ವಿಶ್ವದಲ್ಲೇ ಮೊದಲ ಪ್ರೀಮಿಯರ್ ; ಭಾರತದಲ್ಲಿ ದಿ ಒಡಿಸ್ಸಿ ಅಬ್ಬರ, ಮುಂಬೈನ ಕಟಿಂಗ್ ಚಾಯ್‌ಗೆ ಮನಸೋತ ಕ್ರಿಸ್ಟೋಫರ್ ನೋಲನ್ & ಟೀಮ್

ಭಾರತದಲ್ಲಿ ಚಹಾ ಹಲವರ ಬದುಕಿನ ಅವಿಭಾಜ್ಯ ಅಂಗ. ಚಳಿ ಇರಲಿ, ಮಳೆ ಇರಲಿ ಅಥವಾ ತಲೆನೋವು ಇರಲಿ.. ಚಹಾ ಬೇಕೆ ಬೇಕು. ಹಲವರ ದಿನ ಈ ಚಹಾ ಇರದೆ ಶುರುವಾಗುವುದೇ ಇಲ್ಲ. ಇನ್ನು ನಮ್ಮಲ್ಲಿ ಈ ಚಹಾದಲ್ಲಿಯೂ ಹಲವು ವಿಧ. ನೀಲಗಿರಿ ಟೀ, ಡಾರ್ಜಿಲಿಂಗ್ ಟೀ, ಹರ್ಬಲ್ ಟೀ, ಲೆಮನ್ ಗ್ರಾಸ್ ಟೀ, ಅಸ್ಸಾಂ ಟೀ, ಬ್ಲಾಕ್ ಟೀ, ವೈಟ್ ಟೀ, ಜಿಂಜರ್ ಟೀ, ಮಿಂಟ್ ಟೀ, ಲೆಮನ್ ಟೀ, ಗ್ರೀನ್ ಟೀ... ಹೀಗೆ ಹಲವು ರುಚಿ, ಹೆಸರುಗಳೊಂದಿಗೆ ಹಲವು ಬಗೆಯ ಚಹಾ ಸಿಗುತ್ತದೆ.

ಕಾಶ್ಮೀರಿ ಖವಾ, ಹಿಮಾಚಲದ ಕಾಂಗ್ರ ಟೀ, ಹೈದರಾಬಾದಿನ ಇರಾನಿಚಾಯ್, ಪುಣೆಯ ತಂದೂರಿ ಚಾಯ್, ಅರಬ್ ಮೂಲದ ಸುಲೇಮಾನಿ ಚಾಯ್, ಚೀನಾದ ಊಲಾಂಗ್ ಟೀ ಸೇವಿಸುವವರಿಗೆ ವಿಚಿತ್ರ ಕಿಕ್ ಕೊಡುತ್ತವೆ. ಇಂಗ್ಲೆಂಡಿನ ರಾಜ ಚಾರ್ಲ್ಸ್ ಗ್ರೇ (1830) ನೆನಪಿನ ಅರ್ಲ್ ಗ್ರೇ ಟೀ' ಪ್ರಪಂಚದ ಅತ್ಯಂತ ಜನಪ್ರಿಯ ಚಹಾಗಳಲ್ಲೊಂದು. ನಮ್ಮ ಈಶಾನ್ಯ ರಾಜ್ಯಗಳ ಪ್ರಮುಖ ವಾಣಿಜ್ಯ ಬೆಳೆ ಚಹಾ.

Chai Comes First Nolan Tom Holland amp amp Matt Damon Carpet for a Mumbai Tea Break Ahead of The Odyssey

ಇಂಥಾ ಇತಿಹಾಸವನ್ನು ಹೊಂದಿರುವ ಚಹಾವನ್ನು ಹಾಲಿವುಡ್‌ನ ಜಗದ್ವಿಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸವಿದಿದ್ದಾರೆ. ಮುಂಬೈನ ಓಲಂಪಿಯಾ ಹೋಟೆಲ್‌ನಲ್ಲಿ ಕಟಿಂಗ್ ಚಾಯ್ ಕುಡಿದಿದ್ದಾರೆ.

ಮುಂಬೈನಲ್ಲಿ ''ದಿ ಒಡಿಸ್ಸಿ''ರಂಗು

ಹೌದು, ಅಸಲಿಗೆ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 13ನೇ ಚಿತ್ರ ''ದಿ ಒಡಿಸ್ಸಿ'' ಇದೇ ಜುಲೈ 17ರಂದು ವಿಶ್ವದೆಲ್ಲೆಡೆ ತೆರೆಗೆ ಬರಲಿದೆ. ವಿಶೇಷ ಅಂದರೆ ಈ ಚಿತ್ರದ ಪ್ರೀಮಿಯರ್ ಪ್ರದರ್ಶನ ಮುಂಬೈನಲ್ಲಿ ನಿನ್ನೆ (ಜುಲೈ 11) ಮುಂಬೈನಲ್ಲಿ ನಡೆದಿದೆ.

