»   » ಖ್ಯಾತ ಗಾಯಕ ಚೆಸ್ಟರ್ ಬೆನ್ನಿಂಗ್ಟನ್ ಇನ್ನಿಲ್ಲ

ಖ್ಯಾತ ಗಾಯಕ ಚೆಸ್ಟರ್ ಬೆನ್ನಿಂಗ್ಟನ್ ಇನ್ನಿಲ್ಲ

Posted By:
Subscribe to Filmibeat Kannada

ಅಮೆರಿಕದ ಹೆಸರಾಂತ ರಾಕ್ ಬ್ಯಾಂಡ್ 'ಲಿಂಕಿನ್ ಪಾರ್ಕ್'ನ ಖ್ಯಾತ ಗಾಯಕ ಚೆಸ್ಟರ್ ಬೆನ್ನಿಂಗ್ಟನ್(41) ವಿಧಿವಶರಾಗಿದ್ದಾರೆ.

ಚೆಸ್ಟರ್ ಬೆನ್ನಿಂಗ್ಟನ್ ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಎಲ್‌ಎ ಕೌಂಟಿ ಕಾರ್ನರ್ ಹೇಳಿರುವುದು ಮೂಲಗಳಿಂದ ತಿಳಿದಿದೆ. ಚೆಸ್ಟರ್ ರವರ ಮೃತದೇಹ ಅವರ ವೈಯಕ್ತಿಕ ಮನೆಯಲ್ಲಿ ಗುರುವಾರ 9 ಗಂಟೆಗೆ ಪತ್ತೆಯಾಗಿದೆ.

Chester Bennington, Linkin Park lead vocalist, dies from suicide age 41

ಗಾಯಕ ಅಮೆರಿಕ ಹೆಸರಾಂತ ರಾಕ್ ಬ್ಯಾಂಡ್ 'ಲಿಂಕಿನ್ ಪಾರ್ಕ್'ನ ಸದಸ್ಯರು ಆಗಿದ್ದರು. 2000 ನೇ ಇಸವಿಯಲ್ಲಿ 'ಹೈಬ್ರಿಡ್ ಥಿಯರಿ' ಆಲ್ಬಮ್ ಮೂಲಕ ವೊಕಲಿಸ್ಟ್ ಆಗಿ ಪಾದಾರ್ಪಣೆ ಮಾಡುವ ಮೂಲಕ ಹೆಸರುಗಳಿಸಿದ್ದರು. ಅಲ್ಲದೇ 2005 ರಲ್ಲಿ ಸ್ಥಾಪನೆ ಆದ 'ಡೆಡ್ ಬೈ ಸನ್‌ರೈಸ್' ತಮ್ಮದೇ ರಾಕ್ ಬ್ಯಾಂಡ್‌ಗೆ ಮತ್ತು 'ಸ್ಟೋನ್ ಟೆಂಪಲ್ ಪೈಲಟ್ಸ್' ರಾಕ್ ಬ್ಯಾಂಡ್ ಗೆ ಲೀಡ್ ಸಿಂಗರ್ ಆಗಿದ್ದರು.

ಚೆಸ್ಟರ್ ಬೆನ್ನಿಂಗ್ಟನ್ ಮುಖ್ಯ ಗಾಯಕರಾಗಿದ್ದ ರಾಕ್ ಬ್ಯಾಂಡ್ 'ಲಿಂಕಿಂನ್ ಪಾರ್ಕ್' ಈ ವರೆಗೂ 70 ದಶಲಕ್ಷಕ್ಕೂ ಹೆಚ್ಚು ಆಲ್ಬಂಗಳನ್ನು ಪ್ರಪಂಚದಾದ್ಯಂತ ಮಾರಾಟ ಮಾಡಿದ್ದು, ಎರಡು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದೆ.

ಚೆಸ್ಟರ್ ವಿಧಿವಶರಾಗಿರುವುದಕ್ಕೆ ನೊಂದು ಅಮೆರಿಕದ ಖ್ಯಾತ ಡಿಜೆ ದಿ ಚೈನ್‌ಸ್ಮೋಕರ್ಸ್, ಗಾಯಕಿ ರಿಹನ್ನಾ, ರ್ಯಾಪರ್ ಮತ್ತು ಖ್ಯಾತ ಗಾಯಕ ಮೈಕ್ ಶಿನೊಡಾ ಸೇರಿದಂತೆ ಮುಂತಾದವರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

English summary
Chester Bennington, Linkin Park lead vocalist, dies from suicide age 41

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada