ರಕಾರ ಬ್ರಿಟ್ನಿ ತಮ್ಮ ಕಪ್ಪು ಬಣ್ಣದ ಬಿಎಂಡಬ್ಲ್ಯೂ ಕಾರನ್ನು ಬುಧವಾರ ರಾತ್ರಿ ಅಡ್ಡಾದಿಡ್ಡಿ ಚಲಾಯಿಸುತ್ತಿದ್ದರು.

ಕೂಡಲೇ ಅಲರ್ಟ್ ಆದ ಹೈವೇ ಪೆಟ್ರೋಲ್ ಪೊಲೀಸರು ರಾತ್ರಿ ಸುಮಾರು 9:30ರ ಸುಮಾರಿಗೆ ಕ್ಯಾಲಿಫೋರ್ನಿಯಾ ಬಳಿ ಬ್ರಿಟ್ನಿ ಅವರ ಕಾರನ್ನು ತಡೆದಿದ್ದಾರೆ. ಡ್ರಿಂಕ್ & ಡ್ರೈವ್ ಕೇಸ್‌ನಲ್ಲಿ ಸದ್ಯ ಅವರನ್ನು ಬಂಧಿಸಿದ್ದಾರೆ.

ಇನ್ನೂ ಬಂಧನಕ್ಕೊಳಗಾದ ನಂತರ ಬ್ರಿಟ್ನಿ ಸ್ಪಿಯರ್ಸ್, ನಿರಂತರವಾಗಿ ಕಣ್ಣೀರು ಹಾಕುತ್ತಿದ್ದರು ಎಂದು ''ಬಿಬಿಸಿ''ಯಲ್ಲಿ ವರದಿಯಾಗಿದ್ದು ತೀವೃವಾಗಿ ಅವರು ನಡುಗುತ್ತಿದ್ದರು ಎಂದು ಕೂಡ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ರಕ್ತದ ಮಾದರಿ ಪರೀಕ್ಷೆಯ ನಂತರ, ಮಾರ್ಚ್ 5ರಂದು (ಗುರುವಾರ) ಮುಂಜಾನೆ 3:02ಕ್ಕೆ ಅವರನ್ನು ವೆಂಚುರಾ ಕೌಂಟಿ ಮುಖ್ಯ ಜೈಲಿಗೆ ಕರೆದೊಯ್ಯಲಾಗಿದ್ದು, ಈ ಘಟನೆಯಿಂದ 44 ವರ್ಷದ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ತೀವೃ ಮುಜುಗರಕ್ಕೀಡಾಗಿದ್ದಾರೆ ಎಂದು ಕೂಡ ''ಬಿಬಿಸಿ'' ವರದಿ ಮಾಡಿದೆ.

Britney Spears Tearful Breaking Point Pop Icon Ashamed Following Emotional Late-Night DUI Arrest

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬ್ರಿಟ್ನಿ ಅವರ ಕೇಡ್ ಹಡ್ಸನ್, ದುರದೃಷ್ಟಕರ ಮತ್ತು ಕ್ಷಮಿಸಲು ಸಾಧ್ಯವಾಗದ ತಪ್ಪನ್ನು ಬ್ರಿಟ್ನಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬ್ರಿಟ್ನಿ ಅವರನ್ನು ಸಮರ್ಥಿಸಿಕೊಳ್ಳದ ಕೇಡ್ ಹಡ್ಸನ್ ಈ ಬಂಧನ ಮುಂಬರುವ ಅವರ ಬದುಕಿನ ಬದಲಾವಣೆಯ ಮೊದಲ ಹೆಜ್ಜೆಯಾಗಲಿ ಎಂದು ಆಶಿಸಿದ್ದಾರೆ. ಕಾನೂನು ಪ್ರಕ್ರಿಯೆಗಳಿಗೆ ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಕೂಡ ಹೇಳಿರುವ ಕೇಡ್ ಹಡ್ಸನ್ ಅಗತ್ಯವಿದ್ದರೆ ಪುನರ್ವಸತಿ ಕೇಂದ್ರಕ್ಕೆ ಅವರನ್ನು ನಾವು ದಾಖಲಿಸುತ್ತೇವೆ ಅಥವಾ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಸದ್ಯ ಬ್ರಿಟ್ನಿ ಗುರುವಾರ ಮುಂಜಾನೆ 6:07 ಕ್ಕೆ ಜೈಲಿನಿಂದ ಬಿಡುಗಡೆಯಾಗಿದ್ದು, ಮುಜುಗರ ಮತ್ತು ಪಾಪಪ್ರಜ್ಞೆಯಿಂದ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿ ಆಕ್ಟಿವೇಟ್ ಮಾಡಿದ್ದಾರೆ. ಮೇ 4, 2026 ರಂದು ವೆಂಚುರಾ ಕೌಂಟಿ ಸುಪೀರಿಯರ್ ಕೋರ್ಟ್ ಮುಂದೆ ಬ್ರಿಟ್ನಿ ಹಾಜರಾಗಬೇಕಿದ್ದು ಬ್ರಿಟ್ನಿ ಅವರಿಗೆ ಜೈಲು ಶಿಕ್ಷೆಯೂ ಆಗಬಹುದು ಅಥವಾ ಭಾರೀ ದಂಡ ಕಟ್ಟಬೇಕಾಗಬಹುದು. ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದಾಗಬಹುದು. ಆ ಸಾಧ್ಯತೆ ಕೂಡ ಇದೆ.

More from Filmibeat

English summary
Britney Spears arrested on suspicion of DUI in Ventura County. The 44-year-old singer was booked at 3:00 a.m. and released shortly after. Read the latest on the police report, her upcoming May 4 court date, and her manager Cade Hudson’s response to this "inexcusable" incident
Read more about: britney spears arrest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X