»   » 'ರಾಕ್ ಅಂಡ್ ರೋಲ್' ಖ್ಯಾತ ಸಂಗೀತಗಾರ ಚಕ್ ಬೆರ್ರಿ ನಿಧನ

'ರಾಕ್ ಅಂಡ್ ರೋಲ್' ಖ್ಯಾತ ಸಂಗೀತಗಾರ ಚಕ್ ಬೆರ್ರಿ ನಿಧನ

Posted By:
Subscribe to Filmibeat Kannada

ಅಮೆರಿಕದ ಖ್ಯಾತ 'ರಾಕ್ ಅಂಡ್ ರೋಲ್' ಸಂಗೀತಗಾರ ಚಕ್ ಬೆರ್ರಿ (90) ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಸೆಂಟ್ ಲೂಯಿಸ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಚಕ್ ಬೆರ್ರಿ ರವರಿಗೆ ತುರ್ತು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಚಕ್ ಬೆರ್ರಿ, ವೆಂಟ್ಜ್ ವಿಲ್ಲೆ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ (ಮಾರ್ಚ್ 18) ನಿಧನರಾಗಿದ್ದಾರೆ. ಇವರು ಮೂಲತಃ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ.

1926 ಅಕ್ಟೋಬರ್ 18 ರಂದು ಅಮೆರಿಕದ ಮಿಸ್ಸೌರಿ ರಾಜ್ಯದ ಸೆಂಟ್ ಲೂಯಿಸ್ ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಮ್ಯೂಸಿಕ್ ಬಗ್ಗೆ ಆಸಕ್ತಿ ಹೊಂದಿದ್ದ ಚಕ್ ಬೆರ್ರಿ ಮೊಟ್ಟ ಮೊದಲು ಅಮೆರಿಕದಲ್ಲಿಯ 'ಸಮ್ಮರ್ ಹೈ ಸ್ಕೂಲ್' ನಲ್ಲಿ ತಮ್ಮ ಸಂಗೀತ ಪ್ರದರ್ಶನ ನೀಡಿದ್ದರು. ನಂತರ ರಿದಮ್ ಮತ್ತು ಬ್ಲೂಸ್ ಪ್ರಮುಖ ಸಂಗೀತ ಇನ್ ಸ್ಟ್ರುಮೆಂಟ್ ಗಳನ್ನು ನುಡಿಸುವ ಮುಖಾಂತರ ತಮ್ಮ ಸಂಗೀತ ಜೀವನದಲ್ಲಿ ಖ್ಯಾತರಾಗಿದ್ದರು.

Chuck Berry, Rock and Roll Pioneer, Dies at 90

ಚಕ್ ಬೆರ್ರಿ ಎಂದು ಖ್ಯಾತರಾಗಿರುವ ಚಾರ್ಲ್ಸ್ ಎಡ್ವರ್ಡ್ ಆಂಡರ್ ಸನ್ ಬೆರ್ರಿ ಕೇವಲ 'ರಾಕ್ ಅಂಡ್ ರೋಲ್' ಸಂಗೀತದಲ್ಲಿ ಮಾತ್ರವಲ್ಲದೇ ಹಾಡುವುದು, ಗೀತೆ ರಚನೆಗಳಿಂದಲೂ ಪ್ರಸಿದ್ಧಿ ಆಗಿದ್ದರು. ಅಲ್ಲದೇ 1986 ರಲ್ಲಿ 'ರಾಕ್ ಅಂಡ್ ರೋಲ್ ಆಫ್ ಫೇಮ್' ಗೌರವ ಸ್ವೀಕರಿಸಿದ್ದರು.

ಚಕ್ ಬೆರ್ರಿ ತಮ್ಮ 50 ನೇ ವಯಸ್ಸಿನಲ್ಲಿ 'ಜಾನಿ ಬಿ ಗೂಡ್', 'ಮೇಬೆಲ್ಲೆನ್', 'ರೋಲ್ ಓವರ್ ಬೇತೋವೆನ್' ಗೀತೆಗಳಿಂದ ಸಂಗೀತ ಕ್ರೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದರು. 90 ನೇ ವಯಸ್ಸಿನಲ್ಲಿ ನಿಧನ ಹೊಂದಿರುವ ಚಕ್ ಬೆರ್ರಿ ಅವರಿಗೆ ಪ್ರಪಂಚದಾದ್ಯಂತದ ಸಂಗೀತಗಾರರು ಸಂತಾಪ ವ್ಯಕ್ತಪಡಿಸಿದ್ದಾರೆ.

English summary
Charles Edward Anderson "Chuck" Berry was an American guitarist, singer and songwriter and one of the pioneers of rock and roll music, who was died at 90.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada