Cannes 2024: ಕೈಗೆ ಪೆಟ್ಟು.. ಬ್ಯಾಂಡೇಜ್ ಸುತ್ತಿಕೊಂಡೇ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯ ರೈ ಹೆಜ್ಜೆ

ಪ್ರತಿಬಾರಿ ಬಾಲಿವುಡ್ ನಟಿ ಐಶ್ವರ್ಯ ರೈ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ವಿಭಿನ್ನ ಲುಕ್‌ನಿಂದ ಮೋಡಿ ಮಾಡುತ್ತಾರೆ. ವಿಶ್ವದಾದ್ಯಂತ ಇರುವ ಅಭಿಮಾನಿಗಳು ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಐಶ್ ದರ್ಶನಕ್ಕೆ ಕಾಯುತ್ತಿದ್ದಾರೆ. ಈ ಬಾರಿಯೂ ಬಹಳ ವಿಭಿನ್ನ ಅವತಾರದಲ್ಲಿ ಮಾಜಿ ವಿಶ್ವಸುಂದರಿ ಕಂಗೊಳಿಸಿದ್ದಾರೆ.

ಸದ್ಯ ಕೇನ್ಸ್‌ ರೆಡ್ ಕಾರ್ಪೆಟ್ ಮೇಲೆ ಐಶ್ ಹೆಜ್ಜೆ ಹಾಕಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ದಶಕಗಳೇ ಕಳೆದರೂ ಐಶ್ ಚೆಲುವೆ ಕಿಂಚಿತ್ತೂ ಕಮ್ಮಿ ಆಗಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಆಕೆಯ ಆತ್ಮವಿಶ್ವಾಸವೇ ಅದ್ಭುತ ಎನ್ನುತ್ತಿದ್ದಾರೆ. ಬುಧವಾರ (ಮೇ 15) ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಕಾಣಿಸಿಕೊಂಡಿದ್ದರು.

Cannes 2024 Injured Aishwarya Rai Bachchan walks at red carpet

ಇತ್ತೀಚೆಗೆ ಐಶ್ ಕೈಗೆ ಪೆಟ್ಟಾಗಿತ್ತು. ವಿಮಾನ ನಿಲ್ದಾಣದಲ್ಲಿ ಆಕೆಯ ಕೈಗೆ ಸುತ್ತಿದ್ದ ಬ್ಯಾಂಡೇಜ್ ನೋಡಿ ಏನಾಯ್ತು? ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಕೆ ಕಾಣಿಸಿಕೊಳ್ಳುತ್ತಾರಾ? ರೆಡೆ ಕಾರ್ಪೆಟ್ ಮೇಲೆ ಹೆಜ್ಜಾ ಹಾಕ್ತಾರಾ? ಎನ್ನುವ ಅನುಮಾನ ಇತ್ತು. ಆದರೆ ಐಶ್ವರ್ಯಾ ರೈ ತಮ್ಮ ಬದ್ಧತೆಯನ್ನು ತೋರಿಸಿದರು. ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಆಕೆ ದರ್ಶನ ಕೊಟ್ಟಿದ್ದಾರೆ.

ಕೈಗೆ ಪೆಟ್ಟಾಗಿದ್ದರೂ ತಲೆ ಕೆಡಿಸಿಕೊಳ್ಳದೇ ಐಶ್ವರ್ಯಾ ರೈ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಕಪ್ಪು, ಬಿಳಿ ಮತ್ತು ಚಿನ್ನದ ಬಣ್ಣಗಳಲ್ಲಿ ವಿನ್ಯಾಸಗೊಳಿಸಲಾದ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ತಮ್ಮ ಅಂದಚೆಂದದಿಂದ ನೋಡುಗರ ಹುಬ್ಬೇರಿಸಿದರು. ಈ ಹಿಂದೆ ಕೂಡ ಹಲವು ಬಾರಿ ಬಚ್ಚನ್ ಫ್ಯಾಮಿಲಿ ಸದಸ್ಯೆ ಕೇನ್ಸ್ ಫೆಸ್ಟಿವಲ್‌ನಲ್ಲಿ ಮಿಂಚಿದ್ದರು.

ಮೊದಲ ಬಾರಿಗೆ 2002ರಲ್ಲಿ ಆಕೆ ಮೊದಲ ಬಾರಿ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದರು. ಅಂದಿನಿಂದ ಪ್ರತಿ ವರ್ಷ ಅಲ್ಲಿಗೆ ಹೋಗುತ್ತಿದ್ದಾರೆ. ಪ್ರತಿ ಬಾರಿಯೂ ವಿಭಿನ್ನ ಲಕ್‌ಗಳಲ್ಲಿ ದರ್ಶನ ಕೊಟ್ಟಿದ್ದಾರೆ. ಕೆಲವೊಮ್ಮೆ ತಮ್ಮ ಲುಕ್ ಕಾರಣಕ್ಕೆ ಟ್ರೋಲ್ ಕೂಡ ಆಗಿದ್ದಾರೆ. ಆದರೆ ಅದರ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಈವರೆಗೆ ಐಶ್ವರ್ಯಾ 21 ಬಾರಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ನಡೆದಿದ್ದಾರೆ. ಆದರೆ ಈ ಬಾರಿ ಗಾಯವನ್ನು ಲೆಕ್ಕಿಸದೇ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ನಗುನಗುತ್ತಲೇ ಪೋಸ್ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಕೈರಾ ಅದ್ವಾನಿ, ಶೋಭಿತಾ ದುಲಿಪಾಲ, ಅದಿತಿ ರಾವ್ ಹೈದರಿ ಈ ಬಾರಿ ಕೇನ್ಸ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗಿ ಆಗುತ್ತಿದ್ದಾರೆ. ನಟಿ ದೀಪ್ತಿ ಸದ್ವಾನಿ ಈಗಾಗಲೇ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅದಿತಿ ಮೂರನೇ ಬಾರಿ ಕಾಣಿಸಿಕೊಳ್ಳುತ್ತಿದ್ದು ಬಹಳ ಉತ್ಸುಕರಾಗಿದ್ದಾರೆ. ಕೇನ್ಸ್ ಫೆಸ್ಟಿವಲ್‌ನಲ್ಲಿ ಭಾಗಿ ಆಗಲು ಸಿದ್ಧತೆ ನಡೆಸಿರುವುದಾಗಿ ಇತ್ತೀಚೆಗೆ ಎಎನ್‌ಐಗೆ ಮಾಹಿತಿ ನೀಡಿದ್ದರು.

ಇನ್ನು ಕೈರಾ ಅದ್ವಾನಿ ಇದೇ ಮೊದಲ ಬಾರಿಗೆ ಕೇನ್ಸ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ನಟಿಸಿರುವ ಶೋಭಿತಾ ಕೂಡ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯಮಟ್ಟದ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಎಲ್ಲರೂ ಬೇರೆ ಬೇರೆ ಬ್ರ್ಯಾಂಡ್‌ಗಳನ್ನು ಪ್ರತಿನಿಧಿಸುತ್ತಿದ್ದಾರೆ.

More from Filmibeat

English summary
Aishwarya Rai Bachchan stuns in Black and gold gown at cannes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X