twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್ 2', 'RRR' ಬಾಕ್ಸಾಫೀಸ್ ದಾಖಲೆ ಉಡೀಸ್ ಮಾಡುತ್ತಾ 'ಅವತಾರ್ 2'? ಏನಿದೆ ಲೆಕ್ಕಾಚಾರ?

    |

    ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತಿರೋ ಮೋಸ್ಟ್ ಎಕ್ಸ್‌ಪೆನ್ಸಿವ್ ಸಿನಿಮಾ 'ಅವತಾರ್ 2'. 2009ರಲ್ಲಿ ರಿಲೀಸ್ ಆಗಿದ್ದ ಇದೇ ಸಿನಿಮಾ ಪ್ರೀಕ್ವೆಲ್ 'ಅವತಾರ್' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿದ್ದ ಎಲ್ಲಾ ದಾಖಲೆಗಳನ್ನು ಒಂದೇ ಏಟಿಗೆ ಅಳಿಸಿಹಾಕಿತ್ತು.

    ಈಗ 13 ವರ್ಷಗಳ ಬಳಿಕ ಜೇಮ್ಸ್ ಕ್ಯಾಮರೊನ್ 'ಅವತಾರ್' ಸಿನಿಮಾದ ಮತ್ತೊಂದು ಸರಣಿಯನ್ನು ತೆರೆಮೇಲೆ ತರುತ್ತಿದ್ದಾರೆ. ಈಗಾಗಲೇ 'ಅವತಾರ್ 2' ಬಗ್ಗೆ ಭಾರತದಲ್ಲೂ ಕ್ರೇಜ್ ಹೆಚ್ಚಾಗಿದ್ದು, ಇಲ್ಲಿನ ಬಾಕ್ಸಾಫೀಸ್‌ನಲ್ಲೂ ಭರ್ಜರಿ ಲೂಟಿ ಮಾಡುತ್ತೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ.

    ಕಳೆದ 9 ತಿಂಗಳಿನಿಂದ ಬಾಲಿವುಡ್ ಬಾಕ್ಸಾಫೀಸ್‌ ನಷ್ಟದಲ್ಲಿದೆ. ಮಧ್ಯದಲ್ಲಿ ಒಂದೆರಡು ಬಿಗ್ ಸಿನಿಮಾಗಳು ಬಂದಿದ್ದರೂ, ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿಕ್ಕುವಲ್ಲಿ ಸೋತಿತ್ತು. ಆದರೆ, 'ಅವತಾರ್ 2' ಬಾಲಿವುಡ್‌ ಬಾಕ್ಸಾಫೀಸ್‌ಗೆ ಹೊಸ ಚೈತನ್ಯವನ್ನು ನೀಡಲಿದೆ. ಅಲ್ಲದೆ, 'ಕೆಜಿಎಫ್ 2', 'RRR' ಎರಡೂ ಸಿನಿಮಾಗಳ ಕಲೆಕ್ಷನ್ ದಾಖಲೆಗಳನ್ನುಉಡೀಸ್ ಮಾಡುತ್ತೆ ಎಂದು ಲೆಕ್ಕ ಹಾಕಲಾಗುತ್ತಿದೆ.

    ಬಾಕ್ಸಾಫೀಸ್ ಬ್ಯುಸಿನೆಸ್ ಮತ್ತೆ ಚಿಗುರುತ್ತಾ?

    ಬಾಕ್ಸಾಫೀಸ್ ಬ್ಯುಸಿನೆಸ್ ಮತ್ತೆ ಚಿಗುರುತ್ತಾ?

    ಕಳೆದ 9 ತಿಂಗಳಿನಿಂದ ಥಿಯೇಟರ್ ಸಾವಿರಾರು ಸಿನಿಮಾಗಳು ಬಂದು ಹೋಗಿವೆ. ಇವುಗಳಲ್ಲಿ ಗೆದ್ದಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. 'ಕೆಜಿಎಫ್ 2' , 'RRR', 'ಬ್ರಹ್ಮಾಸ್ತ್ರ', 'ಭೂಲ್ ಭುಲಯ್ಯ', 'ವಿಕ್ರಾಂತ್ ರೋಣ', 'ಕಾಂತಾರ' ಸಿನಿಮಾಗಳು ಬಿಟ್ಟರೆ, ವಿಶ್ವದ ಮಟ್ಟದಲ್ಲಿ ಬೇರಾವುದೇ ಸಿನಿಮಾಗಳು ಸದ್ದು ಮಾಡಿಲ್ಲ. ಈ ಸಿನಿಮಾ ಎಲ್ಲಾ ಸಿನಿಮಾಗಳು ಜನರನ್ನು ಚಿತ್ರಮಂದಿರದೆಡೆಗೆ ಪ್ರೇಕ್ಷಕರನ್ನು ಸೆಳೆದರೂ, ಬಾಕ್ಸಾಫೀಸ್‌ನಲ್ಲಿ ಆದ ಬ್ಯುಸಿನೆಸ್ ಅಷ್ಟಕ್ಕಷ್ಟೇ. ಆದರೆ, 'ಅವತಾರ್ 2' ಭಾರತದ ಬಾಕ್ಸಾಫೀಸ್‌ಗೆ ಹೊಸ ಎನರ್ಜಿ ಕೊಡುತ್ತೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.

    'ಅವತಾರ್ 2' ಅಡ್ವಾನ್ಸ್ ಬುಕಿಂಗ್

    'ಅವತಾರ್ 2' ಅಡ್ವಾನ್ಸ್ ಬುಕಿಂಗ್

    ಭಾರತದಲ್ಲಿ 'ಅವತಾರ್ 2' ಕ್ರೇಜ್ ಜೋರಾಗಿದೆ. ಭಾರತದಲ್ಲಿ ಬಿಡುಗಡೆಗೆ 15 ದಿನಕ್ಕೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಅವಕಾಶ ಮಾಡಿಕೊಡಲಾಗಿತ್ತು. ಹಲವು ವೆಬ್‌ಸೈಟ್‌ಗಳ ಪ್ರಕಾರ, ಭಾರತದಲ್ಲಿ ಈಗಾಗಲೇ ಅಡ್ವಾನ್ಸ್ ಬುಕಿಂಗ್‌ನಿಂದ 2 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ 11 ದಿನಗಳು ಬಾಕಿ ಇರುವುದರಿಂದ ಟಿಕೆಟ್ ಬುಕಿಂಗ್‌ನಲ್ಲಿ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಭಾರತದಲ್ಲಿ 'ಅವತಾರ್ 2' ದಾಖಲೆ ಮಾಡೋದು ಗ್ಯಾರಂಟಿ ಅಂತಿದ್ದಾರೆ ಟ್ರೇಡ್ ಅನಲಿಸ್ಟ್‌ಗಳು.

    'ಕೆಜಿಎಫ್ 2', 'RRR' ರೆಕಾರ್ಡ್ ಬ್ರೇಕ್ ಆಗುತ್ತಾ?

    'ಕೆಜಿಎಫ್ 2', 'RRR' ರೆಕಾರ್ಡ್ ಬ್ರೇಕ್ ಆಗುತ್ತಾ?

    'ಅವತಾರ್ 2' ಆಧುನಿಕ ತಂತ್ರಜ್ಞಾನ ಅಳವಡಿಸಿ ಸಿನಿಮಾ ಮಾಡಲಾಗಿದೆ. 'ಅವತಾರ್' ನೋಡಿ ಥ್ರಿಲ್ ಆಗಿದ್ದರಿಗೆ 'ಅವತಾರ್ 2' ನೋಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಸದ್ಯ ಭಾರತದಲ್ಲಿ ಟಿಕೆಟ್ ಬೆಲೆ 310 ರೂ. ಯಿಂದ 1450 ರೂ.ವರೆಗೂ ಇದೆ. ಜೊತೆ ಈ ಸಿನಿಮಾ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆ ಸೇರಿದಂತೆ 6 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಭಾರತದ ಬಿಗ್‌ ಬಜೆಟ್‌ ಸಿನಿಮಾಗಳ ಕಲೆಕ್ಷನ್ ಹೇಗಿರುತ್ತೋ ಹಾಗೇ 'ಅವತಾರ್ 2' ಕಲೆಕ್ಷನ್ ಕೂಡ ಇರುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ವರ್ಷ 'ಕೆಜಿಎಫ್ 2' 1250 ಕೋಟಿ ರೂ. ಹಾಗೂ 'RRR' 1150 ಕೋಟಿ ರೂ. ಕಲೆ ಹಾಕಿತ್ತು. ಈ ಎರಡೂ ಸಿನಿಮಾಗಳ ದಾಖಲೆಗಳನ್ನು 'ಅವತಾರ್ 2' ಉಡೀಸ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

    ಥಿಯೇಟರ್‌ಗೆ ಬರೋರ ಸಂಖ್ಯೆಯಲ್ಲಿ ಏರಿಕೆ

    ಥಿಯೇಟರ್‌ಗೆ ಬರೋರ ಸಂಖ್ಯೆಯಲ್ಲಿ ಏರಿಕೆ

    ಕೊರೊನಾಗಿಂದ ಮುನ್ನ ಥಿಯೇಟರ್‌ಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಶೇ. 32-33 ಇತ್ತು. ಆದ್ರೀಗ ಅದು ಶೇ.27 ರಿಂದ 29ಕ್ಕೆ ಕುಸಿದಿದೆ. ಆದರೆ, 'ಅವತಾರ್ 2' ನಿಂದ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೊಸ ವರ್ಷದ ಮೊದಲ ಮೂರು ತಿಂಗಳಲ್ಲಿ ಇದರ ಪ್ರಮಾಣ ಶೇ. 32ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, 2023ರ ಜೂನ್-ಜುಲೈ ವೇಳೆಗೆ ಶೇ. 35 ರಿಂದ 40ರ ವರೆಗೆ ಏರಿಕೆ ಆಗಬಹುದು ಅನ್ನೋದು ಸದ್ಯದ ಲೆಕ್ಕಚಾರ. 2022 ರಿಂದ 2023 ಮೊದಲ ತಿಂಗಳು ಥಿಯೇಟರ್‌ಗೆ ಜನರನ್ನು ಸೆಳೆದರೆ, 'ಕೆಜಿಎಫ್ 2' ಹಾಗೂ 'RRR' ಬಾಕ್ಸಾಫೀಸ್ ದಾಖಲೆಗೆ ಕಂಟಕ ಗ್ಯಾರಂಟಿ.

    English summary
    Critics Expecting Avatar 2 Strong Recovery In Box Office May Beat KGF 2 And RRR, Know More.
    Sunday, December 4, 2022, 21:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X