ನೆನಪಿರಲಿ.. ''ದಿ ಒಡಿಸ್ಸಿ'' ಚಿತ್ರದ ಪ್ರೀಮಿಯರ್ ಬೇರೆ ಎಲ್ಲಿಯೂ ನಡೆದಿಲ್ಲ. ಬೇರೆ ಯಾರಿಗೂ ಬೆಳ್ಳಿಪರದೆಯ ಮೇಲೆ ಇಥಾಕಾದ ರಾಜ ಒಡಿಸ್ಸಿಯಸ್‌ನ ಕಥಾನಕ ಕಣ್ತುಂಬಿಕೊಳ್ಳುವ ಸೌಭಾಗ್ಯ ಸಿಕ್ಕಿಲ್ಲ. ಸಿಕ್ಕಿದ್ದು ಕೇವಲ ಮುಂಬೈಕರ್ ಗಳಿಗೆ ಮಾತ್ರ. ಭಾರತದವರಿಗೆ ಮಾತ್ರ.

ಪ್ರೀಮಿಯರ್ ಮುನ್ನ ಚಹಾ ಬ್ರೇಕ್

ಇದೇ ಪ್ರೀಮಿಯರ್ ಆರಂಭಕ್ಕೂ ಮುನ್ನ ಕ್ರಿಸ್ಟೋಫರ್ ನೋಲನ್, ತಮ್ಮ ಚಿತ್ರದ ಸ್ಟಾರ್ ಗಳಾದ ಮ್ಯಾಟ್ ಡಾಮನ್ ಮತ್ತು ಟಾಮ್ ಹಾಲೆಂಡ್ ಟೀ ಬ್ರೇಕ್ ಪಡೆದಿದ್ದಾರೆ. ಚಹಾ ಎಲ್ಲದಕ್ಕಿಂತ ಮೊದಲು ಎಂದು ಹೇಳಿ ಸಂಭ್ರಮ ಪಟ್ಟಿದ್ದಾರೆ. ಸದ್ಯ ಕ್ರಿಸ್ಟೋಫರ್ ನೋಲನ್ ಅವರ ಈ ಟೀ ಬ್ರೇಕ್‌ನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಪ್ರೀಮಿಯರ್ ನಲ್ಲಿ ಗಣ್ಯರ ದಂಡು

ಚಹಾ ಸೇವನೆಯ ನಂತರ ಕ್ರಿಸ್ಟೋಫರ್ ನೋಲನ್, ಟಾಮ್ ಹಾಲೆಂಡ್ ಮತ್ತು ಮ್ಯಾಟ್ ಡಾಮನ್ ನೇರವಾಗಿ ಲೋವರ್ ಪರೇಲ್‌ನಲ್ಲಿರುವ ಐಮ್ಯಾಕ್ಸ್ ಚಿತ್ರಮಂದಿರಕ್ಕೆ ತೆರಳಿದ್ದಾರೆ. ''ದಿ ಒಡಿಸ್ಸಿ'' ಚಿತ್ರದ ಪ್ರೀಮಿಯರ್ ಇದ್ದಿದ್ದು ಇಲ್ಲಿಯೇ. ಈ ಪ್ರೀಮಿಯರ್ ನಲ್ಲಿ ಬಾಲಿವುಡ್‌ನ ಹಲವಾರು ಕಲಾವಿದರು ಭಾಗವಹಿಸಿದ್ದು ವಿಶೇಷ. ಉದಾಹರಣೆಗೆ ನಂದಿತಾ ದಾಸ್. ಬೊಮನ್ ಇರಾನಿ, ಡಿಂಪಲ್ ಕಪಾಡಿಯಾ, ಶ್ರುತಿ ಹಾಸನ್.


ಹುಚ್ಚೆದ್ದ ಪ್ರೇಕ್ಷಕರು

ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ. ಜನಸಾಮಾನ್ಯರಿಗೆ ಕೂಡ ಎಲ್ಲರಿಗಿಂತ ಮೊದಲು ''ದಿ ಒಡಿಸ್ಸಿ'' ನೋಡುವ ಅವಕಾಶ ನೀಡಲಾಗಿತ್ತು. ಐಮ್ಯಾಕ್ಸ್‌ ಚಿತ್ರಮಂದಿರದಲ್ಲಿ ಸಿನಿಮಾ ಲವರ್ಸ್‌ ಕ್ರೇಜ್ ನೆಕ್ಸ್ಟ್ ಲೆವಲ್‌ನಲ್ಲಿತ್ತು. ಚಿತ್ರ ಮುಗಿದ ನಂತರ ಚಪ್ಪಾಳೆ, ಶಿಳ್ಳೆಯ ಸದ್ದುಗಳಿಂದ ಚಿತ್ರಮಂದಿರದ ಮೇಲ್ಛಾವಣಿ ಕಿತ್ತು ಹೋಗುವುದು ಒಂದು ಬಾಕಿ ಇತ್ತು.

Chai Comes First Nolan Tom Holland amp amp Matt Damon Carpet for a Mumbai Tea Break Ahead of The Odyssey

ಭಾವುಕಗೊಂಡ ಕ್ರಿಸ್ಟೋಫರ್ ನೋಲನ್

ಪ್ರೇಕ್ಷಕರ ಈ ಪ್ರತಿಕ್ರಿಯೆ ಕಂಡು ಕ್ರಿಸ್ಟೋಫರ್ ನೋಲನ್ ಭಾವುಕರಾದರು. ಪ್ರೀತಿಯನ್ನು ಕಂಡು ಕೈ ಮುಗಿದರು. ಇದೇ ಮೊದಲ ಬಾರಿ ತಮ್ಮ ಚಿತ್ರದ ಪ್ರೀಮಿಯರ್ ಭಾರತದಲ್ಲಿ ಆಗಿದ್ದು, ಇದಕ್ಕೆ ನೀವು ತೋರಿದ ಪ್ರೀತಿ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದರು. ಚಿತ್ರಮಂದಿರಗಳಿಂದು ಜೀವಂತವಾಗಿವೆ ಅಂದರೆ ಅದಕ್ಕೆ ಭಾರತದ ಪ್ರೇಕ್ಷಕರ ಕೊಡುಗೆಯೇ ದೊಡ್ಡದು ಎಂದರು.

ಮ್ಯಾಟ್ ಡಾಮನ್ ನಿಮ್ಮೆಲ್ಲರ ಈ ಪ್ರತಿಕ್ರಿಯೆಯಿಂದ ನನಗೆ ಶಾಕ್ ಆಯ್ತು ಅಂದರು. ಇಡೀ ಜಗತ್ತಿನಲ್ಲಿಯೇ ನಾವೆಲ್ಲಿಯೂ ಈ ಚಿತ್ರವನ್ನು ಪ್ರೇಕ್ಷಕರಿಗೆ ಇನ್ನು ತೋರಿಸಿಲ್ಲ. ನೀವೆ ನಮ್ಮ ಮೊದಲ ಆಡಿಯನ್ಸ್. ಈ ಪ್ರೀಮಿಯರ್ ಸದಾ ಕಾಲ ನನಗೆ ನೆನಪಿನಲ್ಲಿರುತ್ತೆ ಅಂದರು. ಭಾರತೀಯರ ನೆಚ್ಚಿನ ಸ್ಪೈಡರ್ ಮ್ಯಾನ್ ಟಾಮ್ ಹಾಲೆಂಡ್ ಭಾರತದ ಪ್ರೇಕ್ಷಕರ ಲವ್ ಅಂಡ್ ಅಫೆಕ್ಷನ್‌ಗೆ ಬಿಗ್ ಥ್ಯಾಂಕ್ಸ್ ಹೇಳಿದರು.

ಒಟ್ನಲ್ಲಿ ''ದಿ ಒಡಿಸ್ಸಿ'' ಚಿತ್ರದ ಪ್ರೀಮಿಯರ್ ಗೆ ಮುಂಬೈನಲ್ಲಿ ಅದ್ಭುತವಾದ ರೆಸ್ಫಾನ್ಸ್ ಸಿಕ್ಕಿದೆ. ಕ್ರಿಸ್ಟೋಫರ್ ನೋಲನ್ ಮತ್ತು ತಂಡದ ಟೀ ಬ್ರೇಕ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದೇ ಜುಲೈ 17 ರಂದು ಬೆಳ್ಳಿತೆರೆಯಲ್ಲಿ ''ದಿ ಒಡಿಸ್ಸಿ'' ಧಗಧಗಿಸಲಿದೆ. ಸಿನಿಮಾದ ಹೈಪ್ ಭಾರತದಲ್ಲಿ ಪೀಕ್ ಹಂತ ತಲುಪಿದೆ. ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಎಷ್ಟು ಸದ್ದು ಮಾಡುತ್ತೆ..? ಎಷ್ಟು ಹಣವನ್ನು ಕೇವಲ ಭಾರತದಲ್ಲಿ ದೋಚುತ್ತೆ..? ಎನ್ನುವುದನ್ನು ಕಾದು ನೋಡಬೇಕಿದೆ.

English summary
Hollywood royalty meets Mumbai's cutting chai! See how Christopher Nolan, Tom Holland, and Matt Damon paused the pre-premiere chaos of The Odyssey for a tea break before making IMAX history.
Read more about: christopher nolan mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X