ದುರಂತ ಅಂತ್ಯ ಕಂಡ 39 ವರ್ಷದ ಖ್ಯಾತ ಸ್ಟಾರ್..!
ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ಮಾನಸಿಕ ಖಿನ್ನತೆಗೆ ಮೊದಲ ಸ್ಥಾನ ಇದೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ.
ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಬದುಕೇ ಬೇಡ ಸತ್ತರೆ ಚೆಂದ ಎಂದುಕೊಂಡು ಆತುರದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದಕ್ಕೆ ಹಾಲಿವುಡ್ ಸ್ಟಾರ್ ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಸದ್ಯದ ಉದಾಹರಣೆ.

ಹೌದು, ಡೇಸ್ ಆಫ್ ಅವರ್ ಲೈವ್ಸ್, ಬೋಲ್ಡ್ ಆಂಡ್ ಬ್ಯೂಟಿಫುಲ್, ಜೇನ್ ದಿ ವರ್ಜಿನ್, ಹೀಗೆ ಕಿರುತೆರೆಯಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಸ್ ಎಂಜಲೀಸ್‌ನಲ್ಲಿರುವ ಇವರ ಮನೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮೊಬೈಲ್ ಫೋನ್ ಸೇರಿದಂತೆ ಡೈರಿಯನ್ನು ವಶ ಪಡಿಸಿಕೊಂಡಿದ್ದಾರೆ.
ಇನ್ನು ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಕೇವಲ ಕಿರುತೆರೆ ಮಾತ್ರವಲ್ಲ ಬೆಳ್ಳಿ ತೆರೆಯಲ್ಲಿ ಕೂಡ ಚಾಪು ಮೂಡಿಸಿದ್ದರು. ಮೈಕೆಲ್ ಡೌಗ್ಲಾಸ್ ಮತ್ತು ಮ್ಯಾಟ್ ಡ್ಯಾಮನ್ ಜೊತೆ ಬಿಹೈಂಡ್ ದಿ ಕ್ಯಾಂಡೆಲಾಬ್ರಾ ಚಿತ್ರದಲ್ಲಿ ಅಭಿನಯಿಸಿದ್ದರು. ಸದ್ಯ ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಅವರ ಈ ದುರಂತ ಅಂತ್ಯದಿಂದ ಅವರ ಅಭಿಮಾನಿಗಳಿಗೆ ಆಘಾತವಾಗಿದೆ. ಆ*ಹತ್ಯೆಯಾ, ಕೊ*ಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಪ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಅವರ ಮೃತದೇಹ ಪತ್ತೆಯಾಗಿದ್ದು ಮಾನಸಿಕ ಖಿನ್ನತೆಯಿಂದ ಮಾರ್ಟಿನ್ ಬಳಲುತ್ತಿದ್ದರಾ ಅಥವಾ ಆರ್ಥಿಕ, ವ್ಯೆಯಕ್ತಿಕ ಸಮಸ್ಯೆ ಏನಾದರೂ ಇತ್ತಾ ಎಂದು ಪೊಲೀಸರು ಸದ್ಯ ತನಿಖೆಯನ್ನು ನಡೆಸುತ್ತಿದ್ದಾರೆ.
ಇನ್ನು ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಅವರ ನಿಧನದಿಂದ ಆಘಾತಕ್ಕೊಳಗಾದ ಇವರ ಅಭಿಮಾನಿಗಳು ಈ ಸುದ್ದಿ ಸುಳ್ಳಾಗಿರಲಿ ಎಂದು ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಹಾಲಿವುಡ್‌ನ ಕಿರುತೆರೆ ಮತ್ತು ಬೆಳ್ಳಿತೆರೆಯ ಅನೇಕ ಸ್ಟಾರ್ಸ್ ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಅವರ ಅಕಾಲಿಕ ನಿಧನಕ್ಕೆ ಸಂತಾಪವನ್ನು ಸೂಚಿಸಿ ಕಂಬನಿ ಮಿಡಿಯುತ್ತಿದ್ದಾರೆ.
ಮಲ್ಲೋರ್ಕಾದಲ್ಲಿ ಜನಿಸಿದ್ದ ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಮೊಂಟಾನಾದಲ್ಲಿ ಬೆಳೆದಿದ್ದರು. ಆ ನಂತರ ಸ್ಪೇನ್‌ನಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲ್ ಆಗಿ ಕೆಲಸ ಮಾಡಿದ್ದ ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಆ ನಂತರ ಮ್ಯಾಡ್ರಿಡ್‌ಗೆ ವಲಸೆ ಹೋದರು. ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಅದೃಷ್ಟ ಇಲ್ಲಿಯೇ ಖುಲಾಯಿಸಿತ್ತು. ಅಲ್ಲಿ ಹಲವಾರು ನಾಟಕ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಮಾರ್ಟಿನ್ ಆ ನಂತರ ಅಭಿನಯದ ಅಕ್ಷರಾಭ್ಯಾಸ ಮಾಡಿ ಅಮೆರಿಕಾಗೆ ಬಂದರು. ಅಮೆರಿಕಾದ ಕಿರುತೆರೆ ಇವರನ್ನು ಮುಕ್ತವಾಗಿ ಒಪ್ಪಿಕೊಂಡಿತು. ಇವರ ಡೇರಿಂಗ್ ಡ್ರಾಮಾ ಎಂದೇ ಜಗದ್ವಿಖ್ಯಾತಿಯಾದ ಕಾರ್ಯಕ್ರಮ
ಡೇಸ್ ಆಫ್ ಅವರ್ ಲೈವ್ಸ್ ಇವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿತ್ತು.


Click it and Unblock the Notifications











