4 ವರ್ಷದ ನಂತರ ಸಂಗೀತ ಸಾಮ್ರಾಜ್ಯದ ಸುಲ್ತಾನರನ್ನು ಕಣ್ತುಂಬಿಕೊಂಡ ಎರಡೂವರೆ ಲಕ್ಷ ಜನ ; ಐತಿಹಾಸಿಕ ದಾಖಲೆ

ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ವಿಶ್ವದೆಲ್ಲೆಡೆ ಈ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದಕ್ಕೆ ಸದ್ಯ ''ಬಿಟಿಎಸ್'' ತಂಡದ ಸಂಗೀತ ಕಾರ್ಯಕ್ರಮದಲ್ಲಿ ಕಂಡು ಬಂದ ಜನಜಂಗುಳಿ ಸದ್ಯದ ಉದಾಹರಣೆ.

ಹೌದು, ''ಬಿಟಿಎಸ್'' ಅರ್ಥಾತ್ 'ಬಾಂಗ್ಟನ್ ಸೋನ್ಯೋಂದನ್' ಅಂದರೆ 'ಬುಲೆಟ್ ಪ್ರೂಫ್ ಬಾಯ್ ಸ್ಕೌಟ್ಸ್'. ದಕ್ಷಿಣ ಕೊರಿಯಾದ ಏಳು ಜನ ಯುವಕರನ್ನು ಒಳಗೊಂಡ ಜಗತ್ಪ್ರಸಿದ್ಧ ಸಂಗೀತ ತಂಡದ ಹೆಸರಿದು. ಆ‌ರ್.ಎಂ, ಜಿನ್ , ಸುಗಾ, ಜೆ-ಹೋಪ್, ಜಿಮಿನ್, ವಿ, ಮತ್ತು ಜಂಗ್‌ಕುಕ್, ಈ ತಂಡದ
ಪ್ರಮುಖ ಸದಸ್ಯರು.

BTS Reclaims Throne 260 000 Storm Seoul for ARIRANG as SWIM Shatters Records

ಇನ್ನೂ ಇವರು ಕೇವಲ ಹಾಡುಗಾರರಲ್ಲ, ಅದ್ಭುತ ಡ್ಯಾನ್ಸರ್‍ಸ್ ಕೂಡ ಹೌದು. ಪ್ರೀತಿ, ಮಾನಸಿಕ ಆರೋಗ್ಯ, ಮತ್ತು ಸಮಾಜದ ಸುತ್ತ ಮುತ್ತ ಹಾಡುಗಳನ್ನು ಹೆಣೆದು ಕಾರ್ಯಕ್ರಮ ನೀಡುವ ಇವರಿಗೆ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳಿದ್ದಾರೆ.

2013ರಿಂದ ತಮ್ಮ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಈ ತಂಡ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಸಂಗೀತ ಸಂಜೆಗೆ ಅಲ್ಪವಿರಾಮ ಹಾಕಿತ್ತು. ಅದಕ್ಕೆ ಕಾರಣ ದಕ್ಷಿಣ ಕೊರಿಯಾದ ಕಾನೂನು.

ಹೌದು, ದಕ್ಷಿಣ ಕೊರಿಯಾದ ಕಾನೂನಿನ ಪ್ರಕಾರ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ 18 ರಿಂದ 21 ತಿಂಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಈ ಹಿನ್ನೆಲೆ ಬಿಟಿಎಸ್ ಸದಸ್ಯರು ಒಬ್ಬೊಬ್ಬರಾಗಿ ಮಿಲಿಟರಿ ಸೇರಬೇಕಾದ ಕಾರಣ ತಂಡವಾಗಿ ಕೆಲಸ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಇದರಿಂದ ಹಲವರು ನಿರಾಸೆಗೊಂಡಿದ್ದರು.

ಆದರೆ ಈಗ ಈ ತಂಡ ಮತ್ತೆ ಮರಳಿದೆ. ನಾಲ್ಕು ವರ್ಷದ ನಂತರ ಇಂದು (ಮಾರ್ಚ್ 21) ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಿದೆ. ವಿಶೇಷ ಅಂದರೆ ಸಿಯೋಲ್‌ನ ಐತಿಹಾಸಿಕ 'ಗ್ವಾಂಗ್ವಾಮುನ್ ಸ್ಕ್ವೇರ್'ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ನೂರು, ಇನ್ನೂರು, ಮೂನ್ನೂರು, ಸಾವಿರ ಅಲ್ಲ 2,60,000 ಜನ ಸಾಕ್ಷಿಯಾಗಿದ್ದಾರೆ. ಈ ಮೂಲಕ ಇಂದಿನ ಕಾರ್ಯಕ್ರಮ ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಅತಿದೊಡ್ಡ ಸಾರ್ವಜನಿಕ ಸಂಗೀತ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

BTS Reclaims Throne 260 000 Storm Seoul for ARIRANG as SWIM Shatters Records

ತಂಡದ ನಾಯಕ ಆರ್.ಎಂ ಕಾಲಿನ ಸಣ್ಣ ಗಾಯದ ನಡುವೆಯೂ ಇಂದು ( ಮಾರ್ಚ್21) ಪ್ರದರ್ಶನ ನೀಡಿದ್ದು ವಿಶೇಷ. ನೆಟ್‌ಫ್ಲಿಕ್ಸ್‌ನಲ್ಲಿ ವಿಶ್ವದಾದ್ಯಂತ ಈ ಕಾರ್ಯಕ್ರಮ ನೇರ ಪ್ರಸಾರವಾಗಿದ್ದು ಮತ್ತೊಂದು ವಿಶೇಷ. ಇನ್ನೂ ವೇದಿಕೆಯ ಮೇಲೆ ಬಿಟಿಎಸ್ ತಮ್ಮ ಐದನೇ ಆಲ್ಬಂ 'ARIRANG' ಬಿಡುಗಡೆ ಮಾಡಿದ್ದು ಮಗದೊಂದು ವಿಶೇಷ.

ಸದ್ಯ ಕೊರಿಯಾದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಆಧುನಿಕ ಪಾಪ್ ಸಂಗೀತದ ಮಿಶ್ರಣವಾಗಿರುವ ಈ ಆಲ್ಬಂ, ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 3.9 ಮಿಲಿಯನ್ ಪ್ರತಿಗಳು ಮಾರಾಟವಾಗುವ ಮೂಲಕ ಹೈಬ್ ಸಂಸ್ಥೆಗೆ ಭಾರಿ ಲಾಭ ತಂದುಕೊಟ್ಟಿದೆ. ಅದರಲ್ಲಿಯೂ ಈ ಆಲ್ಬಂನಲ್ಲಿನ ''ಸ್ವಿಮ್'' ಹಾಡು ಹಲವರನ್ನು ಹುಚ್ಚೆಬ್ಬಿಸಿದೆ. ಯೂಟ್ಯೂಬ್‌ನಲ್ಲಿ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಹಾಲಿವುಡ್‌ನ ಖ್ಯಾತ ನಟಿ ಲಿಲಿ ರೈನ್ಹಾರ್ಟ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಈ ಸಂಗೀತ ಕಾರ್ಯಕ್ರಮದಲ್ಲಿ ಜನಸಮೂಹವನ್ನು ನಿಯಂತ್ರಿಸಲು ಸಿಯೋಲ್ ನಗರದಲ್ಲಿ ಸುಮಾರು 8,200 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೊರಿಯಾದವರ ಪ್ರಕಾರ ಈ ಕಾರ್ಯಕ್ರಮದ ವೈಭವ 2002ರ ಫುಟ್‌ಬಾಲ್ ವಿಶ್ವಕಪ್ ಸಂಭ್ರಮವನ್ನು ನೆನಪಿಸುವಂತಿತ್ತು.

ಮುಂದಿನ ಏಪ್ರಿಲ್‌ನಿಂದ ಆರಂಭವಾಗಲಿರುವ 'ARIRANG ವರ್ಲ್ಡ್ ಟೂರ್' ಇತಿಹಾಸದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಕೆ-ಪಾಪ್ ಪ್ರವಾಸವಾಗಲಿದೆ. ಏಷ್ಯಾ, ಯುರೋಪ್ ಮತ್ತು ಅಮೆರಿಕದ 82 ಕ್ರೀಡಾಂಗಣಗಳಲ್ಲಿ ಈ ಪ್ರದರ್ಶನಗಳು ನಡೆಯಲಿವೆ.

ಇನ್ನೂ ಮಿಲಿಟರಿಗೆ ಸೇರಿದ ಹಿನ್ನೆಲೆ ಹಲವರು ಈ ತಂಡದ ಜನಪ್ರಿಯತೆ ಕುಸಿಯುತ್ತೆ ಎಂದುಕೊಂಡಿದ್ದರು. ಆದರೆ ಲೆಕ್ಕಾಚಾರ ತಲೆಕೆಳಗಾಗಿದೆ. ಬದಲಿಗೆ ಈ ತಂಡದ ಮೇಲಿನ ಕ್ರೇಜ್ ಹತ್ತು ಪಟ್ಟು ಇನ್ನೂ ಹೆಚ್ಚಾಗಿದೆ.

More from Filmibeat

English summary
BTS sets a new record for the largest-ever public concert in South Korea. Following a 4-year hiatus, the group returns with their fifth studio album, ARIRANG. Watch the viral title track ‘SWIM’ and see the highlights from the 260,000-strong Seoul comeback.
Read more about: music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X