5ನೇ ವಿವಾಹವಾದ 'ಬೇವಾಚ್' ನಟಿ; ತನ್ನ ಬಾಡಿ ಗಾರ್ಡ್ ಅನ್ನೇ ವರಿಸಿದ ಖ್ಯಾತ ನಟಿ ಪಮೆಲಾ

ಕೆನಡಾ ಮೂಲದ ಖ್ಯಾತ ನಟಿ ಪಮೆಲಾ ಆಂಡರ್ಸನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಬಾಡಿ ಗಾರ್ಡ್ ಡಾನ್ ಹೇಹರ್ಟ್ಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೇವಾಚ್ ಸಿನಿಮಾ ಮೂಲಕ ಖ್ಯಾತಗಳಿಸಿದ್ದ ನಟಿ ಪಮೆಲಾ ಗುಟ್ಟಾಗಿ ಮದುವೆ ಆಗಿರುವ ವಿಚಾರ ತಡವಾಗಿ ಬಹಿರಂಗವಾಗಿದೆ.

ಕೆನಡಾದ ವ್ಯಾಂಕೋವರ್ ದ್ವೀಪದಲ್ಲಿರುವ ತನ್ನ ಮನೆಯ ಮೈದಾನದಲ್ಲಿ ಡಾನ್ ಹೇಹರ್ಟ್ಸ್ ಅವರನ್ನು ವರಿಸಿದ್ದಾರೆ. ಕ್ರಿಸ್ಮಸ್ ಈವ್ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಸದ್ಯ ಪಮೆಲಾ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಳಿ ಬಣ್ಣದ ಗೌನ್ ಧರಿಸಿರುವ ಪಮೆಲಾ ಆಂಡರ್ಸನ್ ಪತಿ ಡಾನ್ ತಬ್ಬಿಕೊಂಡಿರುವ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕೊರೊನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ.

Canadian actress Pamela Anderson gets married her bodyguard Dan Hayhurst

ಅಂದಹಾಗೆ ಪಮೆಲಾಗೆ ಇದು 5ನೇ ಮದುವೆ. 1995ರಲ್ಲೇ ಪಮೆಲಾ ಟಾಮಿ ಲೀ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 1998ರಲ್ಲಿ ಟಾಮಿ ಲೀ ಇಂದ ಬೇರೆಯಾದ ಬಳಿಕ ಕಿಡ್ ರಾಕ್ ಅವರನ್ನು ವರಿಸುತ್ತಾರೆ. 2020ರಲ್ಲಿ ಜಾನ್ ಪೀಟರ್ಸ್ ಜೊತೆ ಮದುವೆಯಾಗಿದ್ದ ಪಮೆಲಾ ವರ್ಷದೊಳಗೆ ಅವರಿಂದ ದೂರ ಆಗಿ ಡಿಸೆಂಬರ್ ನಲ್ಲಿ ತನ್ನ ಬಾಡಿ ಗಾರ್ಡ್ ಅನ್ನೇ ವರಿಸಿದ್ದಾರೆ.

ಈ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡದ ಸಂದರ್ಶನದಲ್ಲಿ ಪಮೆಲಾ, ನಾನು ಇರಬೇಕಾದ ಸ್ಥಳ ನಾನು ನಿಜವಾಗಿಯೂ ಪ್ರೀತಿಸುವ ಮನುಷ್ಯನ ತೋಳುಗಳಲ್ಲಿ' ಎಂದು ಹೇಳಿದ್ದಾರೆ.

ನಾನು 25 ವರ್ಷಗಳ ಹಿಂದೆ ನನ್ನ ಅಜ್ಜಿಯರಿಂದ ಖರೀದಿಸಿದ ಆಸ್ತಿಯನ್ನು ಮದುವೆಯಾಗಿದ್ದೆ. ನನ್ನ ತಂದೆ-ತಾಯಿ ಮದುವೆಯಾದ ಸ್ಥಳ ಮತ್ತು ಅವರು ಇನ್ನೂ ಒಟ್ಟಿಗೆ ಇದ್ದಾರೆ. ಇಲ್ಲಿ ನಾನು ನೆಮ್ಮದಿಯಾಗಿ ಇದ್ದೀನಿ ಎಂದು ಹೇಳಿದ್ದಾರೆ.

ಅಮೆಲಾ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ್ದಾರೆ. ಕೊನೆಯ ಪೋಸ್ಟ್ ನಲ್ಲಿ 'ನಾನು ಸಾಮಾಜಿಕ ಜಾಲತಾಣದಲ್ಲಿ ಎಂದಿಗೂ ಆಸಕ್ತಿ ಹೊಂದಿಲ್ಲ. ಈಗ ನಾನು ಸ್ವತಂತ್ರಳು' ಎಂದಿದ್ದಾರೆ.

More from Filmibeat

English summary
Famous Canadian actress Pamela Anderson gets married her bodyguard Dan Hayhurst.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X