ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಜನಪ್ರಿಯ ಯೂಟ್ಯೂಬರ್, ಅಭಿಮಾನಿಗಳಲ್ಲಿ ಆತಂಕ

ಯೂಟೂಬರ್‌ಗಳು ಯಾವ ಸಿನಿಮಾ ನಟ-ನಟಿಯರಿಗೆ ಕಡಿಮೆ ಇಲ್ಲದಂತೆ ಸ್ಟಾರ್‌ಗಳಾಗಿದ್ದಾರೆ. ಸಿನಿಮಾ ರಂಗದಲ್ಲಿ ದೊಡ್ಡ ಸ್ಟಾರ್‌ಗಳಿದ್ದಂತೆ ಯೂಟ್ಯೂಬ್‌ನಲ್ಲೂ ಸ್ಟಾರ್‌ಗಳಿದ್ದಾರೆ. ಅದರಲ್ಲಿ ಪ್ರಮುಖರು ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಲಿಲ್ಲಿ ಸಿಂಗ್.

ಲಿಲ್ಲಿ ಸಿಂಗ್, ವಿಶ್ವಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ ಯೂಟ್ಯೂಬರ್ ಆಗಿದ್ದಾರೆ. ಆದರೆ ಈಗ ಲಿಲ್ಲಿ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದು, ಲಿಲ್ಲಿ ಸಿಂಗ್‌ರ ಸ್ಥಿತಿ ಕಂಡು ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿರುವ ಲಿಲ್ಲಿ ಸಿಂಗ್‌ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಲಿಲ್ಲಿ ಸಿಂಗ್ ತೀವ್ರ ನೋವಿನಲ್ಲಿರುವುದಾಗಿಯೂ, ಬಹಳ ಸುಸ್ತಾಗಿರುವಂತೆಯೂ ಕಾಣುತ್ತಿದ್ದಾರೆ. ಲಿಲ್ಲಿ ಸಿಂಗ್‌ ಆರೋಗ್ಯದ ಬಗ್ಗೆ ಅಭಿಮಾನಿಗಳು ಕಾಳಜಿ ವ್ಯಕ್ತಪಡಿಸಿದ್ದು, ಲಿಲ್ಲಿ ಸಿಂಗ್ ಬೇಗ ಗುಣಮಖವಾಗಲೆಂದು ಹಾರೈಸಿದ್ದಾರೆ.

Celebrity YouTuber Lilly Singh Hospitalized, She Said I Am In Lot Of Pain

ತಮ್ಮ ಅನಾರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಲಿಲ್ಲಿ ಸಿಂಗ್, ''ನಾನು ತೀವ್ರ ನೋವಿನಲ್ಲಿದ್ದೇನೆ ಮತ್ತು ಬಹಳ ಸುಸ್ತಾಗಿದ್ದೇನೆ'' ಎಂದಿದ್ದಾರೆ. ಲಿಲ್ಲಿ ಸಿಂಗ್‌ ಅವರು ಅಂಡಾಶಯ ಸಂಬಂಧಿತ ಖಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ''ನನ್ನ ದೇಹದ ಭಾಗಗಳು ನನಗೆ ತೀವ್ರ ನೋವು ನೀಡುತ್ತಿವೆ'' ಎಂದು ಅವರು ಹೇಳಿಕೊಂಡಿದ್ದಾರೆ.

ಲಿಲ್ಲಿ ಸಿಂಗ್ ಅಮೆರಿಕದ ಪ್ರಖ್ಯಾತ ಯೂಟ್ಯೂಬರ್, ಹಾಲಿವುಡ್ ಸಿನಿಮಾ ನಟರಷ್ಟೆ ಅವರೂ ಸಹ ಖ್ಯಾತರು. ಪ್ರಿಯಾಂಕಾ ಚೋಪ್ರಾಗೆ ಬಹಳ ಆಪ್ತವಾಗಿರುವ ಲಿಲ್ಲಿ ಸಿಂಗ್ ಪ್ರಿಯಾಂಕಾ ಜೊತೆ ಹಾಗೂ ಅವರ ಪತಿ ನಿಕ್ ಜೋನಸ್‌ ಜೊತೆ ಕೆಲವು ವಿಡಿಯೋಗಳನ್ನು ಮಾಡಿದ್ದಾರೆ. ಪ್ರಿಯಾಂಕಾ-ನಿಕ್ ಮದುವೆಯಲ್ಲಿಯೂ ಅವರು ಭಾಗವಹಿಸಿದ್ದರು.

ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ಹಾಲಿವುಡ್ ಸ್ಟಾರ್ ನಟ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಜೊತೆಗೂ ಆಪ್ತ ಗೆಳೆತನ ಹೊಂದಿರುವ ಲಿಲ್ಲಿ ಸಿಂಗ್ ಅವರೊಟ್ಟಿಗೂ ಹಲವು ವಿಡಿಯೋಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಟ್ಟಿದ್ದಾರೆ. ಭಾರತ ಮೂಲದವರಾದ ಲಿಲ್ಲಿ ಸಿಂಗ್ ಕೆಲವು ಭಾರತೀಯ ಪಾತ್ರಗಳನ್ನು ಸೃಷ್ಟಿಸಿ ಅವುಗಳಲ್ಲಿ ತಾವೇ ನಟಿಸಿ ತಮಾಷೆಯ ವಿಡಿಯೋಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಾರೆ. ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ಯೂಟ್ಯೂಬರ್‌ಗಳಲ್ಲಿ ಒಬ್ಬರು ಲಿಲ್ಲಿ ಸಿಂಗ್.

More from Filmibeat

English summary
Celebrity YouTuber Lilly Singh hospitalized she shared her video in her Instagram account and said she is in lot of pain and very much tired.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X