twitter
    For Quick Alerts
    ALLOW NOTIFICATIONS  
    For Daily Alerts

    ದೆವ್ವದ ಸಿನಿಮಾ ನೋಡುವ ಕೆಲಸ ಖಾಲಿ ಇದೆ, 90 ಸಾವಿರ ಸಂಬಳ: ಯಾರಿಗಿದೆ ಧೈರ್ಯ?

    By ಫಿಲ್ಮಿಬೀಟ್ ಡೆಸ್ಕ್
    |

    ಹಣ ಕೊಟ್ಟು ಸಿನಿಮಾ ನೋಡುವುದು ಸಾಮಾನ್ಯ ಆದರೆ ಸಿನಿಮಾ ನೋಡಿದರೆ ಹಣ ಕೊಡುವ ಆಫರ್ ಕೇಳಿದ್ದೀರ? ಇಲ್ಲಿದೆ ನೋಡಿ.

    ಸಿನಿಮಾ ನೋಡಿದರೆ ಸುಮಾರು ಲಕ್ಷ ರೂಪಾಯಿ ಹಣ ಕೊಡಲಾಗುತ್ತದೆ. ಆದರೆ ನೋಡಬೇಕಾಗಿರುವುದು ಸಾಮಾನ್ಯ ಸಿನಿಮಾಗಳಲ್ಲ ಬದಲಿಗೆ ಹಾರರ್ ಸಿನಿಮಾಗಳು.

    ಹತ್ತು ದಿನದಲ್ಲಿ 13 ಹಾರರ್ ಸಿನಿಮಾ ನೋಡಿದವರಿಗೆ 90,000 ಸಂಬಳವಾಗಿ ನೀಡಲಾಗುತ್ತದೆ. ಜೊತೆಗೆ ಕೆಲವು ಗಿಫ್ಟ್‌ ಕಾರ್ಡ್‌ಗಳನ್ನು ಸಹ ನೀಡಲಾಗುತ್ತದೆ. ಹೀಗೆಂದು ಅಮೆರಿಕ ದೇಶದ ಫೈನ್ಯಾನ್ಸ್ ಬಜ್‌ ಹೆಸರಿನ ಸಂಸ್ಥೆ ಘೋಷಣೆ ಹೊರಡಿಸಿದೆ.

    Company Will Pay 90000 Rs To Watch 13 Horror Movies

    ಹೆಚ್ಚು ಬಜೆಟ್‌ನ ಹಾರರ್ ಸಿನಿಮಾಗಳು ಜನರಿಗೆ ಹೆಚ್ಚು ಭೀತಿಯ ಭಾವ ಹುಟ್ಟಿಸುತ್ತವೆಯೇ ಅಥವಾ ಕಡಿಮೆ ಬಜೆಟ್‌ನ ಸಿನಿಮಾಗಳು ಜನರಲ್ಲಿ ಹೆಚ್ಚಿನ ಭಯದ ಭಾವ ಹುಟ್ಟುಹಾಕುತ್ತವೆಯೋ ಪರೀಕ್ಷಿಸಲು ಫೈನ್ಯಾನ್ಸ್ ಬಜ್‌ ಈಥರಹದ್ದೊಂದು ಪ್ರಯೋಗಕ್ಕೆ ಮುಂದಾಗಿದೆ. 'ಹಾರರ್ ಮೂವಿ ಹಾರ್ಟ್ ರೇಟ್ ಅನಾಲಿಸ್ಟ್' ಹೆಸರಿನ ಹುದ್ದೆಯನ್ನು ಸ್ಥಾಪಿಸಿದ್ದು, ಈ ಉದ್ಯೋಗಕ್ಕೆ ಅರ್ಜಿ ಹಾಕಿ ಉದ್ಯೋಗ ಸಂಪಾದಿಸಬೇಕಿದೆ.

    ಆಯ್ಕೆ ಆದ ವ್ಯಕ್ತಿಗೆ ಫಿಟ್‌ಬಿಟ್‌ (ಹೃದಯ ಬಡಿತ ಅಳೆಯುವ ಗೆಜೆಟ್) ಅನ್ನು ಕಟ್ಟಿ ಆತನಿಗೆ ಹಾರರ್ ಸಿನಿಮಾಗಳನ್ನು ತೋರಿಸಲಾಗುತ್ತದೆ. ಹೃದಯದ ಬಡಿತ ಆಧರಿಸಿ ಹಾರರ್ ಸಿನಿಮಾಗಳ ಗುಣಮಟ್ಟವನ್ನು ಸಂಸ್ಥೆಯು ನಿರ್ಧರಿಸುತ್ತದೆ.

    ಆದರೆ ಈ ಉದ್ಯೋಗಕ್ಕೆ ಅರ್ಜಿಯನ್ನು ಅಮೆರಿಕದ ನಾಗರೀಕರಷ್ಟೆ ಹಾಕಬೇಕು, ಆನ್‌ಲೈನ್ ಮೂಲಕ ಅಪ್ಲಿಕೇಶನ್ ಹಾಕಿದವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ ಫಿಟ್‌ಬಿಟ್ ಕಳಿಸಲಾಗುತ್ತದೆ. ಆಯ್ಕೆ ಆದ ವ್ಯಕ್ತಿಯು ಫೈನ್ಯಾನ್ಸ್ ಬಜ್‌ ಸಂಸ್ಥೆಯು ಹೇಳುವ ಹದಿಮೂರು ಹಾರರ್ ಸಿನಿಮಾಗಳನ್ನು ಹತ್ತು ದಿನದಲ್ಲಿ ನೋಡಬೇಕು. ಸಂಸ್ಥೆಯು ಈಗಾಗಲೇ ಹದಿಮೂರು ಹಾರರ್ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    'ಸಾ', 'ಅಮ್ಟಿವಿಲ್ಲೆ ಹಾರರ್', 'ಎ ಕ್ವೈಟ್ ಪ್ಲೇಸ್', 'ಎ ಕ್ವೈಟ್ ಪ್ಲೇಸ್ 2', 'ಕ್ಯಾಂಡಿಮ್ಯಾನ್', 'ಇನ್‌ಸಿಡಿಯಸ್', 'ದಿ ಬ್ಲೇರ್ ವಿಚ್‌ ಪ್ರಾಜೆಕ್ಟ್', 'ಸಿನಿಸ್ಟರ್', 'ಗೆಟ್ ಔಟ್', 'ದಿ ಪರ್ಗ್', 'ಹಾಲೊವೀನ್ (2018)', 'ಪ್ಯಾರಾನಾರ್ಮಲ್ ಆಕ್ಟಿವಿಟಿ', 'ಅನ್ನಾಬೆಲ್' ಇಷ್ಟು ಹಾರರ್ ಸಿನಿಮಾಗಳನ್ನು ಆಯ್ಕೆ ಆದ ವ್ಯಕ್ತಿ ನೋಡಬೇಕಾಗಿದೆ.

    English summary
    Finance Buzz company paying 90,000 rs to watch 13 horror movies in ten days. Company already released the list of 13 movies.
    Thursday, September 16, 2021, 11:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X