twitter
    For Quick Alerts
    ALLOW NOTIFICATIONS  
    For Daily Alerts

    ಕಾನ್ ಚಿತ್ರೋತ್ಸವದಲ್ಲಿ ಭಾರತ ಪ್ರತಿನಿಧಿಸಿದ ದೀಪಿಕಾ ಪಡುಕೋಣೆ: ಈ ಹಿಂದೆ ಜ್ಯೂರಿ ಆಗಿದ್ಯಾರು?

    |

    75ನೇ ಕಾನ್ ಚಲನಚಿತ್ರೋತ್ಸವ ಇಂದಿನಿಂದ ( ಮೇ 17) ಆರಂಭ ಆಗಿದೆ. ಪ್ರತಿಷ್ಠಿತ ಈ ಚಿತ್ರೋತ್ಸವದಲ್ಲಿ ವಿಶ್ವದ ಮೂಲೆ ಮೂಲೆಯಿಂದ ಸಿನಿಮಾರಂಗ ಸೆಲೆಬ್ರೆಟಿಗಳು ಆಗಮಿಸಲಿದ್ದಾರೆ. ಫ್ರಾನ್ಸ್‌ನಲ್ಲಿ ಕಾನ್ ಚಲನ ಚಿತ್ರೋತ್ಸವ ನಡೆಯುತ್ತಿದ್ದು, ಮೇ 28ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಚಲನಚಿತ್ರೋತ್ಸವಕ್ಕೆ ಸಿನಿರಂಗದ ಗಣ್ಯರು ಆಗಮಿಸುತ್ತಿದ್ದಾರೆ.

    ಈ ಬಾರಿಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಒಂದು ವಿಶೇಷವಿದೆ. ಅದೇನಂದರೆ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಕಾನ್ ಚಲನ ಚಿತ್ರೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾರತವನ್ನು ಪ್ರತಿ ನಿಧಿಸುತ್ತಿದ್ದಾರೆ. ಈ ಮೂಲಕ ಪ್ರಪಂಚ ಭಾರತನ್ನು ಗುರುತಿಸುತ್ತಿದ್ದು, ಇದು ಬೆಲೆಕಟ್ಟುವಂತಹದ್ದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

    ಕ್ಯಾನ್ ಸಿನಿಮೋತ್ಸವ: ದಕ್ಷಿಣ ಭಾರತ ಚಿತ್ರರಂಗಕ್ಕೆ ಹೆಚ್ಚಿನ ಆದರಕ್ಯಾನ್ ಸಿನಿಮೋತ್ಸವ: ದಕ್ಷಿಣ ಭಾರತ ಚಿತ್ರರಂಗಕ್ಕೆ ಹೆಚ್ಚಿನ ಆದರ

     ದೀಪಿಕಾ ಪಡುಕೋಣೆ ಜ್ಯೂರಿ

    ದೀಪಿಕಾ ಪಡುಕೋಣೆ ಜ್ಯೂರಿ

    ಮೇ 17 ರಿಂದ 28ರವರೆಗೆ ನಡೆಯುವ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಇನ್ನು ಏಳು ಮಂದಿ ಗಣ್ಯರು ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಫ್ಯಾಷನ್‌ಗಿಂತ ಹೆಚ್ಚಾಗಿ ಭಾರತೀಯ ಪ್ರತಿಭೆ ಹಾಗೂ ಸಿನಿಮಾದಲ್ಲಿ ಹೆಚ್ಚು ಮಾತುಕತೆ ನಡೆಯುತ್ತೆ ಎಂದು ನಂಬಲಾಗಿದೆ. ಇಂದು ( ಮೇ 17) ಆರಂಭ ಆಗಿರುವ ಫೆಸ್ಟಿವಲ್‌ನಲ್ಲಿ ಇದೇ ಮೊದಲ ಬಾರಿಗೆ ದೀಪಿಕಾ ಜ್ಯೂರಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

    ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ, ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಗೈರು!ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ, ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಗೈರು!

     'ಸುದ್ದಿಗಳಿಗಷ್ಟೆ ಮೀಸಲಾಗಿಲ್ಲ'

    'ಸುದ್ದಿಗಳಿಗಷ್ಟೆ ಮೀಸಲಾಗಿಲ್ಲ'

    ದೀಪಿಕಾ ಪಡುಕೋಣೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಜ್ಯೂರಿಯಾಗಿ ಆಯ್ಕೆಯಾಗಿದ್ದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಈ ಬಾರಿ ಕೇವಲ ಹಾಳೆ ಅಥವಾ ಹಾಳೆಗಳ ಮೇಲಿನ ಸುದ್ದಿಗಷ್ಟೇ ಮೀಸಲಾಗಿರುತ್ತೆ ಎಂದು ನನಗೆ ಅನಿಸುವುದಿಲ್ಲ. ನಾವು ಭಾರತದ ಸಂಭ್ರಮದ ಬಗ್ಗೆ ಮಾತಾಡುತ್ತಿದ್ದೇವೆ. ಭಾರತದ ಪ್ರತಿಭೆ ಹಾಗೂ ಸಿನಿಮಾ ಸಂಭ್ರಮವಿದು. ಇಂತಹ ಜಾಗತಿಕ ಮಟ್ಟದ ವೇದಿಕೆಯಲ್ಲಿ ಭಾರತವನ್ನು ಗುರುತಿಸಲಾಗಿದೆ." ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

     ಭಾರತವನ್ನು ಪ್ರತಿನಿಧಿಸಿದವರ ಪಟ್ಟಿ ಇಲ್ಲಿದೆ

    ಭಾರತವನ್ನು ಪ್ರತಿನಿಧಿಸಿದವರ ಪಟ್ಟಿ ಇಲ್ಲಿದೆ

    ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತವನ್ನು ಹಲವು ಮಂದಿ ಪ್ರತಿನಿಧಿಸಿದ್ದಾರೆ. ಕಾನ್ ಫೆಸ್ಟಿವಲ್‌ನಲ್ಲಿ 1982ರಲ್ಲಿ ದಿವಂಗತ ಮೃನಾಲ್ ಸೇನ್, 1990ರಲ್ಲಿ ನಿರ್ದೇಶಕಿ ಮೀರಾ ನಾಯರ್, 2000ದಲ್ಲಿ ಲೇಖಕಿ ಅರುಂಧತಿ ರಾಯ್, 2003ರಲ್ಲಿ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್, 2005ರಲ್ಲಿ ನಟಿ ನಂದಿತಾ ದಾಸ್, 2009ರಲ್ಲಿ ಶರ್ಮಿಲಾ ಠಾಗೋರ್, 2010ರಲ್ಲಿ ಶೇಖರ್ ಕಪೂರ್, 2013ರಲ್ಲಿ ವಿದ್ಯಾ ಬಾಲನ್ ಹಾಗೂ 2022ರಲ್ಲಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಭಾಗವಹಿಸಿದ್ದರು.

    ಕಾನ್ಸ್ ನಲ್ಲಿ ಐಶ್ವರ್ಯ ರೈ'ಗೆ ಹೋಲಿಸಿದ್ದಕ್ಕೆ ಸೋನಮ್ ಕಪೂರ್ ಗರಂಕಾನ್ಸ್ ನಲ್ಲಿ ಐಶ್ವರ್ಯ ರೈ'ಗೆ ಹೋಲಿಸಿದ್ದಕ್ಕೆ ಸೋನಮ್ ಕಪೂರ್ ಗರಂ

     ದೀಪಿಕಾ ಜೊತೆಗಿರುವ ಜ್ಯೂರಿಗಳ್ಯಾರು?

    ದೀಪಿಕಾ ಜೊತೆಗಿರುವ ಜ್ಯೂರಿಗಳ್ಯಾರು?

    ದೀಪಿಕಾ ಪಡುಕೋಣೆ ಜೊತೆ 7 ಮಂದಿ ಜ್ಯೂರಿಗಳಾಗಿ ಭಾಗವಹಿಸುತ್ತಿದ್ದಾರೆ. ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್, ಇಂಗ್ಲಿಷ್ ನಟ ರೆಬೆಕ್ಕಾ ಹಾಲ್, ಇರಾನಿನ ನಿರ್ದೇಶಕ ಆಸ್ಘರ್ ಫರ್ಹಾದಿ, ಸ್ವೀಡನ್‌ ನಟ ನೂಮಿ ರಪೆಸ್, ಇಟಲಿಯ ನಟ-ನಿರ್ದೇಶಕ ಜಾಸ್ಮಿನ್ ಟ್ರಿಂಕಾ, ಫ್ರೆಂಚ್ ನಿರ್ದೇಶಕ-ನಟ ಲಾಡ್ಜ್ ಲೈ, ಅಮೆರಿಕದ ನಿರ್ದೇಶಕ ಜೆಫ್ ನಿಕೊಲಸ್, ನಾರ್ವೆಯ ನಿರ್ದೇಶಕ-ಸ್ಕ್ರೀನ್ ರೈಟರ್ ಜೋಕಿಮ್ ಟ್ರೈಯರ್ ಜ್ಯೂರಿಗಳಾಗಿ ಭಾಗವಹಿಸಲಿದ್ದಾರೆ.

    English summary
    Cannes 2022: Deepika Padukone First Appearance as Representing India as a jury member, Know More.
    Tuesday, May 17, 2022, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X