Don't Miss!
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾನ್ ಚಿತ್ರೋತ್ಸವದಲ್ಲಿ ಕಣ್ಮನಸೆಳೆದ 'ದಿ ವಿಲನ್' ನಟಿಯ ರಾಯಲ್ ಲುಕ್
ಪ್ರತಿಷ್ಠಿತ ಕಾನ್ ಚಲನ ಚಿತ್ರೋತ್ಸವ ಫ್ರಾನ್ಸ್ ನಲ್ಲಿ ನಡೆಯುತ್ತಿದೆ. 74ನೇ ಕಾನ್ ಚಿತ್ರೋತ್ಸವ ಇದಾಗಿದ್ದು, ಕೊರೊನಾ ಕಾರಣದಿಂದ ತಡವಾಗಿ ಪ್ರಾರಂಭವಾಗಿದೆ. ಕೋವಿಡ್-19 ಕಟ್ಟುನಿಟ್ಟಿನ ಕ್ರಮಗಳ ನಡುವೆ ಕಾನ್ ಚಿತ್ರೋತ್ಸವ ನಡೆಯುತ್ತಿದ್ದು, ನಟಿ ಏಮ್ ಜಾಕ್ಸನ್ ರೆಡ್ ಕಾರ್ಪೆಟ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.
ರಾಯಲ್ ಲುಕ್ ನಲ್ಲಿ ಮಿಂಚಿದ ಏಮಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ನಟಿಯರು ಕಾಣಿಸಿಕೊಂಡಿಲ್ಲ. ಪ್ರತಿಷ್ಠಿತ ಕಾನ್ ಚಿತ್ರೋತ್ಸವವನ್ನು ಬಾಲಿವುಡ್ ಸೆಲೆಬ್ರಿಟಿಗಳು ಸೆಲೆಬ್ರೇಟ್ ಮಾಡುತ್ತಿಲ್ಲ. ಆದರೆ ನಟಿ ಏಮಿ ಜಾಕ್ಸನ್ ಕಾರ್ಯಕ್ರಮಕ್ಕೆ ಬಾಲಿವುಡ್ ಮೆರಗು ತುಂಬಿದ್ದಾರೆ.
ಏಮಿ ಜಾಕ್ಸನ್ ಲುಕ್‌ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ರೆಡ್ ಕಾರ್ಪೆಟ್ ಲುಕ್ ಮೇಲೆ ಏಮಿ ಆಫ್ ಶೋಲ್ಡರ್ ರೆಡ್ ಗೌನ್ ಧರಿಸಿ ಹೆಜ್ಜೆಹಾಕಿದರು. ಡೈಮಂಡ್ ನೆಕ್ಲೆಸ್ ಮತ್ತು ಡೈಮಂಡ್ ಕಿವಿಯೋಲೆ, ಉಂಗುರ ಏಮಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ತನ್ನ ರಾಯಲ್ ಲುಕ್‌ನ ಗಂಭೀರ ನಡಿಗೆಯ ಸುಂದರ ಫೋಟೋಗಳನ್ನು ಏಮಿ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಿ ವಿಲನ್ ನಟಿಯ ಸುಂದರ ನೋಟಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ನಟಿ ಏಮಿ ಜಾಕ್ಸನ್ ಹಂಗೇರಿಯನ್ ಸಿನಿಮಾ 'ದಿ ಸ್ಟೋರಿ ಆಫ್ ಮೈ ವೈಫ್' ಪ್ರದರ್ಶನಕ್ಕೆ ಹಾಜರಾಗಿದ್ದರು. ಕಾನ್ಸ್‌ಗೆ ತಯಾರಿ ನಡೆಸುತ್ತಿರುವ ಫೋಟೋಗಳನ್ನು ಏಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಏಮಿ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ರೇಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ರಾಯಲ್ ಲುಕ್ ರಿವೀಲ್ ಮಾಡಿದ್ದಾರೆ.

Recommended Video
ಅಂದಹಾಗೆ ಕೊರೊನಾ ಕಾರಣದಿಂದ ಈ ಬಾರಿ ಕಾನ್ ಚಿತ್ರೋತ್ಸವಕ್ಕೆ ಸಾಕಷ್ಟು ನಿರ್ಬಂಧ ವಿಧಿಸಲಾಗಿತ್ತು. ನಿರ್ಬಂಧದ ನಡುವೆಯೂ ಸಿನಿಮೋತ್ಸವದಲ್ಲಿ ಭಾಗಿಯಾದ ಕೆಲವೇ ಕೆಲವು ನಟಿಯರಲ್ಲಿ ಏಮಿ ಕೂಡ ಒಬ್ಬರು. ಈ ವರ್ಷ ಭಾರಿ ಕಟ್ಟಿನಿಟ್ಟಿನ ಕ್ರಮಗಳೊಂದಿಗೆ ರೆಡ್ ಕಾರ್ಪೆಟ್ ಅನ್ನು ಮಾಡಲಾಗಿದೆ. ಪ್ರತಿವರ್ಷ ಬಾಲಿವುಡ್ ನಿಂದ ನಟಿ ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್, ಐಶ್ವರ್ಯಾ ರೈ, ಅಲಿಯಾ ಭಟ್ ರೆಡ್ ಕಾರ್ಪೆಟ್ ನಲ್ಲಿ ಮಿಂಚುತ್ತಿದ್ದರು. ಆದರೆ ಈ ಬಾರಿ ರೆಡ್ ಕಾರ್ಪೆಟ್‌ನಲ್ಲಿ ಬಾಲಿವುಡ್ ಸುಂದರಿಯರು ಮಿಸ್ ಆಗಿದ್ದಾರೆ.