twitter
    For Quick Alerts
    ALLOW NOTIFICATIONS  
    For Daily Alerts

    ಸೆಕ್ಸ್ ವರ್ಕರ್ಸ್ ಜೊತೆ ಸಿಕ್ಕಿಬಿದ್ದರೆ ನಿಮ್ಮ ಕಥೆ ಮುಗಿಯಿತು: ಸೆಲೆಬ್ರಿಟಿಗಳಿಗೆ ಚೀನಾ ಎಚ್ಚರಿಕೆ!

    By ರವೀಂದ್ರ ಕೊಟಕಿ
    |

    ಇತ್ತ ಭಾರತದಲ್ಲಿ ಶಾರುಖ್ ಖಾನ್ ಮಗನ ಡ್ರಗ್ಸ್ ವ್ಯವಹಾರದ ಮೇಲೆ ನಿತ್ಯ ಚರ್ಚೆಗಳು ನಡೆಯುತ್ತಿದೆ. ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಹಾಗೂ ಶಾರುಖ್ ಖಾನ್ ಅವರ ಬೆಂಬಲಿಗರು ಪದೇಪದೇ ಸರ್ಕಾರದ ಮತ್ತು NCB ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ಭಾರತದಲ್ಲಿ ಅಷ್ಟರಮಟ್ಟಿಗೆ ಎಲ್ಲರಿಗೂ ಕೂಡ ಮುಕ್ತ ಸ್ವಾತಂತ್ರ್ಯವಿದೆ.

    ಆದರೆ ನೆರೆಯ ಚೀನಾದಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದರೆ ಅಲ್ಲಿ, ಪ್ರಜಾಪ್ರಭುತ್ವದ ಕಲ್ಪನೆ ಇರಲಿ ಮುಕ್ತವಾದ ಸ್ವಾತಂತ್ರ್ಯ ಕೂಡ ಅಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಷ್ಟವಾದ ಬಟ್ಟೆ, ತಿಂಡಿ-ಊಟ ಯಾವುದಕ್ಕೂ ಮುಕ್ತ ಸ್ವಾತಂತ್ರ್ಯವಿಲ್ಲ. ಪ್ರಜಾಪ್ರಭುತ್ವಕ್ಕಾಗಿ ಧ್ವನಿಯೆತ್ತಿದ ಅನೇಕ ಧ್ವನಿಗಳನ್ನು ಅತ್ಯಂತ ಬರ್ಭರವಾಗಿ ಚೀನಾದ ಕಮ್ಯುನಿಸ್ಟ್ ಸರ್ಕಾರ ಹತ್ಯೆಗೈದಿದೆ.

    ಇಂತಹ ಬರ್ಭರ ಚೀನಾದ ಕಮ್ಯೂನಿಸ್ಟ್ ಸರ್ಕಾರದ ವಕ್ರದೃಷ್ಟಿಗೆ ಈಗ ಗುರಿಯಾಗಿರುವುದು ಅಲ್ಲಿನ ಖ್ಯಾತ ಪಿಯಾನೋ ವಾದಕ 'ಲೀ ಯಾಂಡಿ'. ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಬದ್ಧವಾಗಿರುವ ಚೀನಾದ ಸರಕಾರ ಅತ್ಯಂತ ಬರ್ಭರವಾದ ರೀತಿಯಲ್ಲಿ ಅಲ್ಲಿನ ಜನಸಾಮಾನ್ಯರ ಮೇಲೆ ತನ್ನ ದಬ್ಬಾಳಿಕೆಯನ್ನು ಮುಂದುವರಿಸಿದ್ದು ಇದಕ್ಕೆ ಉದಾಹರಣೆಯಾಗಿ ಈಗ ಬಂಧಿತನಾಗಿರುವ ಪಿಯಾನೋ ವಾದಕನ ಮೇಲೆ ಅತ್ಯುಗ್ರವಾದ ಕ್ರಮ ಕೈಗೊಳ್ಳಲು ಮುಂದಾಗಿದೆ.

    ಚೀನಾ ಸರ್ಕಾರದ ನೀತಿ ನಿಲುವುಗಳನ್ನು ಪ್ರಶ್ನಿಸಿ ಅಲ್ಲಿ ಬದುಕುವುದು ಎಷ್ಟು ದುಸ್ಸಾಹಸ ಎಂಬುದು ಈಗ ಅಲ್ಲಿ ಜನರಿಗೆ ಸ್ಪಷ್ಟವಾಗಿ ಅರಿವಿಗೆ ಬರುತ್ತಿದೆ. ಜನಸಾಮಾನ್ಯರ ಎಲ್ಲಾ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿರುವ ಈ ಕಮ್ಯುನಿಸ್ಟ್ ಸರಕಾರದ ಕಣ್ಣು ಈಗ ಸೆಲೆಬ್ರಿಟಿಗಳ ಮೇಲೆ ಬಿದ್ದಿದೆ. ಈಗ ಇದೇ ಕ್ರಮದಲ್ಲಿ ವೇಶ್ಯಾವಾಟಿಕೆಯ ಆರೋಪದ ಮೇಲೆ ಸ್ಟಾರ್ ಪಿಯಾನೋ ವಾದಕನನ್ನು ಬಂಧಿಸಿದೆ ಡ್ರ್ಯಾಗನ್ ಸರ್ಕಾರ. ಸರ್ಕಾರಿ ಶಿಸ್ತಿಗೆ ಸವಾಲು ಹಾಕುವ ಯಾರಿಗಾದರೂ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ. ಡ್ರ್ಯಾಗನ್ ಅಧಿಕೃತ ಮಾಧ್ಯಮವು ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಸರ್ಕಾರದ ಶಿಸ್ತನ್ನು ಉಲ್ಲಂಘಿಸುತ್ತಿರುವ ಮನೋರಂಜನಾ ರಂಗದ ಸೆಲೆಬ್ರೆಟಿಗಳ ಮೇಲೆ ಅತ್ಯುಗ್ರವಾದ ಕ್ರಮ ಕೈಗೊಳ್ಳಲು ಮುಂದಾಗಿದೆ ಅಂತ ವರದಿ ಮಾಡಿದೆ.ಇದೇ ಕ್ರಮದಲ್ಲಿ ಇದೀಗ ಪ್ರಮುಖ ಪಿಯಾನೋ ವಾದಕ ಲೀ ಯಾಂಡಿಯನ್ನು ಗುರುವಾರ ರಾತ್ರಿ ಸೆಕ್ಸ್ ವರ್ಕರ್ ಜೊತೆ ಬಂಧಿಸಲಾಯಿತು ಎಂದು ಚೀನಾದ ಮಾಧ್ಯಮಗಳು ಸಿಸಿಟಿವಿ ಫುಟೇಜ್ ಗಳೊಂದಿಗೆ ವರದಿ ಮಾಡಿವೆ.

    ನೈತಿಕತೆ ಮೀರಿದರೆ ಯಾರಿಗಾದರೂ ಇದೇ ಶಿಕ್ಷೆ: ಚೀನಾ ಸರ್ಕಾರ

    ನೈತಿಕತೆ ಮೀರಿದರೆ ಯಾರಿಗಾದರೂ ಇದೇ ಶಿಕ್ಷೆ: ಚೀನಾ ಸರ್ಕಾರ

    "ಕೆಲವು ಸೆಲೆಬ್ರಿಟಿಗಳು ಸಾಮಾನ್ಯವಾಗಿ ಆತ್ಮಸಾಕ್ಷಿ, ನೈತಿಕತೆ ಮತ್ತು ಕಾನೂನಿನ ಘನತೆಗೂ ಸವಾಲು ಹಾಕುತ್ತಾರೆ. ಶಿಸ್ತು ಮತ್ತು ಕಾನೂನಿನ ಅನುಸರಣೆ ಮುಖ್ಯ. ಶಿಸ್ತಿನಿಂದ ಇರುವುದನ್ನು ಖಚಿತಪಡಿಸಿಕೊಳ್ಳಿ. ಯಾರಾದರೂ ಕಾನೂನುಗಳು ಮತ್ತು ಸಾಮಾಜಿಕ ನೈತಿಕತೆಯನ್ನು ಸವಾಲು ಮಾಡಲು ಧೈರ್ಯ ಮಾಡಿದರೆ ಕಠಿಣ ಕ್ರಮ ತಪ್ಪಲ್ಲ" ಅಂತ ಚೀನಾ ಸರ್ಕಾರ ಅಲ್ಲಿನ ಸೆಲೆಬ್ರಿಟಿಗಳಿಗೆ ಎಚ್ಚರಿಕೆಯನ್ನು ನೀಡಿದೆ.

    ತಂಡದಿಂದ ಹೊರಹಾಕಿದ ಸಂಗೀತಗಾರರ ಒಕ್ಕೂಟ

    ತಂಡದಿಂದ ಹೊರಹಾಕಿದ ಸಂಗೀತಗಾರರ ಒಕ್ಕೂಟ

    ವೇಶ್ಯೆಯೊಂದಿಗೆ ಸಿಕ್ಕಿಬಿದ್ದ ಪಿಯಾನೋ ವಾದಕ ಲೀಯನ್ನು ಹೊರಹಾಕುತ್ತಿರುವುದಾಗಿ ಚೀನಾ ಸಂಗೀತಗಾರರ ಸಂಘವು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಚೀನಾದ ಪೊಲೀಸರು ಸರ್ಕಾರದ ಅಧಿಕೃತ ಸೋಶಿಯಲ್ ಸೈಟ್‌ನಲ್ಲಿ ಲೀ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬಂಧನಕ್ಕೆ ಪ್ರತಿಕ್ರಿಯಿಸಿ "ಈ ಜಗತ್ತಿನಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳಿಗಿಂತ ಹೆಚ್ಚಿನ ಬಣ್ಣಗಳಿವೆ. ಆದರೆ ಕಪ್ಪು ಮತ್ತು ಬಿಳಿ ಬಣ್ಣವನ್ನು ಬೇರ್ಪಡಿಸಬೇಕು. ಇದು ಖಂಡಿತವಾಗಿಯೂ ಗೊಂದಲಕ್ಕೀಡಾಗುವುದಿಲ್ಲ" ಎಂದು ಅದರಲ್ಲಿ ಹೇಳಿಕೊಂಡು ಬಂದಿದ್ದಾರೆ.

    ಮನರಂಜನಾ ಉದ್ಯಮದ ಮೇಲೆ ಚೀನಾ ಸರ್ಕಾರದ ದಬ್ಬಾಳಿಕೆ

    ಮನರಂಜನಾ ಉದ್ಯಮದ ಮೇಲೆ ಚೀನಾ ಸರ್ಕಾರದ ದಬ್ಬಾಳಿಕೆ

    ಮನರಂಜನಾ ಉದ್ಯಮವನ್ನು ಶುದ್ಧೀಕರಿಸುವ ಹೆಸರಿನಲ್ಲಿ ಚೀನಾ ಸರ್ಕಾರ ಕಠಿಣ ನಿಲುವು ತಳೆಯುತ್ತಿದೆ. ಸರ್ಕಾರದ ವಿರುದ್ಧ ಧ್ವನಿಯೆತ್ತುವ ಸಿನಿ ಸೆಲೆಬ್ರಿಟಿಗಳನ್ನು ದೇಶದಿಂದ ಹೊರಹಾಕುವುದು, ಹಣಕಾಸು ವಹಿವಾಟಿನ ಮೇಲೆ ಮೇಲೆ ನಿರ್ಬಂಧ ಹೇರುವುದು, ಮತ್ತು ಅಭಿಮಾನಿ ಸಂಘಗಳ ಸಂಸ್ಕೃತಿಯನ್ನು ನಿಷೇಧಿಸುವುದು ಮುಂತಾದ ಕೃತ್ಯಗಳನ್ನು ಮಾಡುತ್ತಿದೆ. ಇನ್ನು ಈ ದಮನಕಾರಿ ಅಭಿಯಾನದ ಭಾಗವಾಗಿ ಕಮ್ಯುನಿಸ್ಟ್ ಸರ್ಕಾರದ ಕಟು ಟೀಕೆಗಾರರಾದ ನಟಿ 'ಜಾವೋ ವೀ' ಅವರನ್ನು ಅಂತರ್ಜಾಲದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆಕೆಯ ಬರಹಗಳನ್ನು ನಿರ್ಬಂಧಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಆಕೆಯ ಅಭಿಮಾನಿ ಸಮುದಾಯಗಳನ್ನು ತೆಗೆದುಹಾಕಲಾಗಿದೆ.

    ಎಲ್ಲಾ ರಂಗಗಳ ಮೇಲೆ ದಮನಕಾರಿ ನೀತಿ

    ಎಲ್ಲಾ ರಂಗಗಳ ಮೇಲೆ ದಮನಕಾರಿ ನೀತಿ

    ಟೆಕ್ ಕಂಪನಿಗಳಿಂದ ರಿಯಲ್ ಎಸ್ಟೇಟ್ ಉದ್ಯಮದವರೆಗೆ, ಶಾಲೆಗಳಿಂದ ಬೋಧನೆಯ ವರೆಗೂ ದೇಶದ ಆರ್ಥಿಕತೆಯ ವಿಶಾಲ ವಿಭಾಗಗಳನ್ನು ಗುರಿಯಾಗಿಸಿಕೊಂಡು ವ್ಯಾಪಕ ನಿಯಂತ್ರಣ, ದಮನಕಾರಿ ನೀತಿಯನ್ನು ಚೀನಾ ಕಮ್ಯುನಿಸ್ಟ್ ಸರ್ಕಾರ ಮಾಡುತ್ತಿದೆ. ಆದಾಗ್ಯೂ, ಅಧಿಕೃತ ಮಾಧ್ಯಮವು ಈ ಕ್ರಮವನ್ನು "ಆಳವಾದ ಕ್ರಾಂತಿ" ಎಂದು ವಿವರಿಸಿದೆ ಮತ್ತು ವಿರೋಧಿಸುವ ಯಾರಾದರೂ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಚೀನೀ-ಅಮೇರಿಕನ್ ಬ್ಲಾಗರ್ ಚಾರ್ಲ್ಸ್ ಜುನಿ ಬಂಧನ

    ಚೀನೀ-ಅಮೇರಿಕನ್ ಬ್ಲಾಗರ್ ಚಾರ್ಲ್ಸ್ ಜುನಿ ಬಂಧನ

    "ಸಾಂಸ್ಕೃತಿಕ ಮಾರುಕಟ್ಟೆಯು ಇನ್ನು ಮುಂದೆ ಸೆಲೆಬ್ರಿಟಿಗಳಿಗೆ ಸ್ವರ್ಗವಲ್ಲ. ಸುದ್ದಿ ಮತ್ತು ಸಾರ್ವಜನಿಕ ಅಭಿಪ್ರಾಯಗಳು ಇನ್ನು ಮುಂದೆ ಪಾಶ್ಚಾತ್ಯ ಸಂಸ್ಕೃತಿಯನ್ನು ಪೂಜಿಸುವ ಸ್ಥಿತಿಯಲ್ಲಿಲ್ಲ" ಎಂದು ಸರ್ಕಾರ ಎಚ್ಚರಿಸಿದೆ.2013 ರಲ್ಲಿ, ಚೀನೀ-ಅಮೆರಿಕನ್ ಬ್ಲಾಗರ್ 'ಚಾರ್ಲ್ಸ್ ಜುನಿ' ವೇಶ್ಯಾವಾಟಿಕೆಯ ಆರೋಪದ ಮೇಲೆ ಬಂಧಿಸಲಾಯಿತು. ಅವರು ದೇಶದಲ್ಲಿ ಮಾಲಿನ್ಯ ಮತ್ತು ಮಕ್ಕಳ ಕಳ್ಳಸಾಗಣೆ ಸಮಸ್ಯೆಗಳ ಬಗ್ಗೆ ಅಂತರ್ಜಾಲದಲ್ಲಿ ಪ್ರಸಾರ ಮಾಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಕಾರಣಕ್ಕೆ ವೇಶ್ಯಾವಾಟಿಕೆಯ ಹೆಸರಿನಲ್ಲಿ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಈಗ ಇದೇ ಕ್ರಮದಲ್ಲಿ ಪಿಯಾನೋ ವಾದಕ ಲೀ ಅವರನ್ನು ಕೂಡ ವೇಶ್ಯಾವಾಟಿಕೆಯ ಹೆಸರಿನಲ್ಲೇ ಬಂಧಿಸಲಾಗಿದೆ. 'ಚಾಂಗ್ಕಿಂಗ್' ಎಂಬ ರಾಜಕೀಯ ವೇದಿಕೆಯನ್ನು ಲೀ ಸ್ಥಾಪಿಸಿದ್ದೇ ಅವರ ಬಂಧನಕ್ಕೆ ಕಾರಣವಾಗಿದೆ ಅಂತ ಹೇಳಲಾಗುತ್ತಿದೆ. ಒಟ್ಟಾರೆ ಚೀನಾದ ಕಮ್ಯೂನಿಸ್ಟ್ ಸರ್ಕಾರದ ದಮನಕಾರಿ ನೀತಿಗೆ ಅಲ್ಲಿನ ಜನಸಾಮಾನ್ಯರು ನಿತ್ಯ ಬಲಿಯಾಗುತ್ತಿದ್ದಾರೆ. ಆದರೆ ಇದರ ಬಗ್ಗೆ ವಿಶ್ವ ಮೌನವಾಗಿರುವುದು ದುರಂತದ ಸಂಗತಿಯಾಗಿದೆ.

    English summary
    Chines government warned celebrities over moral issues. Government already arrested some artists for moral issues.
    Saturday, October 23, 2021, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X