twitter
    For Quick Alerts
    ALLOW NOTIFICATIONS  
    For Daily Alerts

    ಕಾನ್ ಚಿತ್ರೋತ್ಸವ: ಆರಂಭ ಯಾವಾಗ? ನೋಡುವುದು ಎಲ್ಲಿ? ಭಾಗವಹಿಸುವವರು ಯಾರು? ಇಲ್ಲಿದೆ ಮಾಹಿತಿ

    |

    ವಿಶ್ವದ ಜನಪ್ರಿಯ ಸಿನಿಮೋತ್ಸವಗಳಲ್ಲಿ ಒಂದಾಗಿರುವ ಕಾನ್ ಚಿತ್ರೋತ್ಸವ ಈ ಬಾರಿ ಹಿಂದೆಂದಿಗಿಂತಲೂ ರಂಗೇರಿದೆ. ಕಾನ್ ಚಿತ್ರೋತ್ಸವ ಇನ್ನೇನು ಆರಂಭವಾಗಲಿದ್ದು, ರೆಡ್ ಕಾರ್ಪೆಟ್‌ ಮೇಲೆ ಖ್ಯಾತ ನಾಮ ಸಿನಿಮಾ ತಾರೆಯರು ಹೆಜ್ಜೆ ಹಾಕಲಿದ್ದಾರೆ.

    ಕಾನ್ ಚಿತ್ರೋತ್ಸವವು ಮೇ 17 ರಂದು 7 ಗಂಟೆಗೆ (ಫ್ರ್ಯಾನ್ಸ್ ಸಮಯ)ಕ್ಕೆ ಪ್ರಾರಂಭವಾಗಲಿದೆ. ಸಿನಿಮೋತ್ಸವವರು ಮೇ 28 ಕ್ಕೆ ಅಂತ್ಯವಾಗಲಿದ್ದು, ಸತತ 12 ದಿನಗಳ ಕಾಲ ವಿಶ್ವ ಸಿನಿಮಾಗಳಿಗೆ ವೇದಿಕೆ ಒದಗಿಸಲಿದೆ ಕಾನ್ ಚಿತ್ರೋತ್ಸವ. ಚಿತ್ರೋತ್ಸವವು ಫ್ರ್ಯಾನ್ಸ್‌ನ ಕಾನ್ ನಗರದ ಫ್ರೆಂಚ್ ರಿವೇರಿಯಾನಲ್ಲಿ ನಡೆಯಲಿದೆ.

    1946 ರಲ್ಲಿ ಆರಂಭವಾದ ಕಾನ್ ಚಿತ್ರೋತ್ಸವ ಕೋವಿಡ್ ಕಾರಣಕ್ಕೆ 2020 ರಲ್ಲಿ ರದ್ದಾಗಿತ್ತು. ಬಳಿಕ 2021 ರಲ್ಲಿ ಕೋವಿಡ್ ಭೀತಿಯಿಂದ ಸೀಮಿತ ಮಾದರಿಯಲ್ಲಿ ನಡೆದಿತ್ತು. ಆದರೆ ಈಗಿನ 2022ರ ಚಿತ್ರೋತ್ಸವವು ಯಾವುದೇ ಕರಿನೆರಳು ಇಲ್ಲದೆ ಅದ್ಧೂರಿಯಾಗಿ ಪ್ರಾರಂಭವಾಗುತ್ತಿದೆ. ಕಾನ್ ಚಿತ್ರೋತ್ಸವ ಪ್ರಾರಂಭವಾಗಿ 75 ವರ್ಷಗಳಾಗಿರುವ ಕಾರಣ ಚಿತ್ರೋತ್ಸವವನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಎರಡು ವರ್ಷಗಳ ಬಳಿಕ ರೆಡ್ ಕಾರ್ಪೆಟ್ ಅನ್ನು ಮತ್ತೆ ಹಾಸಲಾಗಿದ್ದು, ರೆಡ್ ಕಾರ್ಪೆಟ್‌ ಮೇಲೆ ನಡೆಯಲು ತಾರೆಯರು ಉತ್ಸುಕರಾಗಿದ್ದಾರೆ.

    Cannes Film Fest: Schedule, Movie Screening, Red Carpet Other Information

    ಕಾನ್ ಚಿತ್ರೋತ್ಸವದಲ್ಲಿ ಭಾರತವು ಈ ಬಾರಿ 'ಕಂಟ್ರಿ ಆಪ್ ಹಾನರ್' ಎನಿಸಿಕೊಂಡಿದ್ದು, ಭಾರತಕ್ಕೆ ವಿಶೇಷ ಗೌರವವನ್ನು ಈ ಬಾರಿಯ ಚಿತ್ರೋತ್ಸವದಲ್ಲಿ ನೀಡಲಾಗುತ್ತಿದೆ.

    ಕಾನ್ ಚಿತ್ರೋತ್ಸವವದಲ್ಲಿ ಈ ಭಾರಿ ಭಾರತದ ಹಲವು ನಟ-ನಟಿಯರು ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರ ನಟಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಯನತಾರಾ, ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ, ಆರ್.ಮಾಧವನ್, ಎ.ಆರ್.ರೆಹಮಾನ್, ಬಾಲಿವುಡ್‌ನಿಂದ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ಹೀನಾ ಖಾನ್, ನವಾಜುದ್ದೀನ್ ಸಿದ್ಧಿಖಿ, ಇನ್ನೂ ಹಲವರು ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದ ಜೂರಿಗಳಲ್ಲಿ ಒಬ್ಬರಾಗಿ ವಿಶೇಷ ಗೌರವ ಗಳಿಸಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಹ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

    ಆರ್.ಮಾಧವನ್ ನಿರ್ದೇಶಿಸಿ, ನಟಿಸಿರುವ 'ರಾಕೆಟ್ರಿ; ನಂಬಿ ಎಫೆಕ್ಟ್', 'ಬೂಂಬಾ ರೈಡ್', 'ಆಲ್ಫಾ ಬೀಟಾ ಗಾಮಾ', ಮರಾಠಿ ಸಿನಿಮಾ 'ಗೋಧಾವರಿ', ಅಂಚಲ್ ಮಿಶ್ರಾ ನಿರ್ದೇಶನ ಮಾಡಿರುವ 'ಧುಹಿನ್', 'ಟ್ರೀ ಫುಲ್ ಆಫ್ ಪ್ಯಾರೆಟ್ಸ್' ಕಾನ್‌ನಲ್ಲಿ ಪ್ರದರ್ಶನಗೊಳ್ಳಲಿರುವ ಭಾರತದ ಸಿನಿಮಾಗಳಾಗಿವೆ.

    ಭಾರತದ ಮಾತ್ರವೇ ಅಲ್ಲದೆ ವಿಶ್ವದ ವಿವಿಧ ಚಿತ್ರರಂಗಗಳಿಂದ ನೂರಾರು-ಸಾವಿರಾರು ಕಲಾವಿದರು ಈ ಚಿತ್ರೋತ್ಸವಕ್ಕೆ ಹಾಜರಾಗಲಿದ್ದಾರೆ. 12500 ಕ್ಕೂ ಹೆಚ್ಚು ಮಂದಿ ವಿಶ್ವದ ಸಿನಿಮಾ ತಂತ್ರಜ್ಞರು ಈ ಸಿನಿಮೋತ್ಸವದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

    ಕಾನ್‌ ಚಿತ್ರೋತ್ಸವದ ರೆಡ್ ಕಾರ್ಪೆಟ್, ಉದ್ಘಾಟನೆ, ಇನ್ನಿತರೆಗಳನ್ನು ಲೈವ್ ಪ್ರಸಾರ ಮಾಡಲಾಗುತ್ತಿದ್ದು, ಕಾನ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೀಕ್ಷಣೆ ಮಾಡಬಹುದಾಗಿದೆ.

    English summary
    Cannes film fest: Schedule, movie screening, red carpet, live stream, guests, stars other informations you need to know.
    Tuesday, May 17, 2022, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X