For Quick Alerts
  ALLOW NOTIFICATIONS  
  For Daily Alerts

  ಮಿಸ್ ವರ್ಲ್ಡ್ ಆಗಲು ಬಂದವಳು ಜೈಲು ಪಾಲಾದಾಗ.!

  By ಸೋನಿ
  |

  ಕಷ್ಟಕಾಲ ಬಂದಾಗ ಕೈಯಲ್ಲಿ ಕಾಸಿಲ್ಲ ಅಂತಾದರೆ, ದುಡ್ಡಿಗೋಸ್ಕರ ಮನುಷ್ಯ ಏನು ಬೇಕಾದ್ರೂ ಮಾಡುತ್ತಾನೆ. ಅಲ್ಲದೇ ಹಣ ಎಂಬ ಮಾಯೆ ಏನನ್ನಾದರೂ ಮಾಡುವಂತೆ ಮನುಷ್ಯನನ್ನು ಪ್ರೇರೆಪಿಸುತ್ತದೆ. ಇದೀಗ ಅದೇ ಪರಿಸ್ಥಿತಿ ಒದಗಿದ್ದು, ಕೊಲಂಬಿಯಾ ಮೂಲದ ಮಾಡೆಲ್ ಒಬ್ಬರಿಗೆ.

  ಜೂಲಿಯಾನ ಲೊಪೆಜ್ ಸರಜೋಲಾ ಎಂಬ 22 ವರ್ಷದ ಕೊಲಂಬಿಯಾದ ರೂಪದರ್ಶಿ ಒಬ್ಬರು ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಷ್ಟರಲ್ಲಿಯೇ ಮಿಸ್ ವರ್ಲ್ಡ್ ಆಗಬೇಕಿತ್ತು.[ಕಾನ್ ಸಿನಿಮೋತ್ಸವದಲ್ಲಿ ಮಾಡೆಲ್ ಬೆಲ್ಲಾಳ ಗೌನ್ ತಂದಿತ್ತ ಫಜೀತಿ]

  ಆದರೆ ಕಾನೂನು ಬಾಹಿರ ಕೆಲಸ ಮಾಡಿದ ಆರೋಪದಿಂದಾಗಿ, ಮಾಡೆಲ್ ಲೊಪೆಜ್ ಅವರು ಇದೀಗ ಒಂದಲ್ಲಾ-ಎರಡಲ್ಲಾ ಬರೋಬ್ಬರಿ 15 ವರ್ಷ ಜೈಲು ವಾಸ ಅನುಭವಿಸುವಂತಾಗಿದೆ.[ಕೊಕೇನ್ ಗಾಗಿ ತನ್ನ ದೇಹವನ್ನೇ ಮಾರಿಕೊಂಡ ಕಿರುತೆರೆ ನಟಿ]

  ಅಷ್ಟಕ್ಕೂ ಆ ಮಾಡೆಲ್ ಮಾಡಿದ್ದಾದರೂ ಏನು.? ಮಾಡೆಲ್ ಆಗಬೇಕಿದ್ದವರು ಜೈಲಿನಲ್ಲಿ ಕಂಬಿ ಎಣಿಸಲು ಕಾರಣ ಏನು?. ಎಂಬುದನ್ನು ವಿವರವಾಗಿ ಹೇಳ್ತೀವಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ....

  ಮಿಸ್ ವರ್ಲ್ಡ್ ಸ್ಪರ್ಧೆಗೆ ಡ್ರಗ್ಸ್ ಸಾಗಿಸಿದ ಲೊಪೆಜ್

  ಮಿಸ್ ವರ್ಲ್ಡ್ ಸ್ಪರ್ಧೆಗೆ ಡ್ರಗ್ಸ್ ಸಾಗಿಸಿದ ಲೊಪೆಜ್

  ಅಂದಹಾಗೆ ಮಿಸ್ ಲೊಪೆಜ್ ಅವರು ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಚೀನಾಗೆ ಹೋಗುತ್ತಿದ್ದ ಸಂದರ್ಭದಲ್ಲಿ, ತಮ್ಮ ಜೊತೆಗೆ ಡ್ರಗ್ಸ್ ಸಾಗಿಸಿದ ಆರೋಪದಡಿಯಲ್ಲಿ ಇದೀಗ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ.[ಹಾಲಿವುಡ್ ನಟಿಗೋಸ್ಕರ ಈ ಭೂಪ ಮಾಡಿದ್ದೇನು.?]

  15 ವರ್ಷ ಜೈಲು ಶಿಕ್ಷೆ

  15 ವರ್ಷ ಜೈಲು ಶಿಕ್ಷೆ

  ಇದೀಗ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಚೀನಾ ನ್ಯಾಯಾಲಯವು ರೂಪದರ್ಶಿ ಲೊಪೆಜ್ ಅವರಿಗೆ ಭರ್ತಿ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ತೀರ್ಪು ನೀಡಿದೆ.

  ಕಳೆದ ವರ್ಷ ಸಿಕ್ಕಿಬಿದ್ದ ರೂಪದರ್ಶಿ

  ಕಳೆದ ವರ್ಷ ಸಿಕ್ಕಿಬಿದ್ದ ರೂಪದರ್ಶಿ

  ಕಳೆದ ವರ್ಷ ಜುಲೈ 18ಕ್ಕೆ ಜೂಲಿಯಾನ ಲೊಪೆಜ್ ಅವರು ತಮ್ಮ ಲ್ಯಾಪ್ ಟಾಪ್ ನಲ್ಲಿ ಸುಮಾರು 610 ಗ್ರಾಂ ಕೊಕೇನ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾಗ, ಹಾಂಗ್ ಕಾಂಗ್ ಬಳಿ ಇರುವ ಗುವಾಂಗ್ಝ್ ಬೈಯೂನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.

  ಮಿಸ್ ಅಂಟಿಯೋಕೂಯ

  ಮಿಸ್ ಅಂಟಿಯೋಕೂಯ

  ಅಂದಹಾಗೆ ಜೂಲಿಯಾನ ಲೊಪೆಜ್ ಅವರು ಕೊಲಂಬಿಯಾದ ಅಂಟಿಯೋಕೂಯ ಸೌಂದರ್ಯ ಸ್ಪರ್ಧೆಯ ವಿಜೇತೆ ಆಗಿದ್ದರು. ನಂತರ ಮಿಸ್ ವರ್ಲ್ಡ್ ಕೊಲಂಬಿಯಾ ಹಾಗೂ ಮಿಸ್ ವರ್ಲ್ಡ್ 2015ರಲ್ಲಿ ಭಾಗವಹಿಸುವ ಕನಸು ಕೂಡ ಕಂಡಿದ್ದರಂತೆ.

  ತಪ್ಪೊಪ್ಪಿಕೊಂಡ ಲೊಪೆಜ್

  ತಪ್ಪೊಪ್ಪಿಕೊಂಡ ಲೊಪೆಜ್

  'ನನಗೆ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನ ಬಳಿ ಹಣ ಇರಲಿಲ್ಲ. ಸ್ಪರ್ಧೆಗೆ ಹಣದ ಅವಶ್ಯಕತೆ ತುಂಬಾ ಇತ್ತು. ನನ್ನ ಮನೆಯಲ್ಲಿ ಕೂಡ ನನಗೆ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ಪ್ರಯಾಣಕ್ಕೆ, ವಾಸ್ತವ್ಯಕ್ಕೆ ಅಂತ ತುಂಬಾ ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಡ್ರಗ್ಸ್ ಕಳ್ಳ ಸಾಗಾಣಿಕೆ ಮಾಡಿದೆ" ಎಂದು ಖುದ್ದು ರೂಪದರ್ಶಿ ಲೊಪೆಜ್ ಆರೋಪವನ್ನು ಒಪ್ಪಿಕೊಂಡಿದ್ದಾರೆ.

  ಎಲ್ಲವೂ ಹಣಕ್ಕಾಗಿ

  ಎಲ್ಲವೂ ಹಣಕ್ಕಾಗಿ

  'ಓರ್ವ ವ್ಯಕ್ತಿ ನಾನು ಡ್ರಗ್ಸ್ ಸಾಗಾಣೆ ಮಾಡಿದರೆ USD 2,500 ನೀಡುವುದಾಗಿ ಹೇಳಿದ್ದ, ಅದಕ್ಕಾಗಿ ನನಗೆ ಹಣದ ಅವಶ್ಯಕತೆ ಇದ್ದ ಕಾರಣ ಒಪ್ಪಿಕೊಂಡೆ" ಎಂದು ಲೊಪೆಜ್ ತಪ್ಪೊಪ್ಪಿಕೊಂಡಿದ್ದಾರೆ.

  English summary
  22 year old a Colombian model Juliana Lopez Sarrazola hoping to take part in the Miss World beauty contest in China. Now she has been jailed for 15 years. After she was found guilty of smuggling drugs into China.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X