For Quick Alerts
  ALLOW NOTIFICATIONS  
  For Daily Alerts

  ಅಬ್ಬಾ! 'ಟೆನೆಟ್' ಸಿನಿಮಾದ ಒಂದು ದಿನದ ಕಲೆಕ್ಷನ್ ಇಷ್ಟೋಂದಾ?

  |

  ವಿಶ್ವದಾದ್ಯಂತ ಈಗಾಗಲೇ ನೂರಾರು ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ 'ಟೆನೆಟ್' ನಿನ್ನೆ (ಡಿಸೆಂಬರ್ 4) ರಂದು ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.

  ಜಗದ್ವಿಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಈ ಸಿನಿಮಾ ಮೊದಲ ದಿನವೇ ಭಾರತದಲ್ಲಿ ಅದ್ಭುತವಾದ ಕಲೆಕ್ಷನ್ ಮಾಡಿದ್ದು, ಚಿತ್ರ ಬಿಡುಗಡೆ ಮಾಡಲು ಕಾಯುತ್ತಿರುವ ನಿರ್ಮಾಪಕರಲ್ಲಿ ಭರವಸೆ ಹುಟ್ಟುಹಾಕಿದೆ.

  ಕೊರೊನಾ ಕಾಲದಲ್ಲೂ ಸಾವಿರಾರು ಕೋಟಿ ಬಾಚಿದ ಸಿನಿಮಾ!ಕೊರೊನಾ ಕಾಲದಲ್ಲೂ ಸಾವಿರಾರು ಕೋಟಿ ಬಾಚಿದ ಸಿನಿಮಾ!

  ಟೆನೆಟ್ ಸಿನಿಮಾ ಬಿಡುಗಡೆ ಆಗುವ ಮೊದಲೇ ಸುಮಾರು 50,000 ಟಿಕೆಟ್‌ಗಳು ಮುಂಗಡವಾಗಿ ಬುಕ್ ಆಗಿದ್ದವಂತೆ. ಈ ಸಿನಿಮಾವು ಒಂದೇ ದಿನಕ್ಕೆ ಅಂದಾಜು 3-4 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಕೊರೊನಾ ಕಾಲದಲ್ಲಿ ಅದರಲ್ಲಿಯೂ ಚಿತ್ರಮಂದಿರಗಳು ಅರ್ಧ ಸೀಟುಗಳಿಗೆ ಪ್ರೇಕ್ಷಕರ ಸಂಖ್ಯೆ ನಿಗದಿಗೊಳಿಸಿರಬೇಕಾದರೆ ಈ ಸಂಖ್ಯೆ ದೊಡ್ಡದೆಂದೇ ಪರಿಗಣಿಸಲಾಗುತ್ತಿದೆ.

  ಈ ವಾರಾಂತ್ಯದಲ್ಲಿ ಅಂದರೆ ಡಿಸೆಂಬರ್ 05- 06 ರಂದು ಸಿನಿಮಾವು ಸುಮಾರು 10 ಕೋಟಿಗೂ ಹೆಚ್ಚು ಹಣ ಗಳಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಭಾರತದಲ್ಲಿ ಒಟ್ಟು 30 ಕೋಟಿ ಹಣ ಗಳಿಸುವ ಉದ್ದೇಶ ಸಿನಿಮಾಕ್ಕಿದೆ.

  ಕೊರೊನಾ ಸಮಯವನ್ನೂ ಲೆಕ್ಕಿಸದೆ ತಮ್ಮ ಸಿನಿಮಾವನ್ನು ವಿಶ್ವದಾದ್ಯಂತ ಬಿಡುಗಡೆಗೊಳಿಸಿದ್ದರು ಕ್ರಿಸ್ಟೋಫರ್ ನೋಲನ್, ಕೊರೊನಾ ಸಂದರ್ಭದಲ್ಲಿಯೂ ಈ ಸಿನಿಮಾ ಸಾವಿರಾರು ಕೋಟಿ ಹಣ ಬಾಚಿಕೊಂಡಿತ್ತು. ಸೆಪ್ಟೆಂಬರ್ ಮೊದಲ ವಾರದ ವೇಳೆಗೆ 1100 ಕೋಟಿ ಹಣ ಗಳಿಸಿತ್ತು ಟೆನೆಟ್ ಸಿನಿಮಾ. ಈಗ ಇದರ ಗಳಿಕೆ ಡಬಲ್ ಆಗಿದೆ.

  ವಿದೇಶದಲ್ಲಿ ಕೋಟಿಗಟ್ಟಲೆ ಹಣ ಗಳಿಸುತ್ತಿದೆ ಅಕ್ಷಯ್ ಕುಮಾರ್ ಸಿನಿಮಾವಿದೇಶದಲ್ಲಿ ಕೋಟಿಗಟ್ಟಲೆ ಹಣ ಗಳಿಸುತ್ತಿದೆ ಅಕ್ಷಯ್ ಕುಮಾರ್ ಸಿನಿಮಾ

  ಮಂಡ್ಯದಲ್ಲೂ ನಡೆದೇ ಹೋಯ್ತು ಅಮಾನವೀಯ ಘಟನೆ | Filmibeat Kannada

  ಕ್ರಿಸ್ಟೊಫರ್ ನೋಲನ್ ನಿರ್ದೇಶಿಸಿರುವ ಟೆನೆಟ್‌ನಲ್ಲಿ ಜಾನ್ ಡೇವಿಡ್ ವಾಷಿಂಗ್ಟನ್, ರಾಬರ್ಟ್ ಪ್ಯಾಟಿಸನ್, ಎಲಿಜಬೆತ್ ಡೆಬಿಕಿ, ಭಾರತದ ನಟಿ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ಸಿನಿಮಾದ ಒಟ್ಟು ಬಜೆಟ್ 1400 ಕೊಟಿಗೂ ಹೆಚ್ಚು.

  English summary
  Christopher Nolan's Tenet movie first day box office collection in India is 3-4 crore rs. Its expected do better.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X