For Quick Alerts
  ALLOW NOTIFICATIONS  
  For Daily Alerts

  ಬ್ಯಾಟ್‌ಮ್ಯಾನ್ ಶೂಟಿಂಗ್ ಶುರು: ಗುರುತೇ ಸಿಗದ ಮೇಕ್ ಓವರ್‌ನಲ್ಲಿ 'ಕಾಲಿನ್ ಫಾರೆಲ್'

  |

  ಕೊರೊನಾ ವೈರಸ್‌ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದ ಬ್ಯಾಟ್‌ಮ್ಯಾನ್ ಮತ್ತೆ ಶೂಟಿಂಗ್ ಆರಂಭಿಸಿದೆ. ಸೋಮವಾರ ಯುಕೆಯಲ್ಲಿ ಬ್ಯಾಟ್‌ಮ್ಯಾನ್ ಇಡೀ ಚಿತ್ರತಂಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಮೇಕಿಂಗ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಪ್ರಮುಖ ನಟರಾದ ರಾಬರ್ಟ್ ಪ್ಯಾಟಿನ್ಸನ್, ಕಾಲಿನ್ ಫಾರೆಲ್, ಜಾನ್ ಟೋರ್ಟುರೊ ಮತ್ತು ಜೊ ಕ್ರಾವಿಟ್ಜ್ ಅವರು ಅಂತ್ಯಕ್ರಿಯೆ ದೃಶ್ಯದಲ್ಲಿ ಭಾಗವಹಿಸಿದ್ದರು. ಈ ವಿಡಿಯೋ ಹಾಗು ಫೋಟೋಗಳು ಭಾರಿ ಕುತೂಹಲ ಮೂಡಿಸಿದೆ.

  ಬ್ಯಾಟ್‌ಮ್ಯಾನ್ ಪಾತ್ರಕ್ಕೆ ಬೇರೆ ನಟ: ರೊಚ್ಚಿಗೆದ್ದ ಅಭಿಮಾನಿಗಳು

  ಚಿತ್ರದ ನಾಯಕ ನಟ ರಾಬರ್ಟ್ ಅವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಕೊರೊನಾ ವೈರಸ್ ದೃಢಪಟ್ಟಿತ್ತು. ಅದಾದ ಬಳಿಕ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಈಗ ಚಿತ್ರೀಕರಣದ ಸಮಯದಲ್ಲೂ ರಾಬರ್ಟ್ ಮಾಸ್ಕ ಧರಿಸಿದ್ದರು. ಅವರ ಸುತ್ತಮುತ್ತಿಲಿನ ಜನರು ಸಹ ಅಗತ್ಯ ಮುನ್ನೆಚ್ಚರಿಕೆ ವಹಿಸುತ್ತಿರುವುದು ಕಂಡುಬಂತು.

  ಬ್ಯಾಟ್‌ಮ್ಯಾನ್‌ ಚಿತ್ರದ ಸೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಕಾಲಿನ್ ಫಾರೆಲ್. ಪೆಂಗ್ವಿನ್ ಪಾತ್ರದಲ್ಲಿ ನಟಿಸುತ್ತಿರುವ ಕಾಲಿನ್ ಅವರನ್ನು ಪ್ರಾಸ್ಥೆಟಿಕ್ ಮೇಕಪ್‌ನಲ್ಲಿ ಗುರುತಿಸಲು ಸಾಧ್ಯವಾಗಲ್ಲ. ಅಷ್ಟರ ಮಟ್ಟಿಗೆ ಮೇಕ್ ಓವರ್ ಮಾಡಲಾಗಿದೆ. ಇನ್ನು ಸೆಲೀನಾ ಕೈಲ್ ಅಥವಾ ಕ್ಯಾಟ್ ವುಮನ್ ಪಾತ್ರದಲ್ಲಿ ನಟಿಸಿರುವ ಜೊಯಿ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಳು.

  ಸೆಪ್ಟೆಂಬರ್ ಮಧ್ಯದಲ್ಲಿ ಬ್ಯಾಟ್ ಮ್ಯಾನ್ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಆಗ ಚಿತ್ರದ ಕಲಾವಿದರೊಬ್ಬರಿಗೆ ಕೊರೊನಾ ಬಂದಿದೆ ಎಂದು ಸುದ್ದಿಯಾಯಿತು. ಆದ್ರೆ, ವಾರ್ನರ್ ಬ್ರದರ್ಸ್ ಯಾರಿಗೆ ಸೋಂಕು ತಗುಲಿದೆ ಎಂದು ಬಹಿರಂಗಪಡಿಸಿಲ್ಲ. ನಂತರ ರಾಬರ್ಟ್ ಅವರಿಗೆ ಕೊರೊನಾ ಅಂಟಿದೆ ಎಂದು ವ್ಯಾಪಕವಾಗಿ ವರದಿಯಾಗಿತ್ತು. ಈಗ ಅಗತ್ಯ ಮುಂಜಾಗ್ರತೆ ತೆಗೆದುಕೊಂಡು ಕೆಲಸ ಆರಂಭಿಸಿರುವುದಾಗಿ ಅಧಿಕೃತ ಪ್ರಕಟಣೆ ನೀಡಿದ್ದಾರೆ.

  ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದು ಜೀವನದಲ್ಲಿ ಲಕ್ಷ್ಮಿ ಆಗಮನ | Filmibeat Kannada

  ಹಾಲಿವುಡ್ ಮಾಧ್ಯಮಗಳ ವರದಿ ಪ್ರಕಾರ, ಬ್ಯಾಟ್‌ಮ್ಯಾನ್‌ ಸಿನಿಮಾ ಚಿತ್ರೀಕರಣ ಮೂರು ತಿಂಗಳ ಕಾಲ ನಡೆಯಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಜೂನ್ 2021 ರಲ್ಲಿ ಸಿನಿಮಾ ತೆರೆಕಾಣಬೇಕಿತ್ತು. ನಂತರ ಅಕ್ಟೋಬರ್ 2021ಕ್ಕೆ ಮುಂದೂಡಲಾಯಿತು. ಈಗ ಮೇ 2022ಕ್ಕೆ ಚಿತ್ರಮಂದಿರಕ್ಕೆ ಬರಲಿದೆ ಎನ್ನಲಾಗಿದೆ.

  English summary
  Robert Pattinson, Zoe Kravitz and Colin Farrell spotted on Batman Sets Today. Colin Farrell is unrecognisable as Penguin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X