RCB vs PBKS : 'ಈ ಸಲ ಕಪ್ ನಮ್ದೇ' ಎಂದು RCB ಪರ ₹6.41 ಕೋಟಿ ಬೆಟ್ಟಿಂಗ್ ಕಟ್ಟಿದ ರ್ಯಾಪರ್..!

ಇವತ್ತು ಭಾರತದಲ್ಲಿ ಕ್ರಿಕೆಟ್ ಕೇವಲ ಮನರಂಜನೆಯಾಗಿ ಉಳಿದಿಲ್ಲ. ಬದಲಿಗೆ ಪಕ್ಕಾ ಬ್ಯುಸಿನೆಸ್ ಆಗಿದೆ.ಯಾವ ಕ್ರೀಡೆ ಮನರಂಜನೆಗೆ ಸೀಮಿತವಾಗಬೇಕಿತ್ತೋ ಅದು ಇಂದು ಅನೇಕರ ಮನೆಗಳನ್ನು ಹಾಳು ಮಾಡಿ,ಲೆಕ್ಕ ಇಲ್ಲದ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ. ಬಡವರಿಂದ ಹಿಡಿದು ಶ್ರೀಮಂತರವರೆಗೆ,ಶಾಲಾ ಮಕ್ಕಳಿಂದ ಹಿಡಿದು ಗೃಹಿಣಿಯರವರೆಗೆ ಈ ಐಪಿಎಲ್ ಸಮಯದಲ್ಲಿ ಬೆಟ್ಟಿಂಗ್‌ಗೆ ಅಡಿಕ್ಟ್ ಆಗಿದ್ದಾರೆ.ಸೋತು ಅನೇಕರು ಜೀವವನ್ನು ಕೂಡ ಕಳೆದುಕೊಂಡಿದ್ದಾರೆ.

ಆದರೂ ಕೂಡ ಈ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇನ್ನು, ದುರಂತ ಅಂದರೆ ಕೇವಲ ಜನಸಾಮಾನ್ಯರು ಮಾತ್ರವಲ್ಲ ಬೇರೆ ಬೇರೆ ಉದ್ಯಮಗಳಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡವರು ಕೂಡ ಈ ಬೆಟ್ಟಿಂಗ್ ಆಡುತ್ತಾರೆ. ಯಾವುದೇ ಅಳುಕಿಲ್ಲದೇ ಎಲ್ಲರೆದುರು ಹೇಳಿಕೊಳ್ಳುತ್ತಾರೆ. ಇದಕ್ಕೆ ಕೆನಡಾದ ರ್ಯಾಪರ್ ಡ್ರೇಕ್ ಸದ್ಯದ ಉದಾಹರಣೆ.

Canadian Rapper Drake Places Massive 6 41 Crore Bet on RCB Ahead of IPL 2025 Final

ಹೌದು, ಡ್ರೇಕ್.. ಓನ್ ಡ್ಯಾನ್ಸ್.. ಗಾಡ್ಸ್ ಫ್ಲ್ಯಾನ್., ರಿಚ್ ಬೇಬಿ ಡ್ಯಾಡಿ.. ಫ್ಯಾಮಿಲಿ ಮ್ಯಾಟರ್ಸ್.. ಮೋರ್ ಲೈಫ್.. ಟೇಕ್ ಕೇರ್..ಹೀಗೆ ಹತ್ತು ಹಲವು ಹಾಡುಗಳ ಮೂಲಕ ಜನ ಮನ ಗೆದ್ದವರು ಇವರು. 2006ರಿಂದ ಇಲ್ಲಿಯವರೆಗೆ ಹಲವಾರು ಹಾಡುಗಳನ್ನು ಹಾಡಿರುವ ಡ್ರೇಕ್ ಬೆಸ್ಟ್ ಮೇಲ್ ಹಿಪ್ ಹಾಪ್ ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದಿದ್ದಾರೆ.

ಇಷ್ಟೇ ಅಲ್ಲ 5 ಬಾರಿ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ ಕೂಡ ಗೆದ್ದಿರುವ ಡ್ರೇಕ್, 39 ಬಿಲ್ ಬೋರ್ಡ್‌ ಮ್ಯೂಸಿಕ್ ಅವಾರ್ಡ್ ಕೂಡ ಪಡೆದಿದ್ದಾರೆ. ಎರಡು 'ಬ್ರಿಟ್', ಮೂರು 'ಜುನೋ' ಮತ್ತು ಆರು ಅಮೆರಿಕನ್ ಅವಾರ್ಡ್‌ನ್ನು ಕೂಡ ಡ್ರೇಕ್ ಮುಡಿಗೇರಿಸಿಕೊಂಡಿದ್ದಾರೆ.

ಇಂಥಾ ಡ್ರೇಕ್ 'ಈ ಸಲ ಕಪ್ ನಮ್ದೇ' ಎಂದು ಹೇಳಿದ್ದಾರೆ. ಸಾಲದಕ್ಕೆ ಕ್ರಿಪ್ಟೋ ಬೆಟ್ಟಿಂಗ್ ಪ್ಲಾಟ್‌ ಫಾರ್ಮ್‌ ಸ್ಟೇಕ್‌ನಲ್ಲಿ ಒಂದಲ್ಲ ಎರಡಲ್ಲ ಬದಲಿಗೆ 6.41 ಕೋಟಿ ಹಣ ಬೆಟ್ಟಿಂಗ್ ಕಟ್ಟಿದ್ದಾರೆ. ತಾವು ಬೆಟ್ ಕಟ್ಟಿರುವ ಸ್ಕ್ರೀನ್ ಶಾಟ್‌ನ್ನು ಕೂಡ ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಮೇಲೆ ಡ್ರೇಕ್‌ಗೆ ಇರುವ ಅಭಿಮಾನ ಈಗ ಹಲವರ ಹುಬ್ಬೇರಿಸಿದೆ. ಯಾಕೆಂದರೆ ಕೆನಡಾದಲ್ಲಿ ಕ್ರಿಕೆಟ್ ಜನಪ್ರಿಯವಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳು ಕೂಡ ಇವೆ. ಆ ತಂಡಗಳ ಮೇಲಿರದ ಅಭಿಮಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಯಾಕಿದೆ ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. 'ಈ ಸಲ್ ಕಪ್ ನಮ್ದೇ' ಎಂಬ ಕನ್ನಡಿಗರ ಘೋಷವಾಕ್ಯ ಕೆನಡಾವರೆಗೆ ತಲುಪಿ, ಡ್ರೇಕ್ ಕೂಡ ಬರೆದುಕೊಂಡ ಹಿನ್ನೆಲೆ ಅನೇಕ ಆರ್‌ಸಿಬಿ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ.

ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಪಂಜಾಬ್ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಕಪ್ ಮುಡಿಗೇರಿಸಿಕೊಂಡು ಇತಿಹಾಸ ರಚಿಸಿದರೆ 6.41 ಕೋಟಿಯನ್ನು ಕಟ್ಟಿರುವ ಡ್ರೇಕ್‌ 11.11 ಕೋಟಿಯನ್ನು ಗೆಲ್ಲಲಿದ್ದಾರೆ.

ಅಂದ್ಹಾಗೇ ಈ 18 ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಸೂಪರ್ ಕಿಂಗ್ಸ್ 36 ಬಾರಿ ಮುಖಾಮುಖಿಯಾಗಿವೆ. ವಿಶೇಷ ಅಂದರೆ ಈ 36 ಪಂದ್ಯಗಳಲ್ಲಿ ಪಂಜಾಬ್ ಮತ್ತು ಬೆಂಗಳೂರು ತಂಡ ತಲಾ 18 ಪಂದ್ಯಗಳನ್ನು ಗೆದ್ದಿವೆ.

ಇನ್ನು, ಕಳೆದ ಹತ್ತು ಪಂದ್ಯಗಳಲ್ಲಿ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹತ್ತು ಪಂದ್ಯಗಳಲ್ಲಿ ಆರ್‌ಸಿಬಿ ಆರು ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ತಂಡ ನಾಲ್ಕು ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಇನ್ನುಳಿದಂತೆ ಮೊನ್ನೆ ನಡೆದ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ಪಂಜಾಬ್ ಈ ಬಾರಿ ಫೈನಲ್ ಪ್ರವೇಶಿಸುವುದಿಲ್ಲ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಆದರೆ ಸಿಕ್ಕ ಮತ್ತೊಂದು ಅವಕಾಶದಲ್ಲಿ ಮುಂಬೈ ತಂಡವನ್ನು ಕೆಡವಿ ಬೀಳಿಸುವಲ್ಲಿ ಯಶಸ್ವಿಯಾಯ್ತು.

More from Filmibeat

English summary
As IPL 2025 Final nears, Drake shocks fans by betting ₹6.41 crore on RCB, showing his support for the cricket giants
Read more about: betting ipl 2025 rapper
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X