Cannes Film Festival: ರೆಡ್ ಕಾರ್ಪೆಟ್ ಮೇಲೆ ವಿಚಿತ್ರ ವೇಷಭೂಷಣಗಳಲ್ಲಿ ನಟಿಯರ ಎಡವಟ್ಟು
ಈ ವರ್ಷ 76ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಆರಂಭವಾಗಿದೆ. 11 ದಿನಗಳ ಕಾಲ ಬಹಳ ಅದ್ಧೂರಿಯಾಗಿ ಈ ವಾರ್ಷಿಕ ಚಿತ್ರೋತ್ಸವ ನಡೆಯಲಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ರೆಡ್ ಕಾರ್ಪೆಟ್ ಮೇಲೆ ನಟ- ನಟಿಯರು, ಮಾಡೆಲ್‌ಗಳು ಹೆಜ್ಜೆ ಹಾಕಿ ಕಮಾಲ್ ಮಾಡಲಿದ್ದಾರೆ. ಪ್ರತಿ ವರ್ಷ ನಟ- ನಟಿಯರು ಭಿನ್ನ ವಿಭಿನ್ನ ಕಾಸ್ಟ್ಯೂಮ್‌ಗಳಲ್ಲಿ ಮಿಂಚುತ್ತಾರೆ.
ಕೆಲವೊಮ್ಮೆ ಇಂತಹ ಕಾಸ್ಟ್ಯೂಮ್ಸ್ ವಿವಾದ ಸೃಷ್ಟಿಸಿದ್ದು ಇದೆ. ಎಲ್ಲರಿಗಿಂತ ವಿಭಿನ್ನವಾಗಿ ಕಾಣಬೇಕು ಎನ್ನುವ ಕಾರಣಕ್ಕೆ ಚಿತ್ರ ವಿಚಿತ್ರ ಪೋಷಾಕು ಧರಿಸಿ ನಟಿಯರು ಕಾಣಿಸಿಕೊಳ್ಳುತ್ತಾರೆ. ಖ್ಯಾತ ಡಿಸೈನರ್‌ಗಳು ಇಂತಹ ಕಾಸ್ಟ್ಯೂಮ್ಸ್ ಡಿಸೈನ್ ಮಾಡುತ್ತಾರೆ. ಆದರೆ ಕೆಲವು ಈ ಕಾಸ್ಟ್ಯೂಮ್ ನಗೆಪಾಟಲಿಗೆ ಈಡು ಮಾಡಿರುವುದು ಇದೆ. ಕೆಲವರು ಬೇಕು ಅಂತ ಎಲ್ಲರ ಗಮನ ಸೆಳೆಯಲು, ಸುದ್ದಿಯಾಗಲು ಇಂತಹ ಕಾಸ್ಟ್ಯೂಮ್ ಧರಿಸಿ ಬರೋದು ಇದೆ. ಮತ್ತೆ ಕೆಲವೊಮ್ಮೆ ಗೊತ್ತಿಲ್ಲದೇ ಎಡವಟ್ಟು ಆಗಿಬಿಡುತ್ತದೆ.

76ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಶುರುವಾಗುತ್ತಿದ್ದಂತೆ ಕೆಲವರು ಈ ಹಿಂದಿನ ಚಿತ್ರೋತ್ಸವವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ರೆಡ್ ಕಾರ್ಪೆಟ್ ಲುಕ್ಸ್ ವಿಚಾರಕ್ಕೆ ವಿವಾದ ಸೃಷ್ಟಿಸಿದ್ದು, ಟ್ರೋಲ್ ಆಗಿದ್ದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಬಾಲಿವುಡ್ ನಟಿಯರು ಕೂಡ ಇಂತದ್ದೇ ಎಡವಟ್ಟುಗಳಿಂದ ಸುದ್ದಿ ಆಗಿರೋದು ಉಂಟು.
ಎದೆಗೆ ಗೊಂಬೆ ಅಡ್ಡ ಹಿಡಿದಿದ್ದ ಸಿಸಿಯೋಲಿನಾ
ನೀಲಿ ಸಿನಿಮಾ ತಾರೆ ಇಲೋನಾ ಸ್ಟಾಲರ್ ಅಲಿಯಾಸ್ ಸಿಸಿಯೋಲಿನಾ, 80 ರ ದಶಕದಲ್ಲಿ ವಿವಾದಾತ್ಮಕ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಿದ್ದಳು. ಆಕೆ 1988 ರಲ್ಲಿ 41ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಹಾಜರಾಗಿದ್ದಳು. ಎದೆ, ಹೊಟ್ಟೆ, ಕಾಲುಗಳು ಕಾಣುವಂತ ಕಟ್ ಔಟ್ ಡ್ರೆಸ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಳು. ಹೂವಿನ ಕಿರೀಟ, ಫಿಶ್‌ನೆಟ್ ಥೈ ಹೈ ಧರಿಸಿ, ಎದೆಗೆ ಅಡ್ಡವಾಗಿ ಗೊಂಬೆಯೊಂದನ್ನು ಹಿಡಿದು ಕಾಣಿಸಿಕೊಂಡಿದ್ದಳು. ಮುಂದೆ ಆ ಗೊಂಬೆ ಆಕೆಯ ಸಿಗ್ನೇಚರ್ ಆಗಿಬಿಡ್ತು. ಆಕೆಯ ವೇಷವನ್ನು ಕೆಲವರು ಟ್ರೋಲ್ ಮಾಡಿದ್ದರು. ಮತ್ತೆ ಕೆಲವರು ಆಕೆ ಅಂದಿನ ಕಾಲಕ್ಕೆ ಬಹಳ ಮುಂದಿದ್ದಳು ಎನ್ನುತ್ತಾರೆ.
ಹಿಂಬದಿ ಹರಿದ ಉಡುಪಿನಲ್ಲಿ ವಿಕ್ಟೋರಿಯಾ ಅಬ್ರಿಲ್
ಸ್ಪ್ಯಾನಿಷ್ ನಟಿ ವಿಕ್ಟೋರಿಯಾ ಅಬ್ರಿಲ್ ವಿಚಿತ್ರ ಬ್ಲೇಜರ್ ತೊಟ್ಟು 1997ರಲ್ಲಿ 50ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ದರ್ಶನ ಕೊಟ್ಟಿದ್ದಳು. ಈ ಬ್ಲೇಸರ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ಕಷ್ಟಪಡುವಂತಾಗಿತ್ತು. ಹಿಂಭಾಗದಲ್ ಹರಿದಂತೆ ಇದ್ದ ಕಾಸ್ಟ್ಯೂಮ್ ವಿಚಿತ್ರ ಎನಿಸಿತ್ತು. ಕೈಯಲ್ಲೊಂದು ಹ್ಯಾಟ್ ಹಿಡಿದು ವಿಕ್ಟೋರಿಯಾ ಬಹಳ ಕಾನ್ಫಿಡೆಂಟ್ ಆಗಿಯೇ ಹೆಜ್ಜೆ ಹಾಕಿದ್ದರು.

ಎದೆ ಸೀಳು ಪ್ರದರ್ಶಿಸಿ ಟೀಕೆಗೊಳಗಾಗಿದ್ದ ಐಶ್
ಬಾಲಿವುಡ್ ನಟಿ ಐಶ್ವರ್ಯ ರೈ ಕೂಡ ಹಲವು ವರ್ಷಗಳಿಂದ ಕೇನ್ಸ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಆಕೆಯನ್ನು ಕೇನ್ಸ್ ರಾಣಿ ಎಂದು ಕರೆಯುತ್ತಾರೆ. ಆದರೆ 2004ರಲ್ಲಿ 57ನೇ ಕೇನ್ಸ್ ಚಿತ್ರೋತ್ಸವದಲ್ಲಿ ಆಕೆಯ ಲುಕ್ ಕೆಲವರಿಗೆ ಬೇಸರ ತರಿಸಿತ್ತು. ಎದೆಯ ಸೀಳು ಪ್ರದರ್ಶಿಸುವಂತ ಬಿಳಿ ಬಣ್ಣದ ನೀತಾ ಲುಲ್ಲಾ ಗೌನ್‌ನಲ್ಲಿ ಐಶ್ ಹೆಜ್ಜೆ ಹಾಕಿದ್ದರು. ಇಂತಹ ಪ್ರಚೋದನಕಾರಿ ಉಡುಗೆ ತೊಟ್ಟಿದ್ದಕ್ಕಾಗಿ ಆಎ ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು.
ಮುಜುಗರ ಅನುಭವಿಸಿದ್ದ ಬೆಲ್ಲಾ ಹಡಿದ್
ಮಾಡೆಲ್ ಬೆಲ್ಲಾ ಹಡಿದ್ 2016ರಲ್ಲಿ 69ನೇ ಕೇನ್ಸ್ ಚಿತ್ರೋತ್ಸವದಲ್ಲಿ ಅಲೆಕ್ಸಾಂಡ್ರಾ ಗೌಥಿಯರ್ ಕೆಂಪು ಬಣ್ಣದ ವಿಚಿತ್ರ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದರು. ಸಂಪೂರ್ಣವಾಗಿ ತೊಡೆಗಳನ್ನು ತೋರಿಸುವಂತಿದ್ದ ಈ ವೇಷ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಅದಕ್ಕೂ ಮುಮಚೆ ಆಕೆ ಈ ರೀತಿ ಸಾಕಷ್ಟು ಬಾರಿ ಬೋಲ್ಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದರು. ತಮ್ಮ ಲುಕ್ ಬಗ್ಗೆ ಮಾತನಾಡುತ್ತಾ, ಬಹಳ ಮುಜುಗರ ಅನುಭವಿಸಿದ್ದಾಗಿ ಜೊತೆಗೆ ಬಹಳ ಸೆಕ್ಸಿಯಾಗಿದೆ ಎಂದು ಭಾವಿಸಿದ್ದಾಗಿ ವಿವರಿಸಿದ್ದರು.
ಐಶ್ ಪರ್ಪಲ್ ಕಲರ್ ಲಿಪ್ಸ್‌ಸ್ಟಿಕ್
ಇನ್ನು 2016ರ ಕೇನ್ಸ್ ಫೆಸ್ಟಿವಲ್‌ನಲ್ಲಿ ಐಶ್ವರ್ಯ ರೈ ತಮ್ಮ ವಿಭಿನ್ ಲುಕ್ ಕಾರಣಕ್ಕೆ ಟ್ರೋಲ್ ಆಗಿದ್ದರು. ಹೂಗಳ ವಿನ್ಯಾಸದ ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿದ್ದ ಐಶ್ ತುಟಿಗೆ ಪರ್ಪಲ್ ಕಲರ್ ಲಿಪ್ಸ್‌ಸ್ಟಿಕ್ ಹಚ್ಚಿಕೊಂಡಿದ್ದರು. ಆದರೆ ಯಾಕೋ ಅದು ಬಹಳ ವಿಚಿತ್ರವಾಗಿ ಕಂಡಿತ್ತು. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುವಂತಾಯಿತು. ನಂತರ ಈ ಬಗ್ಗೆ ಮಾತನಾಡಿದ್ದ ಐಶ್ವರ್ಯ ಆ ಲಿಪ್ಸ್‌ಸ್ಟಿಕ್ ನನ್ನ ಆಯ್ಕೆ ಆಗಿರಲಿಲ್ಲ ಎಂದಿದ್ದರು.
ಚಾಂಟೆಲ್ ಜೆಫ್ರೀಸ್ ಬೋಲ್ಡ್ ಲುಕ್
5 ವರ್ಷಗಳ ಹಿಂದೆ 71ನೇ ಕೇನ್ಸ್ ಫೆಸ್ಟಿವಲ್‌ನಲ್ಲಿ ನಟಿ ಚಾಂಟೆಲ್ ಜೆಫ್ರೀಸ್ ಸಿಲ್ವರ್ ಬಣ್ಣದ ವಿಚಿತ್ರ ಗೌನ್‌ನಲ್ಲಿ ದರ್ಶನ ಕೊಟ್ಟಿದ್ದರು. ಹೊಕ್ಕಳ ಸುತ್ತಾ ಇದ್ದ ಬಳೆಯೊಂದು ಮೆಟಾಲಿಕ್ ಗೌನ್ ಅನ್ ಹಿಡಿದಿಟ್ಟುಕೊಂಡಂತೆ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿತ್ತು. ಚಾಂಟೆಲ್ ಜೆಫ್ರೀಸ್‌ಳ ಈ ಬೋಲ್ಡ್ ಲುಕ್ ಆ ವರ್ಷ ಬಹಳ ಚರ್ಚೆ ಹುಟ್ಟು ಹಾಕಿತ್ತು.
ಗೌನ್ ಜಾರಿ ಫೆರ್ನಾಂಡಾ ಲಿಜ್ ಕಸಿವಿಸಿ
ಫೆರ್ನಾಂಡಾ ಲಿಜ್ 2019ರಲ್ಲಿ ಅಲಿ ಕರೋಯಿ ಡಿಸೈನ್ ಮಾಡಿ ಹಳದಿ ಬಣ್ಣದ ಗೌನ್ ಧರಿಸಿದ್ದರು. ದೊಡ್ಡ ಗೌನ್‌ನಲ್ಲಿ ಆಕೆ ರಾಜಕುಮಾರಿಯಂತೆ ಕಂಡಿದ್ದಳು. ಹೆಚ್ಚು ಎದೆ ಕಾಣುವಂತೆ ಇದ್ದ ಈ ಗೌನ್ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಲು ಆಕೆ ಫೆರ್ನಾಂಡಾ ಲಿಜ್ ಕಷ್ಟಪಡುವಂತಾಯಿತು. ಎದೆಯ ಮೇಲೆ ಕೈ ಇಟ್ಟು ಕಾಸ್ಟ್ಯೂಮ್ ಜಾರದಂತೆ ಹಿಡಿದುಕೊಳ್ಳುವಂತಾಯಿತು ಎಂದು ಕೆಲವುರ ಹೇಳಿದ್ದರು. ಆದರೂ ಗೌನ್ ಜಾರಿ ಎಡವಟ್ಟಾಗಿತ್ತು.


Click it and Unblock the Notifications